ಅಮೆರಿಕ ನೂಜೆರ್ಸಿಯ ಚರ್ಚ್ ಈಗ ಕೃಷ್ಣ ಮಂದಿರ
ಉಡುಪಿ, ಜೂನ್ 8: ಅಮೆರಿಕಾದ ನ್ಯೂಜೆರ್ಸಿಯ ಕಡಗೋಲು ಕೃಷ್ಣ ದೇವಸ್ಥಾನದ ಗರ್ಭಗುಡಿಯಲ್ಲಿ ಉಡುಪಿಯಿಂದ ಒಯ್ದ ಸಾಲಿಗ್ರಾಮ ಶಿಲೆಯ ಶ್ರೀಕೃಷ್ಣ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಗರ್ಭ ಗುಡಿಯ ವಿನ್ಯಾಸ ಮಾಡಲಾಗಿದೆ. ಕಾರ್ಕಳದಿಂದ ತಂದ ಕಪ್ಪು ಶಿಲೆಯಿಂದ ಪೀಠ ತಯಾರಿಸಲಾಗಿದೆ.

ಇದರ ಮೇಲೆ ಬರ್ಮಾ ತೇಗದ ಮರದಲ್ಲಿ ಶ್ರೀಕೃಷ್ಣ ಅವತಾರ ಲೀಲೆಯನ್ನು ಸೂಕ್ಷ್ಮವಾಗಿ ಬೇಲೂರು- ಹಳೇಬೀಡಿನ ಶಿಲ್ಪಕಲೆಯ ಮಾದರಿಯಲ್ಲಿ ಕೆತ್ತಲಾಗಿದೆ. ವಿಶಾಲ ಹೆಬ್ಬಾಗಿಲು, ನಲವತ್ತು ಅಡಿ ಎತ್ತರದ ಗರ್ಭಗುಡಿಯು ಸಂಪೂರ್ಣ ಮರದಿಂದ ನಿರ್ಮಾಣವಾಗಿದೆ.[ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ]
ಶ್ರೀಕೃಷ್ಣನಿಗೆ ಎರಡು ಕೆ.ಜಿಗೂ ಅಧಿಕ ತೂಕದ ಬೆಳ್ಳಿ ಕವಚವನ್ನು ರೂಪಾ ಅಯ್ಯರ್ ಹಾಗೂ ಮೂವತ್ತೈದು ವರ್ಷಗಳಿಂದ ನೆಲೆಸಿದ ಜನದರ್ಶನ ರಾವ್ ಶ್ರೀಕೃಷ್ಣನಿಗೆ ಚಿನ್ನದ ಕಣ್ಣು, ನಾಮದ ಆಭರಣಗಳನ್ನು ಅರ್ಪಿಸಿದ್ದಾರೆ.

ಪಾಳುಬಿದ್ದ ಚರ್ಚ್ ಗೆ ಜೀವಕಳೆ
ರಾಷ್ಟ್ರೀಯ ಹೆದ್ದಾರಿ ಸಮೀಪ ನಾಲ್ಕೂವರೆ ಎಕರೆಯಲ್ಲಿದ್ದ ನಿರುಪಯುಕ್ತ ಚರ್ಚ್ ವೊಂದನ್ನು ಖರೀದಿಸಿ ಶ್ರೀಕೃಷ್ಣ ದೇವಾಲಯವಾಗಿ ಪರಿವರ್ತಿಸಲಾಗಿದೆ. ಚರ್ಚ್ ಕಟ್ಟಡಕ್ಕೆ ಒಂದಿನಿತೂ ಹಾನಿ ಮಾಡದೆ, ಇರುವ ಸೌಕರ್ಯ ಬಳಸಲಾಗಿದೆ.
ನೆಲಕ್ಕೆ ಬಿಳಿ ಬಣ್ಣದ ಕಲ್ಲು ಹಾಸಿದ್ದು ತೂಗುದೀಪಗಳು ಒಳಾಂಗಣ ಆಕರ್ಷಣೆ ಹೆಚ್ಚಿಸಿದೆ. ಆರುನೂರು ಕಾರು ನಿಲ್ಲಲು ವ್ಯವಸ್ಥೆಯಿದ್ದು, ದೇವಳದ ಒಳಗೆ ಒಂದು ಸಾವಿರ ಜನ ಕುಳಿತುಕೊಳ್ಳಬಹುದು.












Click it and Unblock the Notifications