• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೈತ್ರಾ ಕುಂದಾಪುರ ನ್ಯಾಯಾಂಗ ಬಂಧನ ವಿಸ್ತರಿಸಿದ ಸುಳ್ಯ ನ್ಯಾಯಾಲಯ

|

ಮಂಗಳೂರು, ನವೆಂಬರ್.05: ಕುಕ್ಕೆ ಸುಬ್ರಹ್ಮಣ್ಯದ ಬೀದಿಕಾಳಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡದ 6 ಜನರಿಗೆ ಇಂದು ಸೋಮವಾರ ಸುಳ್ಯ ನ್ಯಾಯಾಲಯ ನವೆಂಬರ್.19 ರವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ಗುರು ಪ್ರಸಾದ್ ಮೇಲೆ ಹಲ್ಲೆ ಪ್ರಕರಣದ ವಿಚಾರಣೆ ನವೆಂಬರ್ 3 ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಆದರೆ ಅಂದು ಅನಾರೋಗ್ಯದ ನೆಪವೊಡ್ಡಿ ಚೈತ್ರಾ ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ದೀಪಾವಳಿ ವಿಶೇಷ ಪುರವಣಿ

ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು ಆಕೆಯನ್ನು ಆಂಬುಲೆನ್ಸ್ ಮೂಲಕ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹಾಗೂ ಜೈಲರ್ ಮತ್ತು ಚೈತ್ರಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವೈದ್ಯಕೀಯ ವರದಿಯೊಂದಿಗೆ ಆಗಮಿಸುವಂತೆ ಆದೇಶ ನೀಡಿದ್ದರು.

ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ: ಗುರುಪ್ರಸಾದ್ ಪೊಲೀಸರ ವಶಕ್ಕೆ

ಆದರೆ ಇಂದು ಚೈತ್ರಾ ಮಂಗಳೂರಿನಿಂದ ಸುಳ್ಯ ನ್ಯಾಯಾಲಯಕ್ಕೆ ಆಂಬುಲೆನ್ಸ್ ಮೂಲಕ ಆಗಮಿಸದೆ ಉಳಿದ ಆರೋಪಿಗಳಂತೆ ಪೊಲೀಸ್ ವಾಹನದಲ್ಲಿಯೇ ಆಗಮಿಸಿದ್ದಳು. ಆಕೆ ಆರೋಗ್ಯವಂತಳಾಗಿಯೇ ಇರುವುದನ್ನು ಗಮನಿಸಿದ ನ್ಯಾಯಾಧೀಶರು ಗರಂ ಆದರು.

 ಬುದ್ಧಿವಾದ ಹೇಳಿದ ನ್ಯಾಯಾಧೀಶರು

ಬುದ್ಧಿವಾದ ಹೇಳಿದ ನ್ಯಾಯಾಧೀಶರು

ನ್ಯಾಯಾಂಗ ಬಂಧನದಲ್ಲಿರುವಾಗ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲಿ ಮಲಗುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಚಾರ. ನಾಟಕವಾಡಬೇಡ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಈ ಹೊಡೆದಾಟ ಎಲ್ಲಾ ಬಿಟ್ಟು ಒಳ್ಳೆ ರೀತಿಯಲ್ಲಿ ಇರುವಂತೆ ಬುದ್ಧಿವಾದ ಹೇಳಿದರು.

 ಗುರುಪ್ರಸಾದ್ ಪಂಜಗೆ ಷರತ್ತುಬದ್ಧ ಜಾಮೀನು

ಗುರುಪ್ರಸಾದ್ ಪಂಜಗೆ ಷರತ್ತುಬದ್ಧ ಜಾಮೀನು

ಈ ನಡುವೆ ಹಲ್ಲೆಗೊಳಗಾಗಿದ್ದ ಗುರುಪ್ರಸಾದ್ ಪಂಜ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಗುರು ಪ್ರಸಾದ್ ಪಂಜ ಅವರ ಮೇಲೆ ಚೈತ್ರಾ ಕುಂದಾಪುರ ಮಾನಭಂಗ ಮತ್ತು ದರೋಡೆ ಆರೋಪದಡಿ ಪ್ರಕರಣ ದಾಖಲಿಸಿದ್ದರು . ಈ ಹಿನ್ನೆಲೆಯಲ್ಲಿ ಗುರು ಪ್ರಸಾದ್ ಅವರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಪಂಜ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಇದೆಲ್ಲಾ ಕೊಲೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ:ಚೈತ್ರಾ ಕುಂದಾಪುರ

 ಎರಡು ತಂಡಗಳ ನಡುವೆ ಬೀದಿಕಾಳಗ

ಎರಡು ತಂಡಗಳ ನಡುವೆ ಬೀದಿಕಾಳಗ

ಸುಬ್ರಹ್ಮಣ್ಯದಲ್ಲಿ ಅಕ್ಟೋಬರ್. 24 ರಂದು ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ವಿವಾದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಎರಡು ತಂಡಗಳ ನಡುವೆ ಬೀದಿಕಾಳಗ ನಡೆದಿತ್ತು. ಈ ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು . ಈ ಹಲ್ಲೆ ಖಂಡಿಸಿ ಸುಬ್ರಹ್ಮಣ್ಯ ನಾಗರಿಕರು ಅಕ್ಟೋಬರ್ 25 ರಂದು ಸ್ವಯಂಪ್ರೇರಿತ ಬಂದ್ ನಡೆಸಿದ್ದರು.

 ಅಕ್ಟೋಬರ್ 31 ರಂದು ಬಂಧಿಸಲಾಗಿತ್ತು

ಅಕ್ಟೋಬರ್ 31 ರಂದು ಬಂಧಿಸಲಾಗಿತ್ತು

ಈ ಬೀದಿ ಕಾಳಗ ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ಕುಂದಾಪುರ ತಂಡದ ವಿರುದ್ಧ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಚೈತ್ರಾ ಕುಂದಾಪುರ ಹಾಗೂ ಗುರುಪ್ರಸಾದ್ ಪಂಜ ಇಬ್ಬರೂ ಕೂಡ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಜೊತೆಗೆ ಬಂದ 6 ಮಂದಿಯನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿ ಚೈತ್ರಾ ಕುಂದಾಪುರ ಉಪಯೋಗಿಸಿದ ಇನ್ನೋವಾ ಕಾರನ್ನೂ ಪೋಲೀಸರು ವಶಕ್ಕೆ ಪಡೆದಿದ್ದರು. ಗುರುಪ್ರಸಾದ್ ವಿರುದ್ಧ ಚೈತ್ರಾ ಕುಂದಾಪುರ ಮಾನಭಂಗ ಯತ್ನ ಹಾಗೂ ದರೋಡೆ ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ಅವರನ್ನು ಪೊಲೀಸರು ಅಕ್ಟೋಬರ್ 31 ರಂದು ಬಂಧಿಸಿದ್ದರು.

ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ

English summary
Sullia JMFC Court extended judicial custody for Chaithra Kundapura and 6 others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X