Get Updates
Get notified of breaking news, exclusive insights, and must-see stories!

ಕರಾವಳಿ ಭಾಗದ ಜನರ ಬೇಡಿಕೆ ಈಡೇರಿಸಿದ ಕೊಂಕಣ ರೈಲ್ವೆ

ಮಂಗಳೂರು, ಡಿಸೆಂಬರ್ 11 : ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಗೆ ಕೊಂಕಣ ರೈಲ್ವೆ ಒಪ್ಪಿಗೆ ನೀಡಿದೆ. ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಡಿಸೆಂಬರ್ 17ರಿಂದ ರೈಲು ಸಂಚಾರ ನಡೆಸಲಿದೆ.

ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹಬ್ಬದ ವಿಶೇಷ ರೈಲು ಡಿಸೆಂಬರ್ 17 ರಿಂದ 31ರ ತನಕ ಸಂಚಾರ ನಡೆಸಲಿದೆ. ಲಾಕ್ ಡೌನ್ ಘೋಷಣೆ ಬಳಿಕ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

Mangaluru Central Lokmanyatilak Mumbai Daily Special Train From December 17

ಪ್ರತಿ ದಿನ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಾಗುತ್ತದೆ. ರೈಲು ನಂಬರ್ 02620/02619 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೇಳಾಪಟ್ಟಿ; 02620 ಮಂಗಳೂರು-ಮುಂಬೈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 2.25ಕ್ಕೆ ಹೊರಡಲಿದೆ. ಸುರತ್ಕಲ್ (3.10), ಮೂಲ್ಕಿ, ಉಡುಪಿ (3.48), ಕುಂದಾಪುರ (4.18), ಬೈಂದೂರು, ಭಟ್ಕಳ, ಮರುಡೇಶ್ವರ, ಹೊನ್ನಾವರ, ಕುಮುಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂವ್, ಕುಡಾಲ್, ರತ್ನಗಿರಿ, ಖೇಡ್, ಮನಗಾಂವ್, ಪನ್ವೇಲ್, ಥಾಣೆ ಮೂಲಕ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.

02619 ಸಂಖ್ಯೆಯ ರೈಲು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದೆ. ಬೈಂದೂರಿಗೆ ಮರುದಿನ ಮುಂಜಾನೆ 4.42ಕ್ಕೆ ಆಗಮಿಸಲಿದೆ. ಕುಂದಾಪುರ (5.10), ಉಡುಪಿ (5.45), ಸುರತ್ಕಲ್ (6.23) ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 7.30ಕ್ಕೆ ತಲುಪಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+