ಶತಾಯುಷಿ ತಾಯಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗಳ ಸಾವು

ಮಂಗಳೂರು, ಏಪ್ರಿಲ್ 03: ಶತಾಯುಷಿ ತಾಯಿಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭ ಮಗಳು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪಾಂಡೇಶ್ವರದ ನಿವಾಸಿ ಗ್ಲಾಡಿಸ್ ಡಿಸೋಜಾ (100) ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗ್ಲಾಡಿಸ್ ಡಿಸೋಜಾ ಅವರ 100 ನೇ ಹುಟ್ಟುಹಬ್ಬವನ್ನು ಅದ್ದೂರಿ ಯಾಗಿ ಆಚರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಕುಟುಂಬ ಎಲ್ಲಾ ಸದಸ್ಯರನ್ನು ಕರೆಸಲಾಗಿತ್ತು.

ತನ್ನ ಶತಾಯುಷಿ ತಾಯಿಯ ಹುಟ್ಟುಹಬ್ಬವನ್ನು ಆಚರಿಸಲು ದೂರದ ಕೆನಡಾದಲ್ಲಿ ನೆಲೆಸಿರುವ ಮಗಳು ಗ್ಲೋರಿಯಾ ಲೋಬೊ (75) ಸಹ ಆಗಮಿಸಿದ್ದರು. ನಿನ್ನೆ ನಡೆದ ಶತಾಯುಷಿ ಗ್ಲಾಡಿಸ್ ಡಿಸೋಜಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗಳು ಗ್ಲೋರಿಯಾ ಲೋಬೊ ಏಕಾಏಕಿ ಕುಸಿದು ಬಿದ್ದು ಬಿಟ್ಟರು.

centenarian mothers birthday turns tragic

ಕುಸಿದು ಬಿದ್ದ ಗ್ಲೋರಿಯಾ ಲೋಬೊ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗ್ಲೋರಿಯಾ ಲೋಬೊ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+