ಕಾಸರಗೋಡು-ಬೈಂದೂರು ನಡುವೆ ರೈಲು ಸಂಚಾರ ಭಾಗ್ಯ

ಕುಂದಾಪುರ, ಫೆ. 11: ಕಾಸರಗೋಡು-ಬೈಂದೂರು ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಬೈಂದೂರು ರೈಲು ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕರಾವಳಿ ಭಾಗದ ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ಉತ್ತಮ ಆದಾಯವಿದೆ. ಅದರಲ್ಲಿ ಬೈಂದೂರು ನಿಲ್ದಾಣವೂ ಒಂದಾಗಿದೆ. ಅಭಿವೃದ್ಧಿಯ ಮೂಲಕ ಉದ್ಯೋಗ ನೀಡಿಕೆ ಸುಲಭ. ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಇಂಥ ಕ್ರಮಗಳಳು ನೆರವಾಗುತ್ತವೆ ಎಂದು ಹೇಳಿದರು.[ಕ್ಯಾಶ್ ಆನ್ ಡೆಲಿವರಿ - ಈಗ ರೈಲ್ವೆ ಟಿಕೆಟ್‌ಗೂ ಬಂತು]

train

ಕಾಸರಗೋಡು- ಬೈಂದೂರು ರೈಲನ್ನು ಕಾಸರಗೋಡಿನ ಗುರುವಾಯಿನೂರಿಗೂ ವಿಸ್ತರಿಸಿ ಅಲ್ಲಿನ ಶ್ರೀ ಕ್ರಷ್ಣ ಮಂದಿರ ಹಾಗೂ ಬೈಂದೂರು ಸಮೀಪದ ಕೊಲ್ಲೂರು ಮೂಕಾಂಬಿಲಾ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅನೂಕೂಕ ಕಲ್ಪಿಸುವ ಈ ರೈಲನ್ನು 'ಮುರುಳಿ ಮೂಕಾಂಬಿಕಾ' ರೈಲು ಎಂದು ನಾಮಕರಣ ಮಾಡಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಉಪಯುಕ್ತ ರೈಲು: ಕೇಂದ್ರ ಸರ್ಕಾರ ಕಳೆದ ರೈಲ್ವೆಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಏಕೈಕ ರೈಲು ಇದಾಗಿದ್ದು, ಇದರ ಆರಂಭದೊಂದಿಗೆ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರಿಗೆ ದೇವಿಯ ದರ್ಶನ ಸುಲಭವಾಗಲಿದೆ.

train 1

ವೇಳಾಪಟ್ಟಿ ಮತ್ತು ನಿಲ್ದಾಣಗಳು
ಹೊಸ ರೈಲಿನ (ಗಾಡಿ ನಂಬರ್‌: 56666/ 56665) ವೇಳಾಪಟ್ಟಿ ಮತ್ತು ನಿಲ್ದಾಣಗಳನ್ನು ಪ್ರಕಟಿಸಲಾಗಿದ್ದು ಸಂಚಾರ ಆರಂಭವಾಗಿದೆ. ಕಾಸರಗೋಡಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ರೈಲು ಮಧ್ಯಾಹ್ನ 11.50ಕ್ಕೆ ಬೈಂದೂರು ತಲುಪಲಿದೆ. ಬೈಂದೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಸಂಜೆ 6.10ಕ್ಕೆ ಕಾಸರಗೋಡು ತಲುಪಲಿದೆ.[ಕಾಸರಗೋಡು-ಬೈಂದೂರು ರೈಲಿನ ವೇಳಾಪಟ್ಟಿ]

16 ಕೋಚ್‌ಗಳನ್ನು ಹೊಂದಿರುವ ಈ ಪ್ಯಾಸೆಂಜರ್‌ ರೈಲು ಕಾಸರಗೋಡು, ಬೈಂದೂರು ಸೇರಿ 18 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಬೈಂದೂರಿನಿಂದ ಹೊರಡುವ ರೈಲು ಬಿಜೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಇನ್ನಂಜೆ, ಪಡುಬಿದ್ರಿ, ನಂದಿಕೂರು, ಮೂಲ್ಕಿ, ಸುರತ್ಕಲ್‌, ತೋಕೂರು, ಮಂಗಳೂರು ಜಂಕ್ಷನ್‌, ತೊಕ್ಕೊಟ್ಟು, ಉಳ್ಳಾಲ, ಮಂಜೇಶ್ವರ, ಉಪ್ಪಳ ಹಾಗೂ ಕುಂಬ್ಳೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+