ವಿಟ್ಲದಲ್ಲಿ ಅಣ್ಣನಿಂದಲೇ ನಿರಂತರ ಅತ್ಯಾಚಾರ: 13 ವರ್ಷದ ಸಹೋದರಿ ಗರ್ಭಿಣಿ

ಮಂಗಳೂರು ಮಾರ್ಚ್ 09: ಬಾಲಕಿಯೊಬ್ಬಳು ತನ್ನ ಅಣ್ಣನಿಂದಲೇ ಗರ್ಭಿಣಿಯಾದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ಶಾಲೆಯಲ್ಲಿ ನಡೆದ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, 13 ವರ್ಷದ ವಿದ್ಯಾರ್ಥಿನಿ ನಾಲ್ಕು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ.

ವಿಟ್ಲ ಪರಿಸರದ ಶಾಲೆ ಒಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ವಿಭಿನ್ನವಾಗಿರುವುದು ಗಮನಕ್ಕೆ ಬಂದಿತ್ತು. ಅದರಿಂದ ಅನುಮಾನಕ್ಕೆ ಒಳಗಾದ ಆರೋಗ್ಯ ಕೇಂದ್ರದ ದಾದಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ತಪಾಸಣೆಗೆ ತೆರಳುವಂತೆ ಸೂಚಿಸಿದ್ದರು.

ದಾದಿ ಅವರ ಸೂಚನೆಯಂತೆ ಮಂಗಳೂರಿಗೆ ತಪಾಸಣೆಗೆ ತೆರಳಿದ್ದ ಸಂದರ್ಭದಲ್ಲಿ ಆ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ಸಂಗತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕಿ ಒಂದು ವರ್ಷದಿಂದ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.

Brother has raped 13-year-old sister for over a year

ಆಕೆಯ 17 ವರ್ಷ ಪ್ರಾಯದ ಸಹೋದರನೇ ಇದಕ್ಕೆ ಕಾರಣ ಎಂಬುದು ಬಂಹಿರಂಗವಾಗುತ್ತಿದ್ದಂತೆ ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಾಲಕಿಯ ಸಹೋದರನನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಯ ಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+