ಮಂಗಳೂರಿನಲ್ಲಿ ಸೈನಿಕರೊಂದಿಗೆ 'ಉರಿ' ಚಿತ್ರ ನೋಡುವ ಅವಕಾಶ

ಮಂಗಳೂರು, ಜನವರಿ 27: 2016ರ ಸೆಪ್ಟೆಂಬರ್ ನಲ್ಲಿ ಪಾಕ್ ಭಯೋತ್ಪಾದಕರು ಜಮ್ಮು ಕಾಶ್ಮೀರದ 'ಉರಿ' ಸೇನಾ ಕ್ಯಾಂಪ್ ಮೇಲೆ ನಡೆಸಿದ ರಣಹೇಡಿ ದಾಳಿ ಮತ್ತು ನಂತರ ಭಾರತೀಯ ಸೇನೆ ವೀರೋಚಿತವಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ರಹಸ್ಯವಾಗಿ ಹೆಣೆದ ಸರ್ಜಿಕಲ್ ಸ್ಟ್ರೈಕ್ ಸೇನಾ ಕಾರ್ಯಾಚರಣೆಯನ್ನು ತೆರೆಯ ಮೇಲೆ ಅನಾವರಣಗೊಳಿಸಿದ ಸೂಪರ್ ಹಿಟ್ ಚಿತ್ರ 'ಉರಿ' .

ಆದಿತ್ಯ ಧಾರ್ ನಿರ್ದೇಶನದ 'ಉರಿ- ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರ ದೇಶದಲ್ಲೆಲ್ಲಾ ಈಗಾಗಲೇ ಭಾರೀ ಸದ್ದುಮಾಡುತ್ತಿದೆ.ಇದು ಭಾರತೀಯ ಸೇನೆ ನಡೆಸಿದ ರಹಸ್ಯ ಕಾರ್ಯಾಚರಣೆ ಆಧರಿಸಿ ತೆಗೆದ ಚಿತ್ರ. ಭಾರತೀಯ ಸೇನೆ ನಡೆಸಿದ ಈ ವೀರೋಚಿತ ಹೋರಾಟದ ಕುರಿತಾದ ಚಿತ್ರವನ್ನು ದೇಶದ ನಿಜವಾದ ಹಿರೋಗಳಾದ ನಮ್ಮ ಸೈನಿಕರೊಂದಿಗೆ ವೀಕ್ಷಿಸಿದರೆ ಅದರ ರೋಮಾಂಚನವೇ ಬೇರೆ.

ಸೈನಿಕರ ಜೊತೆ 'ಉರಿ' ನೋಡುವ ಅವಕಾಶ, ಈಗಲೇ ಟಿಕೆಟ್ ಕಾಯ್ದಿರಿಸಿ

ಇದೀಗ 100 ಮಂದಿ ಸೈನಿಕರ ಜೊತೆ 'ಉರಿ' ಸಿನಿಮಾ ನೋಡುವ ಸದಾವಕಾಶ ಮಂಗಳೂರಿಗರಿಗೆ ದೊರಕಿದ್ದು, ನಗರದ ಭಾರತ್ ಮಾಲ್ ನ ಬಿಗ್ ಸಿನಿಮಾದಲ್ಲಿ ಜನವರಿ 29ರಂದು ಮಂಗಳವಾರ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

Bollywood film Uri can be watch with real heros

ದೇಶದಲ್ಲಿ ಸದ್ದು ಮಾಡಿರುವ ಉರಿ ಚಿತ್ರ ಪ್ರದರ್ಶನವನ್ನು ನಮೋ ಬ್ರಿಗೇಡ್ ಹಾಗೂ ಮೋದಿ ಅಭಿಮಾನಿಗಳು ಸೇರಿ ಮಂಗಳೂರಿನಲ್ಲಿ ಈ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ನಮ್ಮ ದೇಶದ ವೀರ ಸೈನಿಕರ ಯಶೋಗಾಥೆ ಸಾರುವ ಈ ಚಿತ್ರ ವನ್ನು ನಮ್ಮ ಊರಿನ ಸೈನಿಕರೊಂದಿಗೆ ನೋಡುವ ಅವಕಾಶ ಕಲ್ಪಿಸಿದೆ.

Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ

100 ಸೈನಿಕರೊಂದಿಗೆ 'ಹೌ ಇಸ್ ದಿ ಜೋಷ್ 'ಎಂದು ಕೇಳುವಾಗ 'ಹೈ ಸರ್ ' ಎಂದು ಹೇಳುವ ಮಜಾ ವೇ ಬೇರೆ . ಈ ಹಿನ್ನೆಲೆಯಲ್ಲಿ ಸೇನೆಯ ಮಾಜಿ ಸೈನಿಕರ ಜೊತೆ 'ಉರಿ' ಚಿತ್ರವನ್ನು ನೋಡುವಂತಹ ಅವಕಾಶವನ್ನು ಸೃಷ್ಟಿಸಿ ಜನರನ್ನು ಆಹ್ವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+