ಬೆಂಗಳೂರಿನ ವಿದ್ಯಾರ್ಥಿ ಬೆಳ್ತಂಗಡಿಯ ಕೆರೆಯಲ್ಲಿ ಶವವಾಗಿ ಪತ್ತೆ!

ಮಂಗಳೂರು, ಜುಲೈ.26: ಬೆಳ್ತಂಗಡಿಯ ಗುರುವಾಯನ ಕೆರೆಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ನಿನ್ನೆ ಬುಧವಾರ(ಜು.25) ಸಂಜೆ ಕೆರೆಯ ದಡದಲ್ಲಿ ವಿದ್ಯಾರ್ಥಿ ಬ್ಯಾಗ್ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಗುರುವಾರ ಕೆರೆಯಲ್ಲಿ ‌ವಿದ್ಯಾರ್ಥಿಯ ಮೃತದೇಹ ಕಾಣಿಸಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಈ ಗುರುವಾಯನಕೆರೆ ಇದೆ. ಮೃತ ವಿದ್ಯಾರ್ಥಿಯನ್ನು ಯಶವಂತ್ ಸಾಯಿ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಐಟಿಐ ವಿದ್ಯಾಮಂದಿರ ಹೈಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿ ಎಂದು ಹೇಳಲಾಗಿದೆ.

Body of a student was found at Guruvayana Lake in Belthangady

ಸಂಜೆ ಕೆರೆ ಗುರುವಾಯನಕೆರೆಯ ದಡದಲ್ಲಿ ವಿದ್ಯಾರ್ಥಿ ಬ್ಯಾಗ್ ಪತ್ತೆಯಾಗಿತ್ತು. ಸಂಶಯಗೊಂಡ ಸ್ಥಳೀಯರು, ಅಗ್ನಿಶಾಮಕದಳದ ಸಿಬ್ಬಂದಿಗಳು ವಿದ್ಯಾರ್ಥಿಯ ಹುಡುಕಾಟ ನಡೆಸಿದ್ದರು.

Body of a student was found at Guruvayana Lake in Belthangady

ಕೆರೆಯ ದಡದಲ್ಲಿ ದೊರೆತಿದ್ದ ಬ್ಯಾಗ್ ನಲ್ಲಿ ವಿದ್ಯಾರ್ಥಿಯ ಶಾಲೆ ಐಡಿ ಕಾರ್ಡ್, ಆಧಾರ್ ಕಾರ್ಡ್, ಬೆಂಗಳೂರಿನಿಂದ ಮಂಗಳೂರಿಗೆ ಬಂದಿರುವ ಬಸ್ ಟಿಕೆಟ್ ಕೂಡ ಪತ್ತೆಯಾಗಿತ್ತು.

Body of a student was found at Guruvayana Lake in Belthangady

ಆದರೆ ಬೆಂಗಳೂರಿನ ವಿದ್ಯಾರ್ಥಿ ಇಲ್ಲಿಗೆ ಬಂದಿದ್ದಾದರೂ ಏಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+