ಮಂಗಳೂರು ಚಲೋ, ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
Recommended Video

ಮಂಗಳೂರು, ಸೆಪ್ಟೆಂಬರ್ 7 : ಜ್ಯೋತಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೈಕ್ ಜಾಥಾ ನಡೆಸಲು ಬಿಜೆಪಿ ನಾಯಕರು ಸಿದ್ಧವಾಗುತ್ತಿದ್ದಾರೆ. ಪೊಲೀಸರು ಕಾರ್ಯಕರ್ತರು ತಂದಿದ್ದ ಬೈಕ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಗ್ಯಾಲರಿ : ಕ್ಲೈಮ್ಯಾಕ್ಸ್ ಹಂತ ತಲುಪಿದ 'ಮಂಗಳೂರು ಚಲೋ'
ಪೊಲೀಸರು ಜಾಥಾ ನಡೆಸಲು ಅವಕಾಶ ನೀಡದ ಕಾರಣ ಬಿಜೆಪಿ ನಾಯಕರು ರಸ್ತೆಯಲ್ಲಿಯೇ ಕುಳಿತು ಧರಣಿ ಆರಂಭಿಸಿದ್ದಾರೆ. ಜಾಥಾ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಪ್ರತಿಭಟನಾ ಸಭೆ : 'ಎದ್ದೇಳು ಸಿದ್ದರಾಮಯ್ಯ, ಎದ್ದೇಳು ಸಿದ್ದರಾಮಯ್ಯ....ಬೇಗ ಎದ್ದೇಳಪ್ಪ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು' ಎಂಬ ಘೋಷಣೆಯೊಂದಿಗೆ ಕರ್ನಾಟಕ ಬಿಜೆಪಿ ಮಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದೆ.
ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾದ 'ಮಂಗಳೂರು ಚಲೋ' ನಡೆಯುತ್ತಿದ್ದು, ಮಂಗಳೂರು ನಗರದಲ್ಲಿ ಬಿಜೆಪಿ ನಾಯಕರು ಶಕ್ತಿ ಪ್ರದರ್ಶನ ಮಾಡಿದರು. ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬುಧವಾರ ಸೇರಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ, ಸಂಸದರಾದ ನಳೀನ್ ಕುಮಾರ್ ಕಟೀಲ್, ಶೋಭಾಕರಂದ್ಲಾಜೆ, ಆರ್.ಅಶೋಕ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿವಿಧ ನಾಯಕರು ರಾಜ್ಯ ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ವಾಗ್ದಾಳಿ ನಡೆಸಿದರು. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ಅನುದಾನ ಕಡಿತಗೊಳ್ಳಲು ದಕ್ಷಿಣ ಕನ್ನಡದ ಸಚಿವರೇ ಕಾರಣ, ಅವರು ಮಕ್ಕಳ ಅನ್ನ ಕಸಿದಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ : 'ವೇಣುಗೋಪಾಲ್ ಕರ್ನಾಟಕಕ್ಕೆ ಬಂದಿದ್ದು ಕೋಮು ದಳ್ಳುರಿ ಹಚ್ಚಲು. ನಿಮ್ಮ ರಾಜಕೀಯ ದೊಂಬರಾಟ ಬಹಳ ದಿನ ನಡೆಯುವುದಿಲ್ಲ ಸಿದ್ದರಾಮಯ್ಯ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದ ಗೆಟ್ಟಿದೆ. ಸಚಿವ ಜಾರ್ಜ್ ರಾಜೀನಾಮೆ ಪಡೆಯಿರಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ಜಗದೀಶ್ ಶೆಟ್ಟರ್ : 'ಗಣಪತಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟಿದೆ. ಸಿಐಡಿ ಮೂಲಕ ಸರಕಾರವೇ ಜಾರ್ಜ್ ಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಈಗ ಸಿಬಿಐ ತನಿಖೆಯಿಂದ ಇಡೀ ಸರಕಾರದ ಹುಳುಕು ಹೊರಬರಲಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಕಾಂಗ್ರೆಸ್ ಅಂತ್ಯ ಸನ್ನಿಹಿತವಾಗುತ್ತಿದೆ' ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕೆ.ಎಸ್.ಈಶ್ವರಪ್ಪ : 'ರಾಹುಲ್ ಗಾಂಧಿ ಒಬ್ಬ ಬಚ್ಚಾ. ಪಪ್ಪುಗೆ ಆರ್‌ಎಸ್‌ಎಸ್, ಭಾರತ ಮಾತೆ ಬಗ್ಗೆ ಗೊತ್ತಿಲ್ಲ. ಅವರ ತಾಯಿ ಸೋನಿಯಾ ಗಾಂಧಿಗೂ ಆರ್‌ಎಸ್ಎಸ್ ಬಗ್ಗೆ ಗೊತ್ತಿಲ್ಲ. ಆರ್‌ಎಸ್‌ಎಸ್ ಮುಗಿಸಲು ಯಾರಿಗೂ ಗೊತ್ತಿಲ್ಲ. 9 ನವಗ್ರಹಗಳಲ್ಲಿ ರಾಹುಲ್ ಗಾಂಧಿ ಒಂದು. ಅದರ ಮಾತು ಕೇಳಿ-ಕೇಳಿ ಕಾಂಗ್ರೆಸ್ ಸರ್ವನಾಶ ಆಗಿದೆ' ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
* ಆರ್.ಅಶೋಕ್ : 'ಎದ್ದೇಳು ಸಿದ್ದರಾಮಯ್ಯ, ಎದ್ದೇಳು ಸಿದ್ದರಾಮಯ್ಯ. ಬೇಗ ಎದ್ದೇಳಪ್ಪ ಎಂದು ನಾವು ಹೇಳಬೇಕಾಗಿದೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಅಲ್ಲಿ ಗೃಹ ಸಚಿವರೇ ಇಲ್ಲ. ಕೆಂಪಯ್ಯ, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಒಂದೊಂದು ಬಾಗಿಲು ಆಗಿದ್ದಾರೆ. ರಾಜ್ಯದ ಬೀದಿ-ಬೀದಿಗಳಲ್ಲಿ ಹತ್ಯೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಎದ್ದೇಳುತ್ತಿಲ್ಲ' ಎಂದು ಲೇವಡಿ ಮಾಡಿದರು.
* ಸಂಸದೆ ಶೋಭಾ ಕರಂದ್ಲಾಜೆ : 'ಮಂಗಳೂರು ಚಲೋ ಹೊರಟಿದ್ದ ನಮನ್ನು ಪೊಲೀಸರು ತಡೆದಿದ್ದಾರೆ. ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಮೊದಲು ತಡೆಯಲಿ' ಎಂದು ಸವಾಲು ಹಾಕಿದರು.
ಪ್ರತಾಪ್ ಸಿಂಹ : 'ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಬೇಕಾಗಿದ್ದ ಸರ್ಕಾರ 1,600 ಕಾರ್ಯಕರ್ತರ ವಿರುದ್ಧ 175 ಪ್ರಕರಣಗಳನ್ನು ವಜಾ ಮಾಡಿದ್ದಾರೆ. ಪ್ರತಿ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕೈವಾಡವಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ರಂಝಾನ್ ರೈ ಎಂದು' ಪ್ರತಾಪ್ ಸಿಂಹ ಲೇವಡಿ ಮಾಡಿದರು.
ಅರವಿಂದ ಲಿಂಬಾವಳಿ : 'ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ರಮಾನಾಥ ರೈ ರಾಜೀನಾಮೆ ನೀಡೋಕೆ ಯೋಗ್ಯರಲ್ಲ. ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇಂದು ಅವರು ಮಾಡುತ್ತಿರುವುದು ಸಾಮರಸ್ಯ ಯಾತ್ರೆಯಲ್ಲ. ಕಾಂಗ್ರೆಸ್ಸಿನ ಶವಯಾತ್ರೆ' ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ವಾಗ್ದಾಳಿ ಮಾಡಿದರು.












Click it and Unblock the Notifications