ಕುಳೂರು ಬಳಿ ಓವರ್ ಟೇಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕರು

ಮಂಗಳೂರು, ನವೆಂಬರ್.23: ಅತಿ ವೇಗವಾಗಿ ಬಂದ ಬೈಕ್ ಸವಾರರಿಬ್ಬರು ಓವರ್ ಟೇಕ್ ಮಾಡುವ ಭರದಲ್ಲಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಕುಳೂರಿನಲ್ಲಿ ನಡೆದಿದೆ.

ಇಲ್ಲಿನ ಪಲ್ಗುಣಿ ನದಿ ಬಳಿ ಎರಡು ಬೈಕ್ ಗಳು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್ ಸವಾರರು ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರರನ್ನು ವಿಜೇಷ್ (22) ಹಾಗು ನಿಖಿಲ್ (22) ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಬಂಗ್ರ ಕೂಳೂರಿನಿಂದ ಬಜಾಜ್ ಅವೆಂಜರ್ ಬೈಕ್ ನಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ನಿತಿನ್ ಹಾಗೂ ವಿಜೇಷ್ ಅದೇ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ತಪ್ಪಿ ವಿಜೇಷ್, ನಿಖಿಲ್ ನದಿಗೆ ಬಿದ್ದರೆ, ಮತ್ತೊಂದು ಬೈಕ್ ನಲ್ಲಿದ್ದ ಹಿತೇಶ್ ಹಾಗೂ ನಿತಿನ್ ಕುಮಾರ್ ನದಿ ಪಕ್ಕಕ್ಕೆ ಬಿದ್ದಿದ್ದಾರೆ.

Bike accident in Mangaluru, Two dead

ಘಟನೆ ನಡೆದ ಸ್ಥಳಕ್ಕೆ ಕಾವೂರು ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+