ಕರಾವಳಿ-ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ

ಮಂಗಳೂರು, ಮಾರ್ಚ್‌ 04: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವ ಸಂಪರ್ಕ ಕಲ್ಪಿಸುವ ಎರಡು ರೈಲುಗಳ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಸಂಚಾರ ನಡೆಸುವ ಜನರಿಗೆ ಈ ರೈಲು ಸೇವೆ ಸಹಕಾರಿಯಾಗಿದೆ. ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಬಳಿಕ ಬೆಂಗಳೂರು ಕರಾವಳಿ ನಡುವೆ ಸಂಚಾರ ನಡೆಸುವ ರೈಲುಗಳಲ್ಲಿ ಈ ಮಾದರಿ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಎರಡು ರೈಲುಗಳನ್ನು ಸಂಪೂರ್ಣ ಎಲ್‌ಹೆಚ್‌ಬಿ ಕೋಚ್‌ಗಳಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಮೇ ತಿಂಗಳಿನಿಂದ ರೈಲುಗಳು ಎಲ್‌ಹೆಚ್‌ಬಿ ಕೋಚ್‌ಗಳಾಗಿ ಸಂಚಾರವನ್ನು ನಡೆಸಲಿವೆ.

Bengaluru Karavali Trains To Run With LHB Coaches From May

ಕೆಎಸ್ಆರ್‌ ಬೆಂಗಳೂರು-ಕಣ್ಣೂರು-ಕೆಎಸ್ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ಎಸ್ಎಂಟಿವಿ ಬೆಂಗಳೂರು-ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ವಯಾ ಮಂಗಳೂರು ಸೆಂಟ್ರಲ್ ಬೆಂಗಳೂರು-ಕರಾವಳಿ ನಡುವೆ ಸಂಚಾರ ನಡೆಸುವ ರಾತ್ರಿಯ ರೈಲುಗಳಾಗಿದೆ.

ರೈಲುಗಳ ವಿವರ: ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಎಲ್‌ಹೆಚ್‌ಬಿ ಕೋಚ್‌ಗಳಾಗಿ ಮೇ 5ರಿಂದ ಸಂಚಾರ ನಡೆಸಲಿವೆ. ರೈಲು ನಂಬರ್ 16586 ಮುರುಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಎಲ್‌ಹೆಚ್‌ಬಿ ಕೋಚ್‌ಗಳಾಗಿ ಮೇ 6 ರಿಂದ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ರೈಲು ನಂಬರ್ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಮೇ 7 ರಿಂದ ಎಲ್‌ಹೆಚ್‌ಬಿ ಕೋಚ್‌ಗಳಾಗಿ ಮತ್ತು ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್‌ ಬೆಂಗಳೂರು ಮೇ 8ರಿಂದ ಎಚ್‌ಹೆಚ್‌ಬಿ ಕೋಚ್‌ಗಳಾಗಿ ಸಂಚಾರ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.

ಎಲ್‌ಹೆಚ್‌ಬಿ ಕೋಚ್‌ ಆಗಿ ಬದಲಾವಣೆಯಾದ ಬಳಿಕ ರೈಲುಗಳ ಬೋಗಿಯ ಸಂಯೋಜನೆಯಲ್ಲಿ ಕೆಲವು ಬದಲಾವಣೆಯಾಗಲಿದೆ. ರೈಲು ಒಂದು ಮೊದಲ ದರ್ಜೆಯ ಎಸಿ, ಎರಡು ಟು-ಟೈರ್‌ ಎಸಿ, 4 ತ್ರಿ-ಟೈರ್ ಎಸಿ, 7 ದ್ವಿತೀಯ ದರ್ಜೆ ಸ್ಲೀಪರ್, 4 ಸಾಮಾನ್ಯ ದ್ವಿತೀಯ ದರ್ಜೆ, ಎರಡು ಜನರೇಟರ್ ಕಾರ್ ಕೋಚ್‌ ಸೇರಿ 20 ಬೋಗಿಗಳನ್ನು ಹೊಂದಿರಲಿದೆ.

ಸದ್ಯ ರೈಲು ಐಸಿಎಫ್‌ ಕೋಚ್‌ಗಳೊಂದಿಗೆ ಸಂಚಾರ ನಡೆಸುತ್ತಿದೆ. ಒಟ್ಟು 22 ಬೋಗಿಗಳಿವೆ. 1 ಫಸ್ಟ್ ಕ್ಲಾಸ್ ಎಸಿ, 2 ಟು-ಟೈರ್ ಎಸಿ, 3 ತ್ರಿ-ಟೈರ್ ಎಸಿ,10 ದ್ವಿತೀಯ ದರ್ಜೆ ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, ಎರಡು ಲಗೇಜ್ ಕಂ ಬ್ರೇಕ್‌ ವ್ಯಾನ್‌ಗಳನ್ನು ಹೊಂದಿದೆ.

ಮತ್ಸ್ಯಗಂಧ ಎಕ್ಸ್‌ಪ್ರೆಸ್: ಭಾರತೀಯ ರೈಲ್ವೆ ಕೆಲವು ದಿನಗಳ ಹಿಂದೆ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಿತ್ತು. ಕರಾವಳಿ ಭಾಗದ ಪ್ರಸಿದ್ಧ ರೈಲು 'ಮತ್ಸ್ಯಗಂಧ ಎಕ್ಸ್‌ಪ್ರೆಸ್' ಅನ್ನು ಎಲ್‌ಹೆಚ್‌ಬಿ ಕೋಚ್‌ಗಳಾಗಿ ಪರಿವರ್ತನೆ ಮಾಡಲಾಗಿತ್ತು. ಈ ರೈಲು ಕರ್ನಾಟಕ ಕರಾವಳಿ ಮತ್ತು ಮುಂಬೈ ಅನ್ನು ಸಂಪರ್ಕಿಸುತ್ತದೆ.

ಪ್ರಯಾಣಿಕರು ಹಲವಾರು ವರ್ಷಗಳಿಂದ ರೈಲನ್ನು ಎಲ್‌ಹೆಚ್‌ಬಿ ಕೋಚ್‌ಗಳಾಗಿ ಪರಿವರ್ತನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ರೈಲಿನ ಸಂಪೂರ್ಣ ಕೋಚ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ಅಳವಡಿಕೆ ಮಾಡಿ, ಫೆಬ್ರವರಿ 17ರಿಂದ ಸಂಚಾರ ನಡೆಸಲು ಅನುಕೂಲ ಮಾಡಿಕೊಡಲಾಗಿತ್ತು.

ಎಲ್‌ಹೆಚ್‌ಬಿ ಕೋಚ್‌ಗಳಿದ್ದರೆ ರೈಲು ಅಪಘಾತವಾದರೂ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ. ಕೋಚ್‌ಗಳು ಪಲ್ಟಿ ಆಗದೆ ZIGZAG ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ. ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ವಿನ್ಯಾಸದ ಶೌಚಾಲಯ ಈ ರೈಲಿನಲ್ಲಿನಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+