ವೈದ್ಯರು ಧರಿಸುವ ಬಿಳಿ ಕೋಟು ನಿಷೇಧ
ಮಂಗಳೂರು, ಜುಲೈ, 22 : ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದೆ ಆಸ್ಪತ್ರೆಗಳಲ್ಲಿ ಬಿಳಿ ಕೋಟು ಧರಿಸುವುದನ್ನು ಭಾರತೀಯ ಆರೋಗ್ಯ ಆಡಳಿತ ಮಂಡಳಿ ನಿಷೇಧಿಸಿದೆ.
ಬಿಳಿ ಶುಭ್ರತೆ, ಶಾಂತಿ, ಉತ್ತಮ ಆರೋಗ್ಯದ ಪ್ರತೀಕ ಎಂದೆಲ್ಲಾ ಹೇಳಿಕೊಳ್ಳುತ್ತಾ ಬಂದಿದ್ದೇವೆ. ಆದರೆ ವೈದ್ಯರು ಧರಿಸುವ ಬಿಳಿ ಕೋಟು ಹಲವಾರು ಸೋಂಕುಗಳನ್ನು ಹರಡುತ್ತದೆ. ಇದರಿಂದ ರೋಗಿಗಳ ಆರೋಗ್ಯ ಇನ್ನಷ್ಟು ಹದಗೆಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.[ಮೊದಲ ಬಾರಿ ವೈದ್ಯ ಶಿಕ್ಷಣ ಪ್ರಾರಂಭಿಸಿದ ಐಐಟಿ]

ಆಸ್ಪತ್ರೆಗಳು ಒಮ್ಮೆ ಸ್ಥಾಪಿತವಾದರೆ ಅದನ್ನು ಬದಲಾಯಿಸುವ ಪ್ರಮೇಯವೇ ಬರುವುದಿಲ್ಲ. ನಿತ್ಯ ಬಿಳಿ ಕೋಟು ಧರಿಸಿ ಬರುವ ವೈದ್ಯರು ಹಲವು ಬಾರಿ ಹೊರಗೆ ತೆರಳುವ ಪರಿಸ್ಥಿತಿ ಬರುತ್ತದೆ. ಕೋಟು ಧರಿಸಿ ಹೊರಗೆ ಹೋಗಿ ವಾಪಾಸು ಬರುವಾಗ ಹಲವಾರು ರೋಗಾಣುಗಳು ಆಸ್ಪತ್ರೆ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನು ಕೆಲವು ನಗರಗಳಲ್ಲಿ ಕೆಲವು ಕಿರಿಯ ವೈದ್ಯರು ಬಿಳಿ ಕೋಟಿನಲ್ಲೇ ಶಾಂಪಿಂಗ್, ಸಿನಿಮಾ ಹೀಗೆ ನಾನಾ ಕಾಡೆ ಓಡಾಡಿ ಬರುತ್ತಾರೆ. ಅಲ್ಲದೇ ವಾರಕ್ಕೆ ಒಂದು ಬಾರಿ ಮಾತ್ರ ಕೋಟನ್ನು ತೊಳೆಯಲು ಅವಕಾಶ ಸಿಗುತ್ತದೆ. ಹಾಗಾಗಿ ಬಿಳಿ ಕೋಟನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಎಡ್ಮಂಡ್ ಫರ್ನಾಂಡಿಸ್ ಹೇಳಿದ್ದಾರೆ.












Click it and Unblock the Notifications