ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಭಜರಂಗದಳ ವಿರೋಧ

ಮಂಗಳೂರು, ಅಕ್ಟೋಬರ್ 27 : ಪ್ರತಿ ವರ್ಷ ನವೆಂಬರ್ 10ರಂದು ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜನ್ಮ ದಿನವನ್ನು ಆಚರಣೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಭಜರಂಗ ದಳ ವಿರೋಧ ವ್ಯಕ್ತಪಡಿಸಿದೆ. 'ಕನ್ನಡ ಭಾಷಾ ದ್ವೇಷಿಯಾಗಿದ್ದ' ಟಿಪ್ಪು ಜನ್ಮ ದಿನಾಚರಣೆ ಸರ್ಕಾರ ಏಕೆ ಹಣ ಬಿಡುಗಡೆ ಮಾಡಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಜರಂಗ ದಳದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕ್ಷೇತ್ರೀಯ ಸಂಚಾಲಕ ಸೂರ್ಯನಾರಾಯಣ ಅವರು 'ಟಿಪ್ಪು ಒಬ್ಬ ರಾಷ್ಟ್ರ ದ್ರೋಹಿ, ಹಿಂದೂ ದ್ರೋಹಿ ಹಾಗೂ ಸಮಾಜ ದ್ರೋಹಿ ವ್ಯಕ್ತಿಯಾಗಿದ್ದ. ಬಲಾತ್ಕಾರದಿಂದ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ' ಎಂದು ಆರೋಪಿಸಿದರು. [ಟಿಪ್ಪು ಕತ್ತಿ ಹಿಡಿಯಲು ಹೊರಟ ರಜನಿಗೆ ಚುಚ್ಚಿದ್ದು ಯಾರು?]

tipu sultan

'ಟಿಪ್ಪು ಓರ್ವ ಮುಸ್ಲಿಂ ಎಂಬ ಕಾರಣಕ್ಕಾಗಿ ನಮ್ಮ ವಿರೋಧವಲ್ಲ. ಟಿಪ್ಪು ಎಸಗಿದ ಕೃತ್ಯಗಳನ್ನು ಪರಿಗಣಿಸಿ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಟಿಪ್ಪು ಬದಲು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಶಿಶುನಾಳ ಶರೀಫ್‌ ಅವರ ಜನ್ಮದಿನವನ್ನು ಸರ್ಕಾರ ಆಚರಣೆ ಮಾಡಿದರೆ ನಾವು ಸ್ವಾಗತಿಸುತ್ತೇವೆ' ಎಂದು ಸೂರ್ಯನಾರಾಯಣ ಅವರು ಹೇಳಿದರು. [ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರೇಕೆ?]

ಕೆಲವು ದಿನಗಳ ಹಿಂದೆ ಆದೇಶ : ಪ್ರತಿ ವರ್ಷ ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಕಳೆದವಾರ ಅಧಿಕೃತ ಆದೇಶ ಹೊರಡಿಸಿದೆ. ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ತಾಲೂಕು ಕೇಂದ್ರಕ್ಕೆ 25 ಸಾವಿರ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. [ಟಿಪ್ಪು ಸುಲ್ತಾನ್ ವಿವಿ ರಾಜ್ಯದಲ್ಲೆಲ್ಲೂ ಸ್ಥಾಪಿಸುವಂತಿಲ್ಲ]

2014ರಲ್ಲಿ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ಅವರು ಟಿಪ್ಪು ಸುಲ್ತಾನ್ ಬಗ್ಗೆ ಬರೆದ ಪುಸ್ತಕ ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತದೆ ಎಂದು ಘೋಷಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+