ಮಂಗಳೂರು: ಕಲ್ಲೇಟಿಗೆ ಚಿನ್ನ ಬಿಟ್ಟು ಬ್ಯಾಂಕ್ ಕಳ್ಳರು ಪರಾರಿ
ಮಂಗಳೂರು, ಜೂನ್ 23 : ಜಿಲ್ಲೆಯ ತಲಪಾಡಿ ಕೆ.ಸಿ ರಸ್ತೆಯಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ದರೋಡೆಗೆ ಉತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಹೆಲ್ಮೆಟ್ ಧರಿಸಿಕೊಂಡು ಬ್ಯಾಂಕ್ ಒಳಗೆ ನುಗ್ಗಿದ ದರೋಡೆಕೋರರು, ಸಿಬ್ಬಂದಿಗೆ ಚಾಕು ತೋರಿಸಿ ಚಿನ್ನಾಭರಣವನ್ನು ದೋಚಲು ಯತ್ನಿಸಿದ್ದಾರೆ.

ಕೋಟ್ಯಾಂತರ ರು. ಬೆಲೆಬಾಳುವ ಸುಮಾರು 20 ಕೆ.ಜಿ ಚಿನ್ನವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ವೇಳೆ ಬ್ಯಾಂಕ್ ಸಿಬ್ಬಂದಿ ಓರ್ವ ಕಲ್ಲು ಎಸೆದಿದ್ದಾರೆ. ಇದರಿಂದ ಭಯಗೊಂಡು ಖದೀಮರು ಚಿನ್ನ ತುಂಬಿದ್ದ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಡಿಸಿಪಿ ಹನುಮಂತ್ರಾಯ, ಎಸಿಪಿ ಶೃತಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.











Click it and Unblock the Notifications