ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭರತ್ ಪೊಲೀಸ್ ವಶಕ್ಕೆ
ಮಂಗಳೂರು, ಜುಲೈ 1: ಬೆಂಜನಪದವಿನ ಎಸ್ ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭರತ್ ಕುಮ್ಡೇಲು ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ಭರತ್ ಕುಮ್ಡೇಲು ಮತ್ತು ದಿವ್ಯರಾಜ್ ಶೆಟ್ಟಿ ಕೊಲೆಗೆ ಸಂಚು ರೂಪಿಸಿದವರು.
ಅಶ್ರಫ್ ಕೊಲೆಗೆ ಸಂಚು ರೂಪಿಸಲು ಆರೋಪಿಗಳ ತಂಡ ಒಂದು ತಿಂಗಳ ಹಿಂದೆ ಹಲವೆಡೆ ಚರ್ಚಿಸಿ ಅಶ್ರಫ್ ನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿವೆ. ಬಳಿಕ ಜೂನ್ 21ರಂದು ಅಶ್ರಫ್ ಬೆಂಜನಪದವಿಗೆ ಬಂದಿರುವ ಮಾಹಿತಿಯನ್ನು ಖಚಿತಪಡಿಸಿಕೊಂಡು ತಲವಾರು ಸಹಿತ ಮಾರಕಾಸ್ತ್ರಗಳಿಂದ ಬೆಂಜನಪದವಿಗೆ ಬಂದು, ಅಶ್ರಫ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಮ್ಡೇಲು ನಿವಾಸಿಗಳಾದ ಪವನ್ ಕುಮಾರ್ ಯಾನೆ ಪುಂಡ (24), ರಂಜಿತ್ (28), ತುಂಬೆಯ ಕನೆಮಾರು ಮನೆ ನಿವಾಸಿ ಸಂತೋಷ್ ಯಾನೆ ಸಂತು (23), ತುಂಬೆಯ ಬೊಳ್ಳಾರಿ ನಿವಾಸಿ ಶಿವಪ್ರಸಾದ್ ಆನೆ ಶಿವು (24), ತೆಂಕಬೆಳ್ಳೂರಿನ ಅಭಿನ್ ರೈ ಯಾನೆ ಅಭಿ (23) ಹಾಗೂ ಭರತ್ ಕುಮ್ಡೇಲು ಬಂಧಿತ ಆರೋಪಿಗಳಾಗಿದ್ದಾರೆ.
ಇದೀಗ ಕೊಲೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿದಂತಾಗಿದೆ.












Click it and Unblock the Notifications