ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಸ್ಎಂ ಕೃಷ್ಣಗೆ ಅವಮಾನ
ಮಂಗಳೂರು, ಮೇ 8: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ಮುಖ್ಯಮಂತ್ರಿಗಳ ಸಾಲಿನಲ್ಲಿ ಎಸ್ ಎಂ ಕೃಷ್ಣರ ಭಾವ ಚಿತ್ರ ಈಗಲೂ ಇದೆ. ಆದರೆ ಇತ್ತೀಚೆಗೆ ಕೃಷ್ಣ ಪಕ್ಷಕ್ಕೆ ದ್ರೋಹ ಬಗೆದು ಕಮಲ ಪಾಳಯ ಸೇರಿಕೊಂಡಿದ್ದರಿಂದ ಕೋಪೋದ್ರಿಕ್ತಗೊಂಡು ಕಾರ್ಯಕರ್ತರು ಕೃಷ್ಣ ಮುಖದ ತುಂಬೆಲ್ಲಾ ಗೀಚಿ, ಪೋಸ್ಟರ್ ಹರಿದು ಹಾಕಿ, ಅಶ್ಲೀಲವಾಗಿ ನಿಂದಿಸಿದ್ದಾರೆ.
ಎಸ್.ಎಂ ಕೃಷ್ಣಾಗೆ ಅವಮಾನ ಮಾಡಿದಕ್ಕೆ ಸಾಕ್ಷಿಯಾಗಿ ವಿರೂಪಗೊಂಡ ಕೃಷ್ಣಾ ಭಾವಚಿತ್ರ ಗೋಡೆಯಲ್ಲಿ ನೇತಾಡುತ್ತಿದೆ.
ಎಸ್.ಎಂ.ಕೃಷ್ಣ ಅವರ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಸಂಸದ ವೀರಪ್ಪ ಮೊಯಿಲಿ ಅವರ ಭಾವಚಿತ್ರವೂ ಇದೆ. ಆದರೆ ಇದಕ್ಕೆ ಯಾರೂ ಏನೂ ಮಾಡಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಗೆ ಎತ್ತಿನ ಹೊಳೆ ತಿರುವು ಯೋಜನೆ ತರುವ ಮೂಲಕ ಇಡೀ ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಮೋಯ್ಲಿ ಗುರಿಯಾಗಿದ್ದರು. ಆದರೆ ಪಕ್ಷದ ಕಚೇರಿಯಲ್ಲಿ ಇರುವ ಮೊಯ್ಲಿ ಭಾವಚಿತ್ರಕ್ಕೆ ಯಾರೂ ಏನೂ ಮಾಡಿಲ್ಲ. ಅಲ್ಲಿ ಮೊಯಿಲಿ ನಗುನಗುತ್ತಾ ಇದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !