• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುತ್ತೂರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಅಮಿತ್ ಶಾ ಸಂವಾದ

|

ಮಂಗಳೂರು, ಫೆಬ್ರವರಿ 20: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಭೇಟಿ ಹಾಗೂ ಕುಲ್ಕುಂದ ನವಶಕ್ತಿ ಸಮಾವೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ತೂರಿಗೆ ಆಗಮಿಸಿದರು. ಪುತ್ತೂರಿನ ಸ್ವಾಮಿ ವಿವೇಕಾನಂದ ಕಾಲೇಜಿಗೆ ಭೇಟಿ ನೀಡಿದ ಅಮಿತ್ ಶಾ ಅವರಿಗೆ ಅಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪುಷ್ವಗುಚ್ಚ ನೀಡಿ ಅಮಿತ್ ಶಾ ಅವರನ್ನು ಬರಮಾಡಿಕೊಂಡರು.

ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಕುಕ್ಕೆಯಲ್ಲಿ ಅಮಿತ್ ಶಾ

ನವ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಕುರಿತು ಅವರು ವಿವೇಕಾನಂದ ಕಾಲೇಜಿನಲ್ಲಿ ಭಾಷಣ ಮಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

In Pics: ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಮಿಂಚಿನ ಸಂಚಾರ

"ನಿಮ್ಮ ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗುತ್ತಿರುವುದು ಸಂತೋಷ. ಮಾತೃ ಭಾಷೆ ಹಾಗೂ ಮಾತೃ ಭೂಮಿಗಿಂತ ಯಾವುದು ದೊಡ್ಡದಿಲ್ಲ," ಎಂದು ಈ ಸಂದರ್ಭದಲ್ಲಿ ಅಮಿತ್ ಶಾ ಹೇಳಿದರು.

ಯುವ ಮನಸ್ಸುಗಳು ದೇಶ ಮುನ್ನಡೆಸಬೇಕು

ಯುವ ಮನಸ್ಸುಗಳು ದೇಶ ಮುನ್ನಡೆಸಬೇಕು

ವಿದ್ಯಾರ್ಥಿಗಳೇ ದೇಶದ ಅಭಿವೃದ್ದಿ ಮಾಡಬೇಕು. ಭಾರತದ ಭವಿಷ್ಯದ ಯೋಜನೆ ವಿದ್ಯಾರ್ಥಿಗಳಲ್ಲಿ ಬರಬೇಕು. ಯುವ ಮನಸ್ಸುಗಳೇ ದೇಶವನ್ನು ಮುನ್ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
"ನಾನು ಇಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ. 30 ವರ್ಷಗಳ ನಂತರ ನರೇಂದ್ರ ಮೋದಿ ಅವರನ್ನು ದೇಶದ ಜನತೆ ಪ್ರಧಾನಿ ಆಗಿ ಆಯ್ಕೆ ಮಾಡಿದ್ದಾರೆ. ನರೇಂದ್ರ ಮೋದಿ ಅಧಿಕಾರ ಮಾಡಲು ಬಂದಿಲ್ಲ . ದೇಶದ ಅಭಿವೃದ್ದಿಗಾಗಿ ಬಂದಿದ್ದಾರೆ," ಎಂದು ಅವರು ಹೇಳಿದರು.

 ಎಲ್ಲಾ ಬದಲಾಗಿದೆ

ಎಲ್ಲಾ ಬದಲಾಗಿದೆ

"ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ, ಸ್ವರಾಜ್ ನ ವ್ಯಾಖ್ಯಾನ ಸರಿಯಾಗಿ ವಿವರಿಸಲಾಗಿಲ್ಲ," ಎಂದು ಹೇಳಿದ ಅವರು, "ಸ್ವರಾಜ್ ಎಂದರೆ ನಮ್ಮವರಿಂದ ನಡೆಸಲಾಗುವ ಶಾಸನ ಮಾತ್ರವಲ್ಲ ನಮ್ಮವರಿಗೋಸ್ಕರ ನಡೆಸಲಾಗುವ ಶಾಸನ," ಎಂದು ಅವರು ಅಭಿಪ್ರಾಯ ಪಟ್ಟರು.

"4 ವರ್ಷದ ಹಿಂದೇ ದೇಶದ ಪರಿಸ್ಥಿತಿ ಹೇಗಿತ್ತು. ಈಡೀ ದೇಶದಲ್ಲಿ ನಿರಾಶೆಯ ಪರಿಸ್ಥಿತಿಯಲ್ಲಿ ಇತ್ತು. ಯುವ ಜನತೆ ದೇಶದ ಸುರಕ್ಷತೆಗೆ ಮತ್ತು ಗಡಿ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿ ಇತ್ತು . 12 ಲಕ್ಷ ಕೋಟಿ ಹಗರಣ ದೇಶದಲ್ಲಿ ನಡೆದಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ. 2014ರ ಲೋಕಸಭೆ ಚುನಾವಣೆ ಸುವರ್ಣ ಅಕ್ಷರದಲ್ಲಿ ಬರೆದು ಇಡುವಂತಹ ಚುನಾವಣೆ ಆಗಿದೆ," ಎಂದು ಅವರು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ರಾಜಕೀಯ ಪಾಠ

ಕಾಲೇಜು ವಿದ್ಯಾರ್ಥಿಗಳಿಗೆ ರಾಜಕೀಯ ಪಾಠ

"ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಆಗಿದೆ. ಯುವಕರಿಗಾಗಿ ಮೋದಿ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಸ್ಕೀಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಮುದ್ರಾ ಯೋಜನೆ ಸೇರಿದಂತೆ ಹಲವಾರು ಯೋಜನೆ ಯುವಕರಿಗಾಗಿ ಜಾರಿಯಾಗಿವೆ," ಎಂದು ಹೇಳಿದ ಅವರು, "ವಿಶ್ವ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ದೇಶದಲ್ಲಿ ಸ್ಥಾಪಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಲಿದೆ," ಎಂದು ಭರವಸೆ ನೀಡಿದರು.

ರಾಜ್ಯದ ಯುವ ಜನತೆ ಕರ್ನಾಟಕವನ್ನು ಅಭಿವೃದ್ದಿ ಪಡಿಸುವ, ಭ್ರಷ್ಟಚಾರ ಮುಕ್ತ ಪಕ್ಷವನ್ನು ಆರಿಸಬೇಕು ಎಂದು ಹೇಳಿದ ಅವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡದ ಪಕ್ಷವನ್ನು ಬೆಂಬಲಿಸಿ ಎಂದು ಕರೆನೀಡಿದರು.

ಯುವ ಜನತೆಯಿಂದ ಮಾತ್ರ ಸಾಧ್ಯ

ಯುವ ಜನತೆಯಿಂದ ಮಾತ್ರ ಸಾಧ್ಯ

"ನರೇಂದ್ರ ಮೋದಿ ದೇಶದ ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಅವರನ್ನು ಬೆಂಬಲಿಸಲು ಯುವ ಜನತೆ ಅಣಿಯಾಗಬೇಕಿದೆ. ಅಭಿವೃದ್ದಿ ಪರ ಮತ್ತು ಜಾತಿವಾದಿ ಮುಕ್ತ ಭಾರತ ನಿರ್ಮಾಣ ಮೋದಿ ಅವರ ಕನಸು. ಈ ನವ ಭಾರತದ ನಿರ್ಮಾಣ ದೇಶದ ಯುವ ಜನತೆಯಿಂದ ಮಾತ್ರ ಸಾಧ್ಯ," ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ

ತ್ರಿಪುರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಮಲ ಅರಳಬೇಕಿದೆ ಎಂದು ಹೇಳಿದರು. ಭ್ರಷ್ಟಚಾರದಿಂದಾಗಿ ಕರ್ನಾಟಕ ಸರ್ಕಾರ ಮಲಗಿದೆ ಎಂದು ದೂರಿದ ಅವರು ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕಾಲೇಜಿನಲ್ಲಿ ಅಮಿತ್ ಶಾ ಭಾಷಣ ಮುಗಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಕಾರ್ಯಕ್ರಮ ಆವರಣದಿಂದ ಹೊರಕ್ಕೆ ಕಳುಹಿಸಲಾಯಿತು.

ದಕ್ಷಿಣ ಕನ್ನಡ ರಣಕಣ
ಸ್ಟ್ರೈಕ್ ರೇಟ್
BJP 100%
BJP won 2 times since 2009 elections

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP national president Amit Shah arrived in Puttur after the Kukku Subrahmanya visit and the Kulkunda Navsakti convention. Then he interacted with students of Vivekananda College, Puttur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more