• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್

|

ಮಂಗಳೂರು, ನವೆಂಬರ್ 16: ಕರ್ನಾಟಕ ದರ್ಶನ ಬಹುರೂಪಿ ಆಯಾಮಗಳ ಪರಿಕಲ್ಪನೆಯೊಂದಿಗೆ 'ಆಳ್ವಾಸ್ ನುಡಿಸಿರಿ 2018'ಕ್ಕೆ ಇಂದು ಶುಕ್ರವಾರ ಜೈನ ಕಾಶಿ ಮೂಡಬಿದ್ರೆಯಲ್ಲಿ ಚಾಲನೆ ದೊರೆತಿದೆ. ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2018 ಉದ್ಘಾಟನೆಗೊಂಡಿದೆ.

3 ದಿನಗಳ ಕಾಲ ಕಲೆ ಮತ್ತು ಸಾಹಿತ್ಯಾಸಕ್ತರಿಗೆ ಸಂಸ್ಕೃತಿಯ ರಸದೌತಣ ಉಣಬಡಿಸಲಿರುವ 15 ನೇ ವರ್ಷದ ಆಳ್ವಾಸ್ ನುಡಿಸಿರಿ ಸಮೇಳನಕ್ಕೆ ಖ್ಯಾತ ಸಂಶೋಧಕರಾದ ಡಾ.ಷ. ಶೆಟ್ಟರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು ಕನ್ನಡ ಭಾಷೆ ಉಗಮ ಹಲ್ಮಿಡಿ ಶಾಸನದಿಂದ ಆಯಿತು ಎನ್ನುವುದು ಅರ್ಧ ಸತ್ಯ. ನಾಲ್ಕನೇ ಶತಮಾನದ ಆರಂಭದಿಂದಲೇ ಕನ್ನಡ ಭಾಷೆ ಉಗಮವಾಗಿದೆ.

ಆಳ್ವಾಸ್ ವಿದ್ಯಾರ್ಥಿಸಿರಿ 2018: ಸಮ್ಮೇಳನಾಧ್ಯಕ್ಷೆಯಾಗಿ ಸನ್ನಿಧಿ ಟಿ.ರೈ ಪೆರ್ಲ ಆಯ್ಕೆ

ಇದನ್ನು ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ. ತೆಲುಗು ಲಿಪಿಕಾರರು ಮೊದಲು ಬಳಸುತ್ತಿದ್ದದ್ದು ಕನ್ನಡ ಲಿಪಿಯನ್ನೇ. ಅವರು ಹದಿಮೂರನೇ ಶತಮಾನದವರೆಗೂ ಕನ್ನಡ ಲಿಪಿಯನ್ನೇ ಬಳಸಿದ್ದರು. ಆ ನಂತರ ತೆಲುಗು ಲಿಪಿಯನ್ನು ಲಿಪಿಕಾರರು ಕಂಡು ಹಿಡಿದರು ಎಂದು ಸ್ಪಷ್ಟಪಡಿಸಿದರು.

 ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ

ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ

ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ. ಆದರೆ ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಸಂಸ್ಕೃತ ಆ ಕಾರಣಕ್ಕಾಗಿ ಕನ್ನಡಕ್ಕೆ ಚಿರಋಣಿಯಾಗಿದೆ. ಭಾಷೆಗಳು ಒಗ್ಗೂಡಿ ಇದ್ದಾಗ ಬಹುತ್ವ ಸಂಸ್ಕೃತಿ ಉಳಿಯುತ್ತದೆ. ವೈದಿಕ ಸಂಸ್ಕೃತಿ ಅನ್ನೋದೇ ಇಲ್ಲ ಎಂದು ಡಾ.ಷ. ಶೆಟ್ಟರ್ ಅಭಿಪ್ರಾಯಪಟ್ಟರು.

15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ

 12ನೇ ಶತಮಾನದಲ್ಲಿ ಸಾಮಾನ್ಯವಾಗಿತ್ತು

12ನೇ ಶತಮಾನದಲ್ಲಿ ಸಾಮಾನ್ಯವಾಗಿತ್ತು

ಬೌದ್ಧ ಸಂಸ್ಕೃತಿಯಲ್ಲಿ ವರ್ಣ, ವರ್ಗ ಬೇಧ ಇರಲಿಲ್ಲ. ಭಿನ್ನ ಮತದ ಮದುವೆಯನ್ನು ಈಗ ವಿರೋಧಿಸುವವರಿದ್ದಾರೆ. ಆದರೆ ಹನ್ನೆರಡನೇ ಶತಮಾನದಲ್ಲಿ ಇದು ಸಾಮಾನ್ಯವಾಗಿತ್ತು. ಆಗವಿವಾಹವಾದರೂ ಧರ್ಮ ಬದಲಾವಣೆ ಮಾಡುವ ಅಗತ್ಯವಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜರ ಕಾಲದಲ್ಲಿ ವಿಶೇಷ ಸ್ಥಾನಮಾನವಿತ್ತು. ಯಾವೊಬ್ಬ ರಾಜನೂ ಕೃತಿಯನ್ನು ನಿಷೇಧಿಸಿದ ಉದಾಹರಣೆ ಇಲ್ಲ ಎಂದು ಡಾ.ಷ. ಶೆಟ್ಟರ್ ತಿಳಿಸಿದರು.

ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ

 ವಾಕ್ ಸ್ವಾತಂತ್ರ್ಯಕ್ಕೆ ಸೆನ್ಸಾರ್ ವಿಧಿಸಿದೆ

ವಾಕ್ ಸ್ವಾತಂತ್ರ್ಯಕ್ಕೆ ಸೆನ್ಸಾರ್ ವಿಧಿಸಿದೆ

ಇಂದು ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಸೆನ್ಸಾರ್ ವಿಧಿಸುತ್ತಿದೆ ಎಂದ ಶೆಟ್ಟರ್ ಉಗ್ರ ಧರ್ಮಾಂಧತೆ ಆರಂಭವಾಗಿದ್ದೇ ಹನ್ನೆರನೇ ಶತಮಾನದಲ್ಲಿ. ಶೈವರ ಕಾಲದಿಂದ ಉಗ್ರತ್ವ ಆರಂಭವಾಯಿತು. ಬಸವಣ್ಣರು ಕಲಬೇಡ ಕೊಲಬೇಡ ಎಂದರು. ಆದರೆ ಇನ್ನೊಂದೆಡೆ ತನ್ನದೇ ಧರ್ಮ ಶ್ರೇಷ್ಠ ಅನ್ನೋ ಕಾಲವೂ ಶುರುವಾಯಿತು.

ಅಸಹಿಷ್ಣುತೆಯ ಶತಮಾನ

ಅಸಹಿಷ್ಣುತೆಯ ಶತಮಾನ

ಹಂಪಿ ವೈಭವವನ್ನು ಹೊಗಳುತ್ತೇವೆ. ಆದರೆ ವಿಜಯನಗರ ಕಾಲದಲ್ಲಿ ಧರ್ಮ ಸಹಿಷ್ಣುತೆ ಕಾಪಾಡಿಲ್ಲ. ಈಗ ನಮಗೆ ಧರ್ಮ ಸ್ವಾತಂತ್ರ್ಯ ಇಲ್ಲ. ಬೇರೆಯವರು ಹೇಳಿಕೊಟ್ಟಿದ್ದನ್ನೇ ಧರ್ಮ ಅಂದುಕೊಂಡಿದ್ದೇವೆ. ಇಲ್ಲದಿದ್ದರೆ ಕಾಳಗವೇ ಆರಂಭವಾಗಿ ಬಿಡುತ್ತದೆ. ಈ ಶತಮಾನ ಅಸುಹಿಷ್ಣತೆಯ ಶತಮಾನ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.

English summary
Alvas Nudisiri 2018 was inaugurated today. Famous researcher Dr. Sha Shetter inaugurated the program.Then he talked about history of kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X