ಕುಡ್ಲದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು?

ಮಂಗಳೂರು, ಏ 5: ಒಂದು ದಿನದ ಭೇಟಿಗಾಗಿ ಶುಕ್ರವಾರ (ಏ 4) ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಗರದ ಕರಾವಳಿ ಖಾದ್ಯಕ್ಕೆ ಮನಸೋತು ತಾವೇ ಹೊಟೇಲ್ ವೊಂದಕ್ಕೆ ದೌಡಾಯಿಸಿದ ಪ್ರಸಂಗ ನಡೆದಿದೆ.

ತನ್ನ ಮೂವರು ಅಪ್ತರೊಂದಿಗೆ ಹೋಟೇಲಿಗೆ ರಾಹುಲ್ ರಾತ್ರಿ ಆಗಮಿಸಿದ್ದರು, ಅದರಲ್ಲಿ ಒಬ್ಬರು ಮಹಿಳೆ. ಆ ಮಹಿಳೆಯಾರು ಎನ್ನುವ ಬಿಸಿಬಿಸಿ ಚರ್ಚೆ ನಗರದಲ್ಲಿ ಸದ್ಯ ಚಾಲ್ತಿಯಲ್ಲಿದೆ.

ನಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ರಾಹುಲ್, ಸರ್ಕ್ಯೂಟ್ ಹೌಸಿನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿಗೆ ತೆರಳಿದ್ದರು. ರಾಹುಲ್ ಗಾಂಧಿಗೆ ಮೋತಿ ಮಹಲ್ ಹೋಟೇಲಿನಿಂದ ರಾತ್ರಿ ಊಟದ ವ್ಯವಸ್ಥೆಯೂ ಮಾಡಲಾಗಿತ್ತು. [ಮೋದಿ ಭಾಷಣವನ್ನು ಕನ್ನಡದಲ್ಲಿ ಕೇಳಿರಿ]

AICC Vice President Rahul Gandhi dinner in Mangalore

ಮೋತಿ ಮಹಲ್ ಹೊಟೇಲಿನಿಂದ ಕೋಳಿ ಸುಕ್ಕ, ಅಂಜಲ್ ಫ್ರೈ ಊಟ ಕೂಡಾ ರವಾನೆಯಾಗಿತ್ತು. ಆದರೆ, ಮೋತಿ ಮಹಲ್ ಹೊಟೇಲಿನ ಊಟ ತಿನ್ನದೇ, ಸೀದಾ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ಗೋಲ್ಡ್ ಫಿಂಚ್ 'ಸಂಡಿಗೆ' ಹೊಟೇಲಿಗೆ ತನ್ನ ಮೂವರು ಆಪ್ತರೊಂದಿಗೆ ರಾಹುಲ್ ಆಗಮಿಸಿದರು.

ಅಲ್ಲಿ ಕೋರಿ ರೊಟ್ಟಿ, ನೀರು ದೋಸೆ, ಮಾಂಜಿ ಫ್ರೈ ತಿಂದ ರಾಹುಲ್, ತನ್ನ ಜೊತೆಗೆ ಬಂದಿದ್ದ ಆಪ್ತರೊಂದಿಗೆ ಸ್ವಲ್ಪ ಹೊತ್ತು ಹರಟೆ ಹೊಡೆದು ಹೊಟೇಲಿನ ಸಿಬ್ಬಂದಿಗಳಿಗೆ ಹಸ್ತಲಾಘವ ಮಾಡಿ ಸರ್ಕ್ಯೂಟ್ ಹೌಸಿಗೆ ವಾಪಸಾದರು.

ಶುಕ್ರವಾರ (ಏ 4) ಇಲ್ಲಿ ನಡೆದ ರಾಹುಲ್ ಗಾಂಧಿ ಅವರ ಚುನಾವಣಾ ಸಾರ್ವಜನಿಕ ಸಭೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೆಳೆಯುವಲ್ಲಿ ವಿಫಲವಾಯಿತು ಎನ್ನುವ ಮಾತು ನಗರಾದಾದ್ಯಂತ ಕೇಳಿ ಬರುತ್ತಿದೆ. ಜೊತೆಗೆ, ರಾಹುಲ್ ಜೊತೆ ಭೋಜನ ಸವಿದ ಮಹಿಳೆಯಾರು ಎನ್ನುವ ಕುತೂಹಲವೂ ಈಗ ಎಲ್ಲೆ ಮಾಡಿದೆ.

ಶನಿವಾರ (ಏ 5) ಬೆಳಗ್ಗೆ ರಾಹುಲ್ ಮಂಗಳೂರಿನಿಂದ ಕಾಸರಗೋಡಿಗೆ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+