• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಆದಾನಿ ಗ್ರೂಪ್‌ಗೆ ಮುಖಭಂಗ, ಏರ್‌ಪೋರ್ಟ್‌ಗೆ ಹಳೆ ಹೆಸರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 12; ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿ ಸಂಸ್ಥೆ ಅದಾನಿಗೆ ಗ್ರೂಪ್ ತೆಕ್ಕೆಗೆ ಹೋದ ಬಳಿಕ ಹೆಸರು ಬದಲಾವಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು.

ಮಂಗಳೂರು ಅಂತರಾಷ್ಟ್ರೀಯವಿಮಾನ ನಿಲ್ದಾಣದ ಹೆಸರನ್ನು ಅದಾನಿ ಏರ್‌ರ್ಪೋಟ್ ಎಂದು ಹೆಸರು ಬದಲಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಕೊನೆಗೂ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ಹೆಸರು ವಾಪಾಸು ಪಡೆದು ಹಿಂದಿನ ಹೆಸರಾ 'ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಬದಲಾವಣೆ ಮಾಡಿದೆ.

ಮಂಗಳೂರಿನ ಅದಾನಿ ವಿಮಾನ ನಿಲ್ದಾಣದಲ್ಲಿ ಅಕ್ರಮದ್ದೇ ಪಾರುಪತ್ಯಮಂಗಳೂರಿನ ಅದಾನಿ ವಿಮಾನ ನಿಲ್ದಾಣದಲ್ಲಿ ಅಕ್ರಮದ್ದೇ ಪಾರುಪತ್ಯ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲೆಂದು ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಗುತ್ತಿಗೆ ಪಡೆದ ಅದಾನಿ ಸಂಸ್ಥೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿನ ಜೊತೆಗೆ ಅದಾನಿ ಏರ್ಪೋಟ್ ಎಂದು ಮರುನಾಮಕರಣ ಮಾಡಿತ್ತು.

 ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣ ಅದಾನಿ ಗ್ರೂ‌ಪ್‌ಗೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣ ಅದಾನಿ ಗ್ರೂ‌ಪ್‌ಗೆ

ಸಂಸ್ಥೆಯ ಈ ನಿರ್ಧಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ಈ ಬಗ್ಗೆ ಕಾನೂನು ಹೋರಾಟ ಮಾಡಿದ ರಾಜಕೀಯ ರಹಿತ ಸಮಾನ ಮನಸ್ಕರ ತಂಡ ಇದೀಗ ವಾಪಾಸ್ ಹಳೆ ಹೆಸರನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.

 ಅದಾನಿ ಏರ್‌ಪೋರ್ಟ್‌ ಹೆಸರು ಬದಲಾವಣೆ ಸಿಎಂಗೆ ಮನವಿ ಅದಾನಿ ಏರ್‌ಪೋರ್ಟ್‌ ಹೆಸರು ಬದಲಾವಣೆ ಸಿಎಂಗೆ ಮನವಿ

ವಕೀಲರ ಮೂಲಕ ನೋಟಿಸ್

ವಕೀಲರ ಮೂಲಕ ನೋಟಿಸ್

ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡಿರುವ ಬಗ್ಗೆ ಮಾಹಿತಿ ಪಡೆಯಲು ಆರ್‌ಟಿಐ ಮೂಲಕ ದಾಖಲೆ ಪಡೆದುಕೊಳ್ಳಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಯಾವುದೇ ಸಂಸ್ಥೆ ಗುತ್ತಿಗೆ ಪಡೆದ್ರು ಬ್ರ್ಯಾಂಡಿಂಗ್ ಮಾಡಲು ಅವಕಾಶವಿಲ್ಲ ಎಂದು ಉತ್ತರಿಸಿತ್ತು. ಜೊತೆಗೆ ಒಪ್ಪಂದದಲ್ಲಿಯು ಹೆಸರು ಬದಲಾವಣೆ ಮಾಡುವ ಉಲ್ಲೇಖ ಇರಲಿಲ್ಲ. ಹೀಗಾಗಿ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಲಾಯಿತು. ಪ್ರಾಧಿಕಾರವು ವಾಪಸು ಹಳೆ ಹೆಸರು ಇಡುವಂತೆ ಸಂಸ್ಥೆಗೆ ಸೂಚಿಸಿತ್ತು. ಇದರ ಪರಿಣಾಮ ಅದಾನಿ ಸಂಸ್ಥೆ ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ಖಾತೆ, ಫೇಸ್‌ಬುಕ್, ಗೂಗಲ್‌, ಏರ್‌ಪೋರ್ಟ್ ಪ್ರವೇಶ ದ್ವಾರ, ಒಳಭಾಗದಲ್ಲಿ ಇದ್ದ ಬೋರ್ಡ್‌ನಲ್ಲಿ ಹೆಸರು ಬದಲಾಯಿಸಿದೆ. ಅದಾನಿ ಏರ್ ಪೋರ್ಟ್ ಬದಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹಳೆ ಹೆಸರನ್ನೇ ಇಟ್ಟಿದೆ.

ಮುಖ್ಯ ಹೆಸರು ಬದಲಾವಣೆ ಮಾಡಿತ್ತು

ಮುಖ್ಯ ಹೆಸರು ಬದಲಾವಣೆ ಮಾಡಿತ್ತು

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಹೋರಾಟ ನಡೆಸಿದ ಪ್ರಮುಖ ದಿಲ್ ರಾಜ್ ಆಳ್ವಾ, "ಅಭಿವೃದ್ಧಿ ಹಿತದೃಷ್ಟಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಪಡೆದುಕೊಂಡಿದ್ದಾರೆ. ಈ ಮೂಲಕ ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ಎಲ್ಲರಿಗೂ ಖುಷಿಯ ಸಂಗತಿಯೇ. ಆದರೆ ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದ ಬಳಿಕ ಆದಾನಿ ಗ್ರೂಪ್ ವಿಮಾನ ನಿಲ್ದಾಣದ ಮುಖ್ಯ ಹೆಸರನ್ನೇ ಬದಲಾವಣೆ ಮಾಡಿತು. ವಿಮಾನ ನಿಲ್ದಾಣದ ಹೆಸರನ್ನು ಬದಲಾವಣೆ ಮಾಡಿದ ಕುರಿತು ಸಾಕಷ್ಟು ಹೋರಾಟಗಳು ನಡೆಯಿತು" ಎಂದರು.

ಕಾನೂನು ಹೋರಾಟಕ್ಕೆ ಮಣಿದ ಅದಾನಿ

ಕಾನೂನು ಹೋರಾಟಕ್ಕೆ ಮಣಿದ ಅದಾನಿ

"ಸ್ಥಳೀಯರು ಮಂಗಳೂರು ವಿಮಾನ ನಿಲ್ದಾಣ ಹೆಸರು ಬದಲಾವಣೆ ವಿರುದ್ಧ ಹೋರಾಟ ಮಾಡಿದಾಗ ಆದಾನಿ ಗ್ರೂಪ್‌ನಿಂದ ಯಾವುದೇ ಪ್ರತಿಕ್ರಿಯೆಗಳು ಬರಲಿಲ್ಲ. ಕೊನೆಗೆ ಆರ್‌ಟಿಐ ಹಕ್ಕಿನಡಿ ಹೆಸರು ಬದಲಾವಣೆ ಮಾಡುವ ಹಕ್ಕು ಇದ್ಯಾ ಅಂತಾ ಕೇಳಿದಾಗ, ಗುತ್ತಿಗೆ ಪಡೆದುಕೊಂಡ ಕಂಪೆನಿಗೆ ಹೆಸರು ಬದಲಾವಣೆ ಮಾಡುವ ಅಧಿಕಾರ ಇಲ್ಲ ಅಂತಾ ತಿಳಿದುಬಂದಿದೆ. ಕಾನೂನು ಹೋರಾಟಕ್ಕೆ ಕೈ ಹಾಕಿದಾಗ, ಅದಾನಿ ಸಂಸ್ಥೆ ಮೂಲ ಹೆಸರನ್ನೇ ಹಾಕಿದೆ" ಎಂದು ದಿಲ್ ರಾಜ್ ಆಳ್ವ ಹೇಳಿದ್ದಾರೆ.

  ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada
  ವಿಮಾನ ನಿಲ್ದಾಣದ ನಿರ್ವಹಣೆ

  ವಿಮಾನ ನಿಲ್ದಾಣದ ನಿರ್ವಹಣೆ

  ಅದಾನಿ ಏರ್ಪೋಟ್ ಅಂತಾ ಇದ್ದುದರಿಂದ ಮುಂದೆ ಮಂಗಳೂರು ಎಂಬ ಪದವೇ ಮಾಯವಾಗುವ ಸಾಧ್ಯತೆ ಇತ್ತು. ಅದಾನಿ ಸಂಸ್ಥೆಯೇ ಈ ವಿಮಾನ ನಿಲ್ದಾಣ ನಿರ್ಮಿಸಿದೆ ಎಂಬ ಅಭಿಪ್ರಾಯ ಬಿಂಬಿತವಾಗುವ ಸಾಧ್ಯತೆಯು ಇತ್ತು. ಒಟ್ಟಿನಲ್ಲಿ ಸದ್ಯ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದು ಏರ್ಪೋರ್ಟ‌್‌ಗೆ ಮತ್ತೆ ಹಳೆ ಹೆಸರು ಬಂದಿದೆ.

  2016ರಲ್ಲಿ ಅದಾನಿ ಸಂಸ್ಥೆ ದೇಶದ ಹಲವು ವಿಮಾನ ನಿಲ್ದಾಣಗಳ ಗುತ್ತಿಗೆ ಪಡೆದಿತ್ತು. 2020ರ ಅಕ್ಟೋಬರ್ 30ರಂದು ಅಧಿಕೃತವಾಗಿ ಸಂಸ್ಥೆ ವಿಮಾನ ನಿಲ್ದಾಣದ ನಿರ್ವಹಣೆ ಪಡೆದುಕೊಂಡಿದೆ.

  English summary
  After protest by locals Adani airports has been removed from the name boards of the Mangaluru International Airport. Airport now get the original name boards.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X