ಮಂಗಳೂರಿನ ಮೀನುಗಾರ ಸಲೀಂಗೆ ಸಿಕ್ತು ಬಂಪರ್ ಬೇಟೆ

ಮಂಗಳೂರು, ಜೂನ್ 7: ನಗರದ ಮೀನುಗಾರಿಕಾ ಬಂದರು ಧಕ್ಕೆಯಲ್ಲಿ ಭಾರೀ ಗಾತ್ರದ ಮೀನೊಂದು ಬಲೆಗೆ ಬಿದ್ದಿತ್ತು. ಇದನ್ನು ಮೀನುಗಾರರಿಬ್ಬರು ಎಳೆದುಕೊಂಡು ಬರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾರದ ಹಿಂದೆ ಮಂಗಳೂರಿನ ಮೀನುಗಾರ ಸಲೀಂ ಎಂಬವರ ಬೋಟಿಗೆ 98 ಕೇಜಿ ತೂಕದ ಮುರು ಎನ್ನುವ ದೈತ್ಯ ಮೀನು ಸಿಕ್ಕಿತ್ತು. ಇದನ್ನು ಬೋಟಿನಿಂದ ಕೆಳಗಿಳಿಸಿದ ಇಬ್ಬರು ಮೀನುಗಾರರು ಹಗ್ಗ ಕಟ್ಟಿ ಎಳೆದುಕೊಂಡು ಬಂದಿದ್ದರು.

About 25 kg weighing fish was caught by chance to fishermen at Bunder, Mangaluru

ಈ ಅಪರೂಪದ ದೃಶ್ಯವನ್ನು ಮೀನುಗಾರರೊಬ್ಬರು ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಿಷ್ಟೇ ಅಲ್ಲದೆ ಈ ಮೀನು ಬರೋಬ್ಬರಿ 25 ಸಾವಿರ ರೂಪಾಯಿ ಆದಾಯವನ್ನು ಮೀನುಗಾರರಿಗೆ ತಂದುಕೊಟ್ಟಿದೆ. ಸುಮಾರು 25 ಸಾವಿರ ಬೆಲೆ ಬಾಳುವ ಮೀನು ಸಿಕ್ಕಿದ ಬೋಟ್‌ನವರಂತೂ ತುಂಬ ಸಂತಸದಿಂದ ಬೃಹತ್ ಮೀನನ್ನು ಮಾರಾಟ ಮಾಡಿದ್ದಾರೆ.

ಸಣ್ಣ ಗಾತ್ರದಲ್ಲಿ ಸಿಗುವ ಈ ಮುರು ಮೀನನ್ನು ಒಂದು ಅಥವಾ ಎರಡು ತಿನ್ನಬಹುದು. ಆದರೆ ಈ ದೊಡ್ಡ ಗಾತ್ರದ ಮೀನಿನ ಮಾಂಸವನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+