ಅಬ್ದುಲ್ ಬಷೀರ್ ಹತ್ಯೆಗೆ ಜೈಲಲ್ಲಿ ಸಂಚು: ಮಂಗಳೂರು ಪೊಲೀಸ್ ಆಯುಕ್ತ

ಮಂಗಳೂರು, ಜನವರಿ 25: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಜನವರಿ 3 ರ ರಾತ್ರಿ ನಡೆದ ಅಬ್ದುಲ್ ಬಷೀರ್ ಅವರ ಹತ್ಯೆಗೆ ಮಂಗಳೂರು ಜೈಲಿನಲ್ಲಿಯೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ಬಷೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಈ ಹತ್ಯಾ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆಯಿತು ಎಂದು ಅವರು ಹೇಳಿದರು.

ಈ ಹತ್ಯೆ ಪ್ರಕರಣದ ಸಂಚನ್ನು ಮಂಗಳೂರು ಜೈಲಿನಲ್ಲಿ ಹೆಣೆಯಲಾಗಿತ್ತು ಎಂದು ಹೇಳಿದ ಅವರು , "ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಂಟ್ವಾಳದ ಮಿಥುನ್ ಪೂಜಾರಿ, ಮಂಗಳೂರು ಕಾವೂರಿನ ತಿಲಕ್ ರಾಜ್, ಬಂಟ್ವಾಳ ಫರಂಗಿಪೇಟೆಯ ರಾಜು ಹಾಗು ಮಂಗಳೂರು ಕೋಡಿಕಲ್ ನಿವಾಸಿ ಅನೂಪ್ ಕುಲಾಲ್ ಈ ಹತ್ಯಾ ಪ್ರಕರಣದಲ್ಲಿ ಇದ್ದಾರೆ," ಎಂದು ಅವರು ವಿವರ ನೀಡಿದರು.

Abdhul Basheer murder conspiracy hatched in jail: Mangaluru police commissioner

ಈ ನಾಲ್ವರ ಪೈಕಿ 3 ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ. ಮತ್ತೊಬ್ಬ ಆರೋಪಿ ಅನುಪ್ ಕುಲಾಲ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+