ಮಂಗಳೂರು: ಪತ್ನಿಯನ್ನು ಕೊಂದ ಪತಿಯ ಬಂಧನ
ಮಂಗಳೂರು, ನವೆಂಬರ್, 28 : ಕಳೆದ ಕೆಲವು ವರ್ಷಗಳಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ದುರುಳ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಸಾಬೀತು ಮಾಡಲು ಹೊರಟು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನವೆಂಬರ್ 27ರ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪತಿಯಿಂದ ಸಾವಿಗೀಡಾದ ಪತ್ನಿಯೇ ಷಾಜಿದಾ. ಪತ್ನಿಯನ್ನು ಕೊಂದ ಆರೋಪಿ ಅಝರ್ (27). ಗಂಡ ಹೆಂಡತಿ ಮಂಗಳೂರಿನ ಕೈರಂಗಲ ಗ್ರಾಮದ ತೌಸಿಯಾ ಜುಮ್ಮಾ ಮಸೀದಿ ಬಳಿಯ ಗೌಸಿಯಾ ಕಾಂಪೌಡ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.[ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ]

ಮಾದಕ ವ್ಯಸನಿಯಾಗಿದ್ದ ಆರೋಪಿ ಅಝರ್ ಹಲವಾರು ವರ್ಷಗಳಿಂದ ಪತ್ನಿ ಷಾಜಿದಾಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದನು. ಈತನ ಕಿರುಕುಳ ಸಹಿಸಿಕೊಳ್ಳುತ್ತಿದ್ದ ಆಕೆ ಮರುಮಾತನಾಡುತ್ತಿರಲಿಲ್ಲ.
ಅಝರ್ ಶುಕ್ರವಾರವೂ ಮದ್ಯ ಸೇವಿಸಿ ಮನೆಗೆ ಬಂದಿದ್ದು, ಆಕೆಯನ್ನು ಮನೆಯಲ್ಲೇ ಕೊಲೆ ಮಾಡಿದ್ದಾನೆ. ಬಳಿಕ ಯಾರಿಗಾದರೂ ತಿಳಿದರೆ ಅನುಮಾನ ಬರಬಹುದೆಂದು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವ ನಾಟಕ ಆಡಿದ್ದಾನೆ.[ದೂರದರ್ಶನ ವರದಿಗಾರ ಹೆಂಡತಿ ಕೊಲೆ ಆರೋಪದಿಂದ ಮುಕ್ತ]
ಪತ್ನಿ ಷಾಜಿದಾಳನ್ನು ಆಸ್ಪತ್ರೆಗೆ ಕರೆದುಕೊಂಡ ವಿಚಾರ ತಿಳಿದ ಸಂಬಂಧಿಕರು ಪತಿಯನ್ನು ವಿಚಾರಿಸಿದಾಗ ಆತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು ಎಂದು ಸುಳ್ಳು ಹೇಳಿದ್ದಾನೆ. ಮೃತ ಷಾಜಿದಳಿಗೆ ಮಹಮ್ಮದ್ ಹಫೀಝ್ (3) ಅನಾಸ್ (1) ಎಂಬ ಇಬ್ಬರು ಮಕ್ಕಳಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಕೋಣಾಜೆ ಪೊಲೀಸರು ಸಂಬಂಧಿಕರ ದೂರಿನ ಮೇರೆಗೆ ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications