ಮಂಗಳೂರಲ್ಲಿ ಗಾಂಜಾ ಮಾರಾಟದ ನಾಲ್ವರ ಬಂಧನ
ಮಂಗಳೂರು, ನವೆಂಬರ್, 26 : ರಿಕ್ಷಾವೊಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಪೊಲೀಸರು ಗುರುವಾರ ನಾಲ್ವರನ್ನು ಬಂಧಿಸಿದ್ದು, ಗಾಂಜಾ ಹಾಗೂ ರಿಕ್ಷಾವನ್ನು ವಶಪಡಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ದರ್ಗಾ ಅಬ್ದುಲ್ ಸಮಾದ್(22), ಉಳ್ಳಾಲ ಧರ್ಮನಗರ ನಿವಾಸಿ ಅಬ್ದುಲ್ ಸಫ್ವಾನ್(19), ಉಳ್ಳಾಲ ಸುಭಾಷ್ ನಗರ ನಿವಾಸಿ ಮಹಮ್ಮದ್ ಸಾದಿಕ್(47) ಮತ್ತು ಮಂಜನಾಡಿ ನಿವಾಸಿ ಮಹಮ್ಮದ್ ಸಿರಾಜ್(34) ಎಂದು ಗುರುತಿಸಲಾಗಿದೆ.[ಆರಕ್ಷಕರಿಗೊಂದು ಶುಭಾಶಯ ಹೇಳಲು ನಮ್ಮೊಂದಿಗೆ ಬನ್ನಿ]

ಗಾಂಜಾ ಸಾಗಾಟ ನಡೆಸುತ್ತಿದ್ದ ಆರೋಪಿಗಳ ಮಾಹಿತಿ ತಿಳಿದ ಪೂಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ಮತ್ತು ಸಿಬ್ಬಂದಿಗಳು ಅವರು ಬರುವ ದಾರಿಯಲ್ಲೇ ಕಾಯುತ್ತಾ ನಿಂತಿದ್ದರು. ಪೊಲೀಸರನ್ನು ಕಂಡ ಆರೋಪಿಗಳು ಆಟೋ ರಿಕ್ಷಾ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.[ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಪತ್ತೆ]
ಈ ವೇಳೆ ಆಟೋವನ್ನು ಬೆನ್ನಟ್ಟಿದ ಪೊಲೀಸರು ವಾಹನವನ್ನು ಅಡ್ಡಗಟ್ಟಿ ತನಿಖೆ ನಡೆಸಿದ್ದಾರೆ. ಆಗ ರಿಕ್ಷಾದ ಹಿಂಬದಿ ಸೀಟಿನ ಅಡಿಭಾಗದಲ್ಲಿ 300ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅವುಗಳ ಮೌಲ್ಯ 6,000 ರೂ ಎಂದು ಅಂದಾಜಿಸಲಾಗಿದೆ.
ಈ ಗಾಂಜಾವನ್ನು ಗೇರುಕಟ್ಟೆಯ ಫಾರೂಕ್ ಎಂಬಾತನಿಂದ ಪಡೆದುಕೊಂಡಿರುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.












Click it and Unblock the Notifications