ಮಂಗಳೂರು: ಜಾತ್ರೆ ಮುಗಿಸಿ ಮನೆಗೆ ಬರುವವರು ಮಸಣ ಸೇರಿದರು
ಮಂಗಳೂರು, ಮೇ 11 : ಕಾರ್ಕಳದ ಕಬಕಾರು ಈಶ್ವರ ಜಾತ್ರೆ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದವರು ಮಸಣ ಸೇರಿದ್ದಾರೆ.
ಗುರುವಾರ ನಸುಕಿನ ಜಾವ 2:30ರ ಸುಮಾರಿಗೆ ಕಾರ್ಕಳದ ಕಬಕಾರು ಈಶ್ವರ ಜಾತ್ರೆ ಮುಗಿಸಿಕೊಂಡು ಬೈಕ್ ನಲ್ಲಿ ವಾಪಸ್ ಮನೆಗೆ ವಾಪಸ್ ಬರುತ್ತಿವ ವೇಳೆ ಲಾರಿಯೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಹರೀಶ್ ನಾಯ್ಕ(30), ಪುತ್ತೂರಿನ ಸ್ವರ್ಗ ನಿವಾಸಿ ನಾರಾಯಣ(38) ವಿಶ್ವಾಸ್(12) ಮೃತ ದುರ್ದೈವಿಗಳು. ಮೂವರು ಕಾರ್ಕಳದ ಕಬಕಾರು ಈಶ್ವರ ಜಾತ್ರೆ ಮುಗಿಸಿಕೊಂಡು ಬೈಕ್ ನಲ್ಲಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಾಣಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಮೀನು ಸಾಗಾಟದ ಲಾರಿ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications