ಆಳ್ವಾಸ್ ಪ್ರಗತಿಗೆ ಉತ್ತಮ ಪ್ರತಿಕ್ರಿಯೆ, 1326 ಜನರಿಗೆ ಉದ್ಯೋಗ
ಮೂಡುಬಿದಿರೆ, ಜುಲೈ 08 : ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನ ಆಯೋಜಿಸಿದ್ದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 1,326 ಜನರನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗಿದೆ.
10 ನೇ ವರ್ಷದ 'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳ ಜುಲೈ 6 ಮತ್ತು 7ರಂದು ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯಿತು. 183 ಕಂಪನಿಗಳು ಎರಡು ದಿನದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು.
1,326 ಜನರಿಗೆ ಸ್ಥಳದಲ್ಲಿಯೇ ಉದ್ಯೋಗವನ್ನು ನೀಡಲಾಗಿದೆ. 167 ಕಂಪನಿಗಳು ಅಂತಿಮ ಹಂತದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. 3947 ಜನರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಅಬುದಾಬಿ ಮೂಲದ ಯುಎಇ ಎಕ್ಸ್‌ಚೇಂಜ್ 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ರಾಜೇಶ್ ನಾಯಕ್ ಎಂಬ ಯುವಕನಿಗೆ ವಾರ್ಷಿಕ 8.5 ಲಕ್ಷ ವಾರ್ಷಿಕ ವೇತನ ನೀಡಿದೆ. ಉಳಿದ ಅಭ್ಯರ್ಥಿಗಳಿಗೆ 7 ಲಕ್ಷ ವಾರ್ಷಿಕ ವೇತನ ನೀಡಿದೆ.
ಎಸ್‌ಎಸ್‌ಜಿ ಕಂಪನಿ ರೂ. 7.20 ಲಕ್ಷದ ಪ್ಯಾಕೇಜ್, ಸ್ವಿಚ್ ಗೇರ್ ಕಂಪನಿ 4 ಲಕ್ಷದ ಪ್ಯಾಕೇಜ್, ಒರಾಕಲ್ ಕಂಪನಿ 3.2 ಲಕ್ಷದ ಪ್ಯಾಕೇಜ್ ನೀಡಿದೆ. ವಿವಿಧ ಕಂಪನಿಗಳು ಉತ್ತಮ ಪ್ಯಾಕೇಜ್ ನೀಡಿದ್ದು, ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕಿದೆ.
'10ನೇ ವರ್ಷದ 'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳ ಯಶಸ್ವಿಯಾಗಿದೆ. ಒಂದು ಆವೃತ್ತಿಗಿಂತ ಮತ್ತೊಂದು ಆವೃತ್ತಿ ವಿಭಿನ್ನವಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕಿದೆ' ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವಾ ಹೇಳಿದ್ದಾರೆ.












Click it and Unblock the Notifications