ಪುತ್ತೂರಲ್ಲಿ ಪಿಕೆ ಚಿತ್ರ ನೋಡುವಾಗ ನಡೆದ ಘಟನೆ!
ಮಂಗಳೂರು, ಡಿ.21: ಪ್ರತಿಭಾವಂತ ನಟ ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮ ಅಭಿನಯದ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದ ಬಿಸಿ ಕರಾವಳಿಯ ಚಿತ್ರಮಂದಿರಕ್ಕೂ ತಟ್ಟಿದೆ.
ನೆಮ್ಮದಿಯಿಂದ ಚಿತ್ರ ನೋಡುವಾಗ ವಾಟ್ಸಪ್ ಮೂಲಕ ಯಾರೋ ಕಿಡಿಗೇಡಿ ಹಬ್ಬಿಸಿದ ಗಾಳಿಸುದ್ದಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿದ ಘಟನೆ ವರದಿಯಾಗಿದೆ.
ಹಿಂದೂಧರ್ಮಕ್ಕೆ ಸೇರಿರುವ ಕಾಲೇಜು ವಿದ್ಯಾರ್ಥಿನಿ(20)ಯೊಬ್ಬಳು ಅನ್ಯಕೋಮಿನ ಯುವಕನ ಜೊತೆಗೂಡಿ ಚಿತ್ರಮಂದಿರದಲ್ಲಿದ್ದಾಳೆ. ಇಬ್ಬರು ಪಿಕೆ ಚಿತ್ರ ನೋಡುತ್ತಿದ್ದಾರೆ. ಪುತ್ತೂರಿನ ಅರುಣ ಥಿಯೇಟರ್ ನಲ್ಲಿ ರೆಡ್ ಹ್ಯಾಂಡ್ ಆಗಿ ನಿಮಗೆ ಸಿಗುತ್ತಾರೆ ಎಂಬ ಸಂದೇಶ ವಾಟ್ಸಪ್ ಮೂಲಕ ಯಾರೋ ಒಬ್ಬ ಕಿಡಿಗೇಡಿ ಕಳಿಸಿದ್ದಾನೆ. [ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ಅಮೀರ]

ಈ ಸಂದೇಶದ ಜಾಡು ಹಿಡಿದು ಹೊರಟ ಪುತ್ತೂರು ನಗರ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಚಿತ್ರಮಂದಿರದ ಬಳಿ ಬಂದ ಪೊಲೀಸರು ಆಪರೇಟರ್ ಬಳಿ ಹೋಗಿ ವಾಟ್ಸಪ್ಸಂದೇಶದಲ್ಲಿ ವಿದ್ಯಾರ್ಥಿನಿಯನ್ನು ಹೊರಕ್ಕೆ ಕರೆಸಿಕೊಂಡಿದ್ದಾರೆ.
ಚಿತ್ರ ನೋಡುತ್ತಿದ್ದ ವಿದ್ಯಾರ್ಥಿನಿ ಹೊರಕ್ಕೆ ಬಂದಿದ್ದಾಳೆ. ವಿಚಾರಣೆ ನಡೆಸಿದಾಗ ಆಕೆ ತನ್ನ ಪೋಷಕರ ಜೊತೆ ಚಿತ್ರ ನೋಡಲು ಬಂದಿರುವುದು ಸ್ಪಷ್ಟವಾಗಿದೆ. ಪಕ್ಕದಲ್ಲಿ ಕುಳಿತ ಯುವಕ ಯಾರು ಎಂಬುದು ಈಕೆಗೆ ತಿಳಿದಿಲ್ಲ ಎಂಬುದರನ್ನು ಅರಿತ ಪೊಲೀಸರು ವಿದ್ಯಾರ್ಥಿನಿ ಹಾಗೂ ಆಕೆ ಪೋಷಕರು ಚಿತ್ರ ನೋಡಲು ಒಳಗೆ ಕಳಿಸಿದ್ದಾರೆ.
ಈ ವೇಳೆಗೆ ವಾಟ್ಸಪ್ ಸಂದೇಶ ಪಡೆದುಕೊಂಡು ಉಗ್ರರಾಗಿ ಚಿತ್ರಮಂದಿರದತ್ತ ಉಭಯ ಕೋಮಿನ ಜನ ಬಂದಿದ್ದಾರೆ. ಚಿತ್ರ ಮುಗಿದ ಮೇಲೆ ವಿದ್ಯಾರ್ಥಿನಿ ಹಾಗೂ ಆಕೆ ಪೋಷಕರು ಮತ್ತೊಂದು ಬಾಗಿಲಿನಿಂದ ಮನೆ ತಲುಪುವಂತೆ ಪೊಲೀಸರು ಸುರಕ್ಷಿತ ವ್ಯವಸ್ಥೆ ಮಾಡಿದ್ದಾರೆ.
ಸಂದೇಶ ಕಳಿಸಿದ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ತಮಾಷೆಗೆ ಕಳಿಸಿದ್ದ ಸಂದೇಶದಿಂದ ಹೊರಗಡೆ ನೆರೆದಿದ್ದ ಜನ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಕಂಡು ಯುವಕ ಕೂಡಾ ಬೆಚ್ಚಿದ್ದಾನೆ. ಉಭಯ ಕೋಮಿನವರಿಗೂ ಪರಿಸ್ಥಿತಿ ಮನವರಿಕೆಯಾದ ಮೇಲೆ ಜಾಗ ಬಿಟ್ಟು ನಡೆದಿದ್ದಾರೆ. ಹೊಡಿ ಬಡಿಯಲ್ಲಿ ಅಂತ್ಯ ಕಾಣಬೇಕಿದ್ದ ವಾಟ್ಸಪ್ ಪ್ರಕರಣವನ್ನು ಪೊಲೀಸರು ಸೂಕ್ತವಾಗಿ ನಿಭಾಯಿಸಿ ಶಾಂತಿ ಕಾಯ್ದಿದ್ದಾರೆ.(ಏಜೆನ್ಸೀಸ್)
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications