ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಗರ ಬಹು ನಿರೀಕ್ಷಿತ ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

|
Google Oneindia Kannada News

ನವದೆಹಲಿ, ಜುಲೈ 3: ಕರಾವಳಿ ಕರ್ನಾಟಕದ ಕಂಬಳ ಪ್ರೀಯರ ಬಹು ನಿರೀಕ್ಷಿತ ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮೂಲಕ ಕಂಬಳ ಆಚರಣೆಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ.

ಇಂದು ರಾಷ್ಟ್ರಪತಿಗಳು 'ಕರ್ನಾಟಕ ಪ್ರಾಣಿ ಹಿಂಸಾಚಾರ ತಡೆಗಟ್ಟುವ (ತಿದ್ದುಪಡಿ) ವಿಧೇಯಕ - 2017'ಕ್ಕೆ ಅಂಕಿತ ಹಾಕುವ ಮೂಲಕ ತುಳುನಾಡಿನ ಜಾನಪದ ಕ್ರೀಡೆಗೆ ಮತ್ತೆ ಚಾಲನೆ ದೊರಕಿದಂತಾಗಿದೆ. ಇದರ ಜತೆಗೆ ಉತ್ತರ ಕರ್ನಾಟಕದ ಎತ್ತಿನಗಾಡಿ ಓಟಕ್ಕೂ ಹಾದಿ ಸುಗಮವಾಗಿದೆ.

President Mukherjee okays Kambala Bill, which legalise traditional buffalo race

ಈ ಹಿಂದೆ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಕಂಬಳ ತಿದ್ದುಪಡಿ ವಿಧೇಯಕ ಮಂಡಿಸಿತ್ತು. ಎಲ್ಲರ ಒಮ್ಮತಾಭಿಪ್ರಾಯದಿಂದ ಈ ವಿಧೇಯಕವನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು.

President Mukherjee okays Kambala Bill, which legalise traditional buffalo race

ಆದರೆ, ಇದು ಕೇಂದ್ರದ ವಿಷಯವಾಗಿದ್ದರಿಂದ ರಾಜ್ಯಪಾಲರು ಪ್ರಸ್ತಾವನೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದರು. ಇದೀಗ ಇಂದು ಕಂಬಳ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ಈ ಮೂಲಕ ತುಳುನಾಡಿನ ಕೋಣಗಳು ಮತ್ತೆ ಕೆಸರು ಗದ್ದೆಗಿಳಿಯಲಿದ್ದು ಕಂಬಳ ಪ್ರೀಯರ ಕಣ್ಮನ ತಣಿಸಲಿದೆ.

English summary
Kambala lovers of Coastal Karnataka have reason to rejoice with the President of India giving his accent to ‘Kambala Bill’, which legalise traditional buffalo race ‘Kambala’ and bullock cart races in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X