ಮೋದಿ ಅಭಿಮಾನಿಯಿಂದ ಮಂಗ್ಳೂರಲ್ಲಿ 1 ರು.ಗೆ ಆಟೋ ಪ್ರಯಾಣ ಆಫರ್

ಮಂಗಳೂರು, ಮೇ 26 : 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಈಗ ಮೂರು ವರ್ಷದ ಸಂಭ್ರಮ.

ತಮ್ಮ ನಾಯಕ ಯಶಸ್ವಿಯಾಗಿ ಪ್ರಧಾನಿಯಾಗಿ ಮೂರು ವರ್ಷ ಪೂರೈಸಿದ ಖುಷಿಯಲ್ಲಿ ಮೋದಿ ಅಭಿಮಾನಿಯಾಗಿರೋ ಮಂಗಳೂರಿನ ಆಟೋ ಚಾಲಕರೊಬ್ಬರು 1 ರೂಪಾಯಿಗೆ ಗ್ರಾಹಕರಿಗೆ ಪ್ರಯಾಣಿಸಲು ಆಫರ್ ನೀಡಿದ್ದಾರೆ.[ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 10 ಯೋಜನೆಗಳು]

Mangaluru auto driver offers Re 1 ride to mark PM Modi's 3rd year in power

ದೇಶದಲ್ಲಿ ಮೋದಿ ಆಡಳಿತ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಿವಾಸಿಯಾಗಿರುವ ಸತೀಶ್ ಪ್ರಭು ಎಂಬುವರು ಇಂದಿನಿಂದ ಅಂದರೆ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಆಟೋರಿಕ್ಷಾ ಪ್ರಯಾಣ ದರವನ್ನ 5 ಕಿ.ಮೀಗೆ 1 ರು. ನಂತೆ ನಿಗದಿಪಡಿಸಿದ್ದಾರೆ.

Mangaluru auto driver offers Re 1 ride to mark PM Modi's 3rd year in power

ಸತೀಶ್ ಪ್ರಭು ತಮ್ಮ ಆಟೋ ರಿಕ್ಷಾದ ಹಿಂಭಾಗದಲ್ಲಿ ಈ ಬಗ್ಗೆ ಬ್ಯಾನರ್‍ ವೊಂದನ್ನ ಹಾಕಿಕೊಂಡಿರುವುದನ್ನು ನಮೋ ಬ್ರಿಗೆಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದ ಹಾಗೆ ಸತೀಶ್ ಅವರು ಮೋದಿ ಮೇಲೆ ಅಭಿಮಾನ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಸುಮಾರು 150ಕ್ಕೂ ಹೆಚ್ಚು ಜನರಿಗೆ ಇದೇ ರೀತಿಯ ಆಫರ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+