Get Updates
Get notified of breaking news, exclusive insights, and must-see stories!

ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 20 ಯೋಜನೆಗಳು

ಮೇ 26ರಂದು, ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳನ್ನೂ ಪೂರೈಸುತ್ತಿರುವ ನರೇಂದ್ರ ಮೋದಿಯವರ ಸರ್ಕಾರದ ಪ್ರಮುಖ ಸಾಧನೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಮೇ 26ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೂರು ವರ್ಷಗಳನ್ನು ಪೂರೈಸಿದ ಸಂಭ್ರಮ. ಒಂದೆಡೆ ಮೂರು ವರ್ಷಗಳಲ್ಲಿ ಒಂದಿಷ್ಟು ಸಾಧಿಸಿದ ಸಂತಸ, ಮತ್ತೊಂದೆಡೆ ಇನ್ನೆರಡು ವರ್ಷಗಳಲ್ಲಿ ಇನ್ನೂ ಸಾಕಷ್ಟು ಸಾಧಿಸುವ ಹುಮ್ಮಸ್ಸು.

2014ರಲ್ಲಿ ಚರಿತ್ರಾರ್ಹ ಗೆಲುವನ್ನು ದಾಖಲಿಸುವ ಮೂಲಕ ಬಿಜೆಪಿಯು ಪ್ರಚಂಡ ಜಯದೊಂದಿಗೆ ಹತ್ತು ವರ್ಷಗಳ ಯುಪಿಎ ಆಡಳಿತವನ್ನು ಬದಿಗೊತ್ತಿ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಿತು.

ಮೋದಿ ಅಧಿಕಾರಕ್ಕೆ ಬಂದಿದ್ದು ಜನಸಾಮಾನ್ಯರಲ್ಲಿ, ಸಾಮಾಜಿಕ ವಲಯಗಳಲ್ಲಿ ಹೊಸ ಆಶಾಕಿರಣ ಮೂಡಿಸಿತ್ತಲ್ಲದೆ, ಷೇರು ಪೇಟೆಯಲ್ಲೂ ದೊಡ್ಡ ಮಟ್ಟದ ಏರಿಕೆ ದಾಖಲಿಸಿತ್ತು. ಇದು ಆ ಘಳಿಗೆಯಲ್ಲಿ ಮೋದಿ ಆಡಳಿತದ ಬಗ್ಗೆ ಇದ್ದ ನಿರೀಕ್ಷೆಗಳ ಪ್ರತಿಫಲನ.

ಈ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಅಚ್ಚರಿಯಾಗುವಂಥ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ, ಅಲ್ಲಲ್ಲಿ ಒಂದಿಷ್ಟು ಮುಗ್ಗರಿಸಿದೆ ಕೂಡ. ಇದೀಗ ಮೂರು ವರ್ಷಗಳು ತುಂಬಿದ ಮೋದಿ ಸರ್ಕಾರದ ಟಾಪ್ 20 ಸಾಧನೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಕಪ್ಪು ಹಣ ನಿಯಂತ್ರಣಕ್ಕೆ ದಿಟ್ಟ ಕ್ರಮ

ಕಪ್ಪು ಹಣ ನಿಯಂತ್ರಣಕ್ಕೆ ದಿಟ್ಟ ಕ್ರಮ

ದೇಶದ ಆರ್ಥಿಕ ವ್ಯವಹಾರಗಳನ್ನು ಸುಸ್ಥಿತಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳಲ್ಲಿ ಅಪನಗದೀಕರಣ ಬಹು ಮುಖ್ಯವಾದದ್ದು ಹಾಗೂ ಗಾಢವಾದ ಪರಿಣಾಮ ಬೀರಿದಂಥದ್ದು. ಕಳೆದ ವರ್ಷ ನವೆಂಬರ್ 8ರಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆ 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಸಾಮಾಜಿಕ ವಲಯಗಳಲ್ಲಿ, ಆರ್ಥಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಕೋಟ್ಯಂತರ ಜನರಿಗೆ ತೊಂದರೆಯಾದರೂ ಮೋದಿ ನಿರ್ಧಾರಕ್ಕೆ ಜನತೆಯಿಂದ ಶಹಬ್ಬಾಶ್ ಗಿರಿ ಲಭಿಸಿತು.[ಅಪನಗದೀಕರಣದ ನಡುವೆಯೂ ಶೇ. 7ರ ಗಡಿ ತಲುಪಿದ ಜಿಡಿಪಿ]

ಒಂದು ದೇಶ, ಒಂದು ತೆರಿಗೆ

ಒಂದು ದೇಶ, ಒಂದು ತೆರಿಗೆ

ಸ್ವದೇಶಿ ಪರಿಕಲ್ಪನೆ

ಸ್ವದೇಶಿ ಪರಿಕಲ್ಪನೆ

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಹೊಸತರಲ್ಲೇ ಮೋದಿಯವರು 'ಮೇಕ್ ಇನ್ ಇಂಡಿಯಾ'ಕ್ಕೆ ಚಾಲನೆ ನೀಡಿದರು. ಇದಕ್ಕೆ ಪೂರಕವಾಗಿ, ಭಾರತೀಯ ಕೈಗಾರಿಕಾ ವಲಯದಲ್ಲಿ ವಿದೇಶಿ ಬಂಡವಾಳ ಹರಿವಿಗೆ ಬರಲು ಇದ್ದ ಅಡೆತಡೆಗಳನ್ನು ನಿವಾರಿಸಿದರು. ರಕ್ಷಣಾ ವಲಯ ಹಾಗೂ ರೈಲ್ವೇಸ್ ಸೇರಿದಂತೆ ದೇಶದ ಸುಮಾರು ಶೇ. 90ರಷ್ಟು ಕೈಗಾರಿಕೆಗಳಿಗೆ ವಿದೇಶಿ ಬಂಡವಾಳ ಹರಿದುಬರುವಂತೆ ಮಾಡಿದರು. 2017ರಲ್ಲಿ 3 ಲಕ್ಷದ 87 ಸಾವಿರದ 495 ಸಾವಿರ ಕೋಟಿ ರು.ಗಳಷ್ಟು ವಿದೇಶಿ ಬಂಡವಾಳ ಭಾರತಕ್ಕೆ ಹರಿದುಬರುವಂತಾಯಿತು.[ಲೈವ್ : ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ]

ಆರ್ಥಿಕತೆಗೆ ಬಲ ತಂಡ ಐಡಿಯಾ

ಆರ್ಥಿಕತೆಗೆ ಬಲ ತಂಡ ಐಡಿಯಾ

ಗ್ರಾಮೀಣ ಜನತೆಗೆ ಅನುಕೂಲ

ಗ್ರಾಮೀಣ ಜನತೆಗೆ ಅನುಕೂಲ

ಗಾಂಧೀಜಿ ಕನಸಿನ ಬೆನ್ನು ಹತ್ತಿ

ಗಾಂಧೀಜಿ ಕನಸಿನ ಬೆನ್ನು ಹತ್ತಿ

ಮಹಾತ್ಮ ಗಾಂಧಿಯವರ ಆಶಯದಂತೆ ಸ್ವಚ್ಛ ಭಾರತ ಅಭಿಯಾನವು 2014ರ ಅಕ್ಟೋಬರ್ 2ರಿಂದ ಆರಂಭವಾಯಿತು. ಇದರ ಪ್ರಚಾರಕ್ಕಾಗಿ ಸಿನಿಮಾ ನಟರನ್ನು, ಮಾಧ್ಯಮಗಳನ್ನು, ವಾಣಿಜ್ಯ ವಲಯವನ್ನು ಹಾಗೂ ಸೆಲೆಬ್ರಿಟಿಗಳನ್ನು ಬಳಸಿಕೊಂಡರು.[ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನ]

ಎಲ್ಲರಿಗೂ ಸೂರು

ಎಲ್ಲರಿಗೂ ಸೂರು

ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹೊಸ ಚಿಂತನೆ

ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹೊಸ ಚಿಂತನೆ

ಸೇನೆಗೆ ಆತ್ಮವಿಶ್ವಾಸ ತುಂಬಿದ ನಿರ್ಧಾರ

ಸೇನೆಗೆ ಆತ್ಮವಿಶ್ವಾಸ ತುಂಬಿದ ನಿರ್ಧಾರ

ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಬೆಳೆಸುತ್ತಾ ಗಡಿಯಲ್ಲಿ ಪದೇ ಪದೇ ಭಾರತವನ್ನು ಕೆಣಕುವ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ ಮೋದಿ, 2016ರ ಸೆಪ್ಟಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ಭಾರತೀಯ ಸೈನಿಕರನ್ನು ಹೀಗೆ ಕೆಚ್ಚೆದೆಯಿಂದ ಹೋರಾಡುವಂತೆ ಮಾಡಿದ ಮೋದಿಯವರನ್ನು ಇಡೀ ಜನತೆ 'ಭಲೆ, ಭಲೆ' ಎಂದು ಕೊಂಡಾಡಿತು. 2017ರ ಮೇ ನಲ್ಲಿ23 ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತ, ಜಮ್ಮು ಕಾಶ್ಮೀರದ ಗಡಿಯಾಚೆಗಿದ್ದ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಸುಮಾರು 10 ನೆಲೆಗಳನ್ನು ಧ್ವಂಸಗೊಳಿಸಿ ಮತ್ತೆ ಶಹಬ್ಬಾಸ್ ಗಿರಿ ಪಡೆಯಿತು.[ಪಾಕಿಸ್ತಾನದ ಸೇನಾ ನೆಲೆ ಧ್ವಂಸಗೊಳಿಸಿದ 6 ಅಸ್ತ್ರಗಳು]

ಮಧ್ಯಮ ವಾಣಿಜ್ಯದ್ಯೋಮಿಗಳ ಸೃಷ್ಟಿಗೆ ಶ್ರೀಕಾರ

ಮಧ್ಯಮ ವಾಣಿಜ್ಯದ್ಯೋಮಿಗಳ ಸೃಷ್ಟಿಗೆ ಶ್ರೀಕಾರ

ದೇಶದ ವಿದ್ಯಾವಂತರಿಗೆ ಉತ್ತಮ ಉದ್ಯಮಿಗಳಾಗಿ ಬೆಳೆಯುವ ಮಹತ್ವದ ಆಶಯದೊಂದಿಗೆ ಶುರುವಾಗಿದ್ದೇ ಮುದ್ರಾ ಬ್ಯಾಂಕ್. ಮುದ್ರಾ ಯೋಜನೆಯಿಂದಾಗಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ ಮತ್ತು ಆರ್ಥಿಕತೆ ಉತ್ತಮ ಪಡಿಸುವಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. 2016-17ರಲ್ಲಿ ದೇಶದಾದ್ಯಂತ 4 ಕೋಟಿಗೂ ಹೆಚ್ಚು ಜನರಿಗೆ ಸಾಲ ವಿತರಣೆಯಾಗಿತ್ತು. ಸಣ್ಣ ಹಣಕಾಸು ಸಂಸ್ಥೆ, ಬ್ಯಾಂಕ್ ನೀಡುವ ಸಾಲದ ಪ್ರಮಾಣದಲ್ಲಿಯೂ ವೃದ್ಧಿ ಕಂಡಿದೆ. ಒಟ್ಟಾರೆ 1.75 ಲಕ್ಷ ಕೋಟಿ ರುಪಾಯಿ ಸಾಲ ವಿತರಣೆಯಾಗಿದೆ.[ಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡು]

ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ

ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ

ಸ್ನೇಹದ ಹೆಸರಲ್ಲಿ ದಬ್ಬಾಳಿಕೆಗೆ ತಿರುಗೇಟು

ಸ್ನೇಹದ ಹೆಸರಲ್ಲಿ ದಬ್ಬಾಳಿಕೆಗೆ ತಿರುಗೇಟು

ಸ್ನೇಹ ಪರತೆ ಮತ್ತಷ್ಟು ಗಾಢ

ಸ್ನೇಹ ಪರತೆ ಮತ್ತಷ್ಟು ಗಾಢ

28 ವರ್ಷಗಳ ನಂತರ ಅಸ್ತ್ರಕ್ಕೆ ಮಾರ್ಪಾಟು

28 ವರ್ಷಗಳ ನಂತರ ಅಸ್ತ್ರಕ್ಕೆ ಮಾರ್ಪಾಟು

ಕಳೆದ ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಜಾರಿಯಾಗಿದ್ದರೂ ಅನುಷ್ಠಾನಗೊಳ್ಳಲಾಗದೇ ಮೂಲೆ ಗುಂಪಾಗಿದ್ದ ಬೇನಾಮಿ ಆಸ್ತಿ ನಿಗ್ರಹ ಕಾನೂನಿಗೆ ಹೊಸ ಕಾಯಕಲ್ಪ ಕೊಟ್ಟು ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಕಳೆದ ವರ್ಷ ನವೆಂರ್ 1ರಿಂದ ಜಾರಿಗೊಂಡಿರುವ ಈ ಕಾನೂನಿನಿಂದಾಗಿ ಹಲವಾರು ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈವರೆಗೆ ಸುಮಾರು 600 ಕೋಟಿ ರು.ಗಳಷ್ಟು ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ.[ಆರು ತಿಂಗಳಲ್ಲಿ 600 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಪತ್ತೆ]

ಯೋಜನಾ ಆಯೋಗಕ್ಕೆ ಕೊಕ್

ಯೋಜನಾ ಆಯೋಗಕ್ಕೆ ಕೊಕ್

ಈವರೆಗೆ ಭ್ರಷ್ಟಾಚಾರ ರಹಿತ ಸರ್ಕಾರ

ಈವರೆಗೆ ಭ್ರಷ್ಟಾಚಾರ ರಹಿತ ಸರ್ಕಾರ

ಈ ಮೂರು ವರ್ಷಗಳ ಅವಧಿಯಲ್ಲ ಮೋದಿ ಸರ್ಕಾರದ ಯಾವುದೇ ಸಚಿವರು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂಬುದು ಈ ಸರ್ಕಾರದ ದೊಡ್ಡ ಹೆಗ್ಗಳಿಕೆ. ಜನ ಸಾಮಾನ್ಯರ ದೃಷ್ಟಿಯಲ್ಲಿ, ಮಾಧ್ಯಮಗಳ ದೃಷ್ಟಿಯಲ್ಲೂ ಸದ್ಯದ ಮಟ್ಟಿಗೆ ಕ್ಲೀನ್ ಇಮೇಜ್ ಪಡೆದುಕೊಂಡಿರುವ ಮೋದಿ ಸರ್ಕಾರ ಅದೇ ರೀತಿಯಲ್ಲೇ ಮುನ್ನುಗ್ಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ಹೆಜ್ಜೆ ಹೆಜ್ಜೆಗೂ ಹುಷಾರುತನ

ಹೆಜ್ಜೆ ಹೆಜ್ಜೆಗೂ ಹುಷಾರುತನ

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ದೇಶದ ವಿವಿಧ ರಾಜ್ಯಗಳ ಆಂತರಿಕ ರಾಜಕೀಯದಲ್ಲಿ ಜಾಣ್ಮೆ ಪ್ರದರ್ಶಿಸುತ್ತಿರುವುದು ಮೋದಿ ಸರ್ಕಾರದ ಮತ್ತೊಂದು ಜಾಣ್ಮೆಯ ನಡೆ. ಉದಾಹರಣೆಗೆ, ತಮಿಳುನಾಡಿನಲ್ಲಿ ಜಯಲಲಿತಾ ನಿಧನರಾದ ನಂತರ ತಿಂಗಳಾನುಗಟ್ಟಲೆ ನಡೆದ ರಾಜಕೀಯ ವಿದ್ಯಮಾನಗಳಿಂದಾಗಿ ಅಲ್ಲಿ ರಾಜ್ಯ ಸರ್ಕಾರದ ಅಡಿಪಾಯವೇ ಅಲುಗಾಡುವ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ, ಸಾಮಾನ್ಯವಾಗಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ. ಆದರೆ, ಮೋದಿ ಸರ್ಕಾರ ಹಾಗೆ ಮಾಡಲಿಲ್ಲ. ಕಾದು ನೋಡುವ ತಂತ್ರ ಉಪಯೋಗಿಸಿದರು.

ಅದೇ ರೀತಿ, ತಿಂಗಳಾನುಗಟ್ಟಲೇ ಗಲಭೆಗಳಿಂದಾಗಿ ಪ್ರಕ್ಷುಬ್ದ ಪರಿಸ್ಥಿತಿ ಎದುರಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿದ್ದ ರಾಷ್ಟ್ರಪತಿ ಆಡಳಿತವನ್ನು ತೆಗೆದುಹಾಕಿ ಅಲ್ಲೊಂದು ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸಿದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಪ್ರಚಂಡ ಯಶಸ್ಸಿನಿಂದ ಹಿಗ್ಗದೇ ತಾಳ್ಮೆಯಿಂದ ಹುಷಾರಾಗಿ ಹೆಜ್ಜೆಯಿಡುತ್ತಿದ್ದಾರೆ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.

ವಿದೇಶಾಂಗ ಇಲಾಖೆಯ ದಿವ್ಯ ಸ್ಪಂದನ

ವಿದೇಶಾಂಗ ಇಲಾಖೆಯ ದಿವ್ಯ ಸ್ಪಂದನ

ಶತ್ರುರಾಷ್ಟ್ರಗಳ ವಶಕ್ಕೆ ಸಿಕ್ಕ ಭಾರತೀಯರ ಬಗ್ಗೆ ಹಾಗೂ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ಭಾರತೀಯರ ಬಗ್ಗೆ ಸರ್ಕಾರ ಹೇಗೆ ನಡೆದುಕೊಳ್ಳುತ್ತದೆ ಎಂಬುದು ರಾಷ್ಟ್ರದ ಜನತೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಸೆರೆಸಿಕ್ಕವರು, ಯೋಧರಿರಲಿ, ಮೀನುಗಾರರಿರಲಿ ಅಥವಾ ಗೂಢಚಾರಿಗಳಿರಲಿ ಅವರನ್ನು ಉಪಾಯವಾಗಿ ಬಿಡಿಸಿಕೊಂಡು ಬರುವ ಬಗ್ಗೆ ಭಾರತ ಹೇಗೆ ವರ್ತಿಸುತ್ತದೆ ಎಂಬುದು ಈಗ ಸದ್ಯಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕುಲಭೂಷಣ್ ಜಾಧವ್ ಪ್ರಕರಣವೇ ಸಾಕ್ಷಿ.

ಕುಶಲ ತಂತ್ರಜ್ಞರು ಮರಳಿ ತವರಿಗೆ

ಕುಶಲ ತಂತ್ರಜ್ಞರು ಮರಳಿ ತವರಿಗೆ

ವಿದೇಶಕ್ಕೆ ವಲಸೆ ಹೋಗಿದ್ದ ಭಾರತದ ಕುಶಲ ತಂತ್ರಜ್ಞರನ್ನು ಮರಳಿ ಭಾರತಕ್ಕೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮೇ 23ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವರಾದ ಡಾ. ಹರ್ಷವರ್ಧನ್ ಅವರು ಈ ವಿಚಾರ ತಿಳಿಸಿದ್ದಾರೆ. ಕಳೆದ 2-3 ವರ್ಷಗಳಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯ ಇಂಜಿನಿಯರ್ ಗಳು ಭಾರತಕ್ಕೆ ಹಿಂದಿರುಗಿದ್ದಾರೆಂದು ಅವರು ತಿಳಿಸಿದ್ದಾರೆ.

ವಿದೇಶಿ ಬಂಡವಾಳದಿಂದ ಹೆಚ್ಚಿನ ಉತ್ತೇಜನ

ವಿದೇಶಿ ಬಂಡವಾಳದಿಂದ ಹೆಚ್ಚಿನ ಉತ್ತೇಜನ

ಭಾರತೀಯ ರಕ್ಷಣಾ ಇಲಾಖೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಮೋದಿ ಸರ್ಕಾರ, ತನ್ನ ವಾರ್ಷಿಕ ಬಜೆಟ್ ನಲ್ಲಿ ದೊಡ್ಡ ಪಾಲು ನೀಡುತ್ತಲೇ ಬಂದಿತು. ಅಲ್ಲದೆ, ಈ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿದ್ದರಿಂದಾಗಿ ಯುದ್ಧ ಪರಿಕರ ಸಾಮಗ್ರಿ ತಯಾರಿಸುವ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾದ ಇಸ್ರೇಲ್ ನಿಂದ ಸಾವಿರಾರು ಕೋಟಿ ರು.ಗಳ ಮೌಲ್ಯದ ಯುದ್ಧ ಶಸ್ತ್ರಾಸ್ತ್ರ ಖರೀದಿ ಹಾಗೂ ಭಾರತೀಯ ಸೇನೆಯಿಂದ ಇಸ್ರೇಲ್ ನ ರಕ್ಷಣಾ ಕ್ಷೇತ್ರದಲ್ಲಿ 2.5 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಹೂಡಿಕೆಗೆ ಅನುವು ಮಾಡಿಕೊಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+