ಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡು

By: ಪ್ರಣವ್ ಗುಪ್ತಾ ಮತ್ತು ನಿತಿನ್ ಮೆಹ್ತಾ
Subscribe to Oneindia Kannada

ಅಭಿವೃದ್ಧಿ ಹೊಂದುತ್ತಿರುವ ಭಾರತದ ಯುವಕರನ್ನು ಅತಿಯಾಗಿ ಕಾಡುತ್ತಿರುವ ಸಮಸ್ಯೆಯಾವುದು ಗೊತ್ತೆ? ಅದು ನಿರುದ್ಯೋಗ!

ತಾನು ಗಳಿಸಿದ ಪದವಿಯ ಪ್ರಮಾಣಪತ್ರ, ಅಂಕಪಟ್ಟಿಯನ್ನು ಕೈಯಲ್ಲಿ ಹಿಡಿದು ಉದ್ಯೋಗದ ಹುಡುಕಾಟದಲ್ಲಿರುವ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ಚುನಾವಣೆಗೂ ಮೊದಲೇ ನರೇಂದ್ರ ಮೋದಿ ನೀಡಿದ್ದರು.

ಈ ಕಾರಣದಿಂದಾಗಿಯೇ ಮುದ್ರಾ ಯೋಜನೆಗೆ ಅಡಿಪಾಯ ಹಾಕಲಾಗಿದೆ. ಸರ್ವರಿಗೂ ಉದ್ಯೋಗ ನೀಡುವ ಭರವಸೆಯೆಂದರೆ ಉದ್ಯೋಗ ಸೃಷ್ಟಿಯಲ್ಲ, ಆದರೆ ಯುವಕರಿಗೆ ಸ್ವಉದ್ಯೋಗ ಆರಂಭಿಸುವ ಅವಕಾಶವನ್ನೂ ಸೃಷ್ಟಿಸುವುದು.

ಈ ಕಾರಣದಿಂದಾಗಿ, ಮುದ್ರಾ ಯೋಜನೆಯ ಮೂಲಕ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಮತ್ತು ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ನರೇಂದ್ರ ಮೋದಿ ಸರಕಾರ ನಿರತವಾಗಿದೆ. 2015ರಲ್ಲಿಯೇ ನರೇಂದ್ರ ಮೋದಿಯವರು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದ್ದರು.

Self Employment and Job Creation: Tracking the Progress of Mudra Yojana under Modi

ಹಿಂದೆ ಕೂಡ, ಇತರ ಸರಕಾರಗಳು ಇದ್ದಾಗ ನಿರುದ್ಯೋಗಿಗಳಿಗೆ ಸಾಲ ನೀಡಿ ಗುಡಿಕೈಗಾರಿಕೆ ಆರಂಭಿಸಲು, ಉದ್ಯಮಿಗಳಿಗೆ ಉತ್ತೇಜನ ನೀಡುವ ಪ್ರಕ್ರಿಯೆ ನಡೆದಿತ್ತು. ಆದರೆ, ಆ ಸರಕಾರಗಳು ಪರಿಣಾತ್ಮಕವಾಗಿ ಆ ಯೋಜನೆಗಳನ್ನು ರೂಪಿಸಲು ವಿಫಲವಾಗಿದ್ದರಿಂದ ಮುದ್ರಾ ಯೋಜನೆಗೆ ಚಾಲನೆ ನೀಡಬೇಕಾಯಿತು.

ಮುದ್ರಾ ಯೋಜನೆಯಂದ್ರೆ ಏನು?
ಮುದ್ರಾ ಯೋಜನೆಯಡಿಯಲ್ಲಿ, ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವ ಬ್ಯಾಂಕೇತರ ಸಂಸ್ಥೆ ಮತ್ತು ಹಣದ ಸಹಾಯ ಒದಗಿಸುವ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಒದಗಿಸುವುದು. ಎನ್ಎಸ್ಎಸ್ಓ 2013 ಪ್ರಕಾರ, ಭಾರತದಲ್ಲಿ 5 ಕೋಟಿಗೂ ಹೆಚ್ಚು ಗುಡಿಕೈಗಾರಿಕೆಗಳಿವೆ.

ಬಹುತೇಕ ಗುಡಿಕೈಗಾರಿಕೆಗಳು ಒಬ್ಬಂಟಿ ಮಾಲಿಕತ್ವದಲ್ಲಿದ್ದು, ಭಾರತದ ಆರ್ಥಿಕ ಕ್ಷೇತ್ರದ ಅವಿಭಾಜ್ಯ ಅಂಗವಾಗಿವೆ. ಇವರು ಮೂರು ವಿಭಾಗಗಳಲ್ಲಿ ಸಾಲವನ್ನು ಪಡೆಯಬಹುದು. 50 ಸಾವಿರದವರೆಗೆ ಶಿಶು ಯೋಜನೆ, 50 ಸಾವಿರದಿಂದ 5 ಲಕ್ಷದವರೆಗೆ ತರುಣ್ ಯೋಜನೆ ಮತ್ತು 5 ಲಕ್ಷ ರು.ಗಿಂತ ಹೆಚ್ಚಿನ ಮಧುರ ಯೋಜನೆ.

ಮುದ್ರಾ ಯೋಜನೆಯ ಫಲಾನುಭವಿಗಳಾರು?
ಗುಡಿಕೈಗಾರಿಕೆಗಳು, ಏಕವ್ಯಕ್ತಿ ಉದ್ಯಮಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಮೊದಲಿಗೆ ಇವರು ಸಾಂಪ್ರದಾಯಿಕ ಮೂಲಗಳಿಂದ ಸಾಲ ಪಡೆಯಲು ವಿಫಲರಾಗಿದ್ದರಿಂದ ಅನ್ಯದಾರಿಯಿಲ್ಲದೆ ಸ್ಥಳೀಯ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಹಣಕಾಸು ಸಹಾಯ ಪಡೆಯುತ್ತಿದ್ದರು.

ಸಣ್ಣ ಅಂಗಡಿ ಮಾಲಿಕರು, ಹಣ್ಣು ತರಕಾರಿ ಮಾರಾಟಗಾರರು, ಸಣ್ಣ ವರ್ಕ್ ಶಾಪ್ ಅಥವಾ ರಿಪೇರಿ ಅಂಗಡಿ ಇಟ್ಟುಕೊಂಡವರು ಇಂದು ಮುದ್ರಾ ಯೋಜನೆಯನ್ನು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಸಾಲದ ಮರುಪಾವತಿ
ಮುದ್ರಾ ಯೋಜನೆಯಿಂದಾಗಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ ಮತ್ತು ಆರ್ಥಿಕತೆ ಉತ್ತಮ ಪಡಿಸುವಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. 2016-17ರಲ್ಲಿ ದೇಶದಾದ್ಯಂತ 4 ಕೋಟಿಗೂ ಹೆಚ್ಚು ಜನರಿಗೆ ಸಾಲ ವಿತರಣೆಯಾಗಿತ್ತು. ಸಣ್ಣ ಹಣಕಾಸು ಸಂಸ್ಥೆ, ಬ್ಯಾಂಕ್ ನೀಡುವ ಸಾಲದ ಪ್ರಮಾಣದಲ್ಲಿಯೂ ವೃದ್ಧಿ ಕಂಡಿದೆ. ಒಟ್ಟಾರೆ 1.75 ಲಕ್ಷ ಕೋಟಿ ರುಪಾಯಿ ಸಾಲ ವಿತರಣೆಯಾಗಿದೆ.

ಹೊಸ ಉದ್ಯಮಿಗಳಿಂದ ಹೆಚ್ಚು ಸಾಲ
ಹೊಸ ವ್ಯಾಪಾರ ಹುಟ್ಟುಹಾಕುವಲ್ಲಿ ಈ ಯೋಜನೆ ಸಫಲವಾಗಿದೆ. ಇವರಲ್ಲಿ ಹೊಸದಾಗಿ ವ್ಯಾಪಾರ ಆರಂಭಿಸಿದ ಉದ್ಯಮಿಗಳು ಯಾರು ಮತ್ತು ಹಳೆ ವ್ಯಾಪಾರ ಮಾಡಿಕೊಂಡೇ ಹೊಸ ವ್ಯಾಪಾರವನ್ನು ಆರಂಭಿಸಿದವರು ಯಾರು ಎಂಬುದನ್ನು ಇನ್ನೂ ಕಂಡುಕೊಳ್ಳಬೇಕಾಗಿದೆ.

(ಪ್ರಣವ್ ಗುಪ್ತಾ ಅವರು ಸ್ವತಂತ್ರ ಸಂಶೋದಕರು. ನಿತಿನ್ ಮೆಹ್ತಾ ಅವರು ರಣ್‌ನೀತಿ ಕನ್ಸಲ್ಟಿಂಗ್ ಮತ್ತು ಸಂಶೋಧನೆ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದಾರೆ.)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Under MUDRA Yojana, the government provides refinancing to micro credit institutions and non-banking financial corporations engaged in lending to micro enterprises.
Please Wait while comments are loading...