ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಸೇನಾ ನೆಲೆ ಧ್ವಂಸಗೊಳಿಸಿದ 6 ಅಸ್ತ್ರಗಳು

|
Google Oneindia Kannada News

ಮಂಗಳವಾರ (ಮೇ 23) ಬೆಳಗ್ಗೆ, ಭಾರತೀಯ ಸೇನೆಯು ಜಮ್ಮು ಕಾಶ್ಮೀರದ ನೌಶಾರಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಗಡಿಯೊಳಗೆ ಇದ್ದ ಪಾಕಿಸ್ತಾನ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನ ಇತ್ತೀಚೆಗೆ ಹಲವಾರು ಬಾರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು.

ಇದರ ಪರಿಣಾಮವಾಗಿ, ಪಾಕಿಸ್ತಾನದ ಗಡಿಯ ಸಮೀಪವಿರುವ ಹಳ್ಳಿಗಳಲ್ಲಿ ಅಮಾಯಕರು ಸಾವಿಗೀಡಾಗಿದ್ದರು. ಭಾರತವು ಎಷ್ಟೇ ಬಾರಿ ಎಚ್ಚರಿಕೆ ನೀಡಿದರು, ಗುಂಡಿನ ದಾಳಿಯ ಮೂಲಕ ಪ್ರತ್ಯುತ್ತರ ನೀಡಿದರೂ ಪಾಕಿಸ್ತಾನ ಸೈನ್ಯದ ಉಪಟಳ ಹೆಚ್ಚಾಗಿತ್ತು.

ಇದರಿಂದ ರೋಸಿ ಹೋಗಿದ್ದ ಭಾರತೀಯ ಸೇನೆಯು, ಕೇಂದ್ರ ಸರ್ಕಾರದ ಆಣತಿಯಂತೆ ಮಂಗಳವಾರ ಪಾಕಿಸ್ತಾನದ ಸೇನೆಯ ಮೇಲೆ ಉಗ್ರ ಕ್ರಮ ಕೈಗೊಂಡು ಕೆಲವೇ ನಿಮಿಷಗಳ ಕಾಲ ದಾಳಿ ನಡೆಸಿ ಪಾಕಿಸ್ತಾನದ ಕೆಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.

ದೇಶಾಭಿಮಾನಿಗಳಿಗೆ ಸಹಜವಾಗಿ ಹರ್ಷ ತಂದಿರುವ ಈ ದಾಳಿಯಲ್ಲಿ ಭಾರತೀಯ ಸೇನೆ ಉಪಯೋಗಿಸಿದ ಅಸ್ತ್ರಗಳ್ಯಾವು, ಅವುಗಳ ವಿಶೇಷತೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.(ಚಿತ್ರ ಕೃಪೆ: ವಿಕಿಪೀಡಿಯಾ)

3 ಕಿ.ಮೀ ವರೆಗೆ ಗುಂಡು ಹಾರಿಸುವ ಸಾಮರ್ಥ್ಯ

3 ಕಿ.ಮೀ ವರೆಗೆ ಗುಂಡು ಹಾರಿಸುವ ಸಾಮರ್ಥ್ಯ

ಸಾಮಾನ್ಯವಾಗಿ ಟ್ಯಾಂಕರ್ ಗಳನ್ನು ಟಾರ್ಗೆಟ್ ಮಾಡಲು ಬಳಸುವ ಗನ್ ಇದು. ಒಂದು ನಿಮಿಷಕ್ಕೆ ಒಂದು ರೌಂಡ್ ಗುಂಡು ಸಿಡಿಸಬಲ್ಲ ಶಕ್ತಿಯುಳ್ಳದ್ದು. ತ್ವರಿತವಾಗಿಯೂ ಉಪಯೋಗಿಸಬಹುದು. ಸತತ ಐದು ರೌಂಡ್ ವರೆಗೆ ಗುಂಡು ಸಿಡಿಸಬಲ್ಲದು. ಸುಮಾರು 3 ಕಿ.ಮೀ. ದೂರದವರೆಗೆ ಗುಂಡು ಹಾರಿಸುವ ಸಾಮರ್ಥ್ಯ ಇದಕ್ಕಿದೆ.

ಬೋಫೋರ್ಸ್ ಫಿರಂಗಿಗಳ ಬದಲಿಗೆ ಇವು ಉಪಯೋಗ

ಬೋಫೋರ್ಸ್ ಫಿರಂಗಿಗಳ ಬದಲಿಗೆ ಇವು ಉಪಯೋಗ

ಇವನ್ನು ಡೈರೆಕ್ಟ್ ಫೈರಿಂಗ್ ಮೋಡ್ ನಲ್ಲಿ ಉಪಯೋಗಿಸಬಹುದು. ಕಳೆದ ಅಕ್ಟೋಬರ್ ನಲ್ಲಿ ಪಾಕಿಸ್ತಾನದ ಕೆಲವಾರು ಬಂಕ್ ಗಳನ್ನು ಧ್ವಂಸ ಮಾಡಿದ್ದಾಗ ಭಾರತೀಯ ಸೇನೆ ಬೋಫೋರ್ಸ್ ಫಿರಂಗಿಗಳನ್ನು ಉಪಯೋಗಿಸಿತ್ತು. ಗಡಿಯ ಮಛಿಲ್ ನಲ್ಲಿ ಭಾರತೀಯ ಸೈನಿಕ ಮಂದೀಪ್ ಸಿಂಗ್ ಅವರನ್ನು ಪಾಕಿಸ್ತಾನದ ಯೋಧರು ಶಿರಚ್ಛೇದ ಮಾಡಿದ್ದರಿಂದಾಗಿ ಭಾರತೀಯ ಸೇನೆ ಆ ಕ್ರಮ ಕೈಗೊಂಡಿತ್ತು. ಈ ಬಾರಿ, ಅವುಗಳ ಬದಲಿಗೆ ಆರ್ಟಿಲೆರಿ ಗನ್ ಉಪಯೋಗಿಸಲಾಗಿದೆ.

ಎರಡೂವರೆ ಕಿ.ಮೀ.ವರೆಗೆ ಗುರಿ

ಎರಡೂವರೆ ಕಿ.ಮೀ.ವರೆಗೆ ಗುರಿ

ಝೆಡ್ ಯು-23-2ಬಿ ಆ್ಯಂಟಿ ಏರ್ ಕ್ರಾಫ್ಟ್ ಪಿಸ್ತೂಲುಗಳನ್ನು ಸಾಮಾನ್ಯವಾಗಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವುದಕ್ಕಾಗಿ ಪ್ರಯೋಗಿಸಲಾಗುತ್ತದೆ. 1950ರಲ್ಲಿ ಸೋವಿಯತ್ ರಷ್ಯಾದಲ್ಲಿ ತಯಾರಾದ ಈ ಮಾದರಿಯ ಫಿರಂಗಿಗಳನ್ನು ಭಾರತೀಯ ಸೇನೆಯು ಬಹು ಹಿಂದಿನಿಂದಲೇ ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಇದರಿಂದ ಹೊರಟ ಗುಂಡು ಸುಮಾರು ಎರಡೂವರೆಗೆ ಕಿ.ಮೀ. ದೂರ ಕ್ರಮಿಸಬಲ್ಲದು. ಸದ್ಯಕ್ಕೆ ಭಾರತೀಯ ಸೇನೆಯಲ್ಲಿ ಇಂಥ ಸುಮಾರು 468 ಗನ್ ಗಳಿದ್ದು, ಸುಮಾರು 670 ಕೋಟಿ ರು. ವೆಚ್ಛದಲ್ಲಿ ಇವುಗಳನ್ನು ಆಧುನೀಕರಿಸಲು ಭಾರತೀಯ ಸೇನೆ ಮುಂದಾಗಿದೆ.

ಭಾರತ, ಫ್ರಾನ್ಸ್, ರಷ್ಯಾದ ತಂತ್ರಜ್ಞಾನದ ಸಮ್ಮಿಶ್ರಣ

ಭಾರತ, ಫ್ರಾನ್ಸ್, ರಷ್ಯಾದ ತಂತ್ರಜ್ಞಾನದ ಸಮ್ಮಿಶ್ರಣ

ಇವನ್ನು ಫ್ರಾನ್ಸ್ ಹಾಗೂ ರಷ್ಯಾದ ತಂತ್ರಜ್ಞರ ಸಹಾಯದಿಂದ ಭಾರತ್ ಡೈನಮಿಕ್ಸ್ ಲಿಮಿಟೆಡ್ (ಬಿಡಿಎಲ್) ನಿರ್ಮಿಸಿದೆ. ಇತ್ತೀಚೆಗೆ ಇಸ್ರೇಲ್ ಜತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರತಕ್ಕೆ ಸುಮಾರು 3,200 ಕೋಟಿ ರು. ಮೌಲ್ಯದ ಮತ್ತಷ್ಟು ಎಟಿಜಿಎಂಗಳು ಉಪಯೋಗಕ್ಕೆ ಸಿಗಲಿವೆ. ಇವುಗಳಿಂದ ಹೊರಡುವ ಗುಂಡು ಸುಮಾರು 2.5 ಕಿ.ಮೀ.ವರೆಗೆ ಸಾಗುತ್ತವೆ.

ಪಕ್ಕಾ ಸ್ವದೇಶಿ ಅಸ್ತ್ರ

ಪಕ್ಕಾ ಸ್ವದೇಶಿ ಅಸ್ತ್ರ

ಭಾರತೀಯ ಸೇನೆಯು ಸಾಮಾನ್ಯವಾಗಿ ಉಪಯೋಗಿಸುವ ಅಸ್ತ್ರವಿದು. ಇವುಗಳ ಪೂರ್ಣ ಹೆಸರು 84 ಎಂಎಂ ಕಾರ್ಲ್ - ಗುಸ್ಟಾವ್ ರಾಕೆಟ್ ಲಾಂಚರ್ಸ್. ಇದು ಪಕ್ಕಾ ಸ್ವದೇಶೀ ಅಸ್ತ್ರ. ಸುಮಾರು 1 ಕಿ.ಮೀ. ದೂರದಲ್ಲಿರುವ ಶತ್ರುವಿನ ಯಾವುದೇ ಪರಿಕರ, ನೆಲೆಯನ್ನು ಧ್ವಂಸಗೊಳಿಸಬಲ್ಲದು.

ರಷ್ಯಾ ಮೂಲದ ಅಸ್ತ್ರ

ರಷ್ಯಾ ಮೂಲದ ಅಸ್ತ್ರ

ಭಾರತೀಯ ಸೇನೆಯಲ್ಲಿ ಇರುವ ಎಜಿಎಸ್ - 30 ಗ್ರೆನೇಡ್ ಲಾಂಚರ್ಸ್ ಗಳು ರಷ್ಯಾ ಮೂಲದವು. ಇವು ಸುಮಾರು 2 ಕಿಮೀ ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸಬಲ್ಲವು.

English summary
The Indian army said it pounded Pakistani posts, crippling their ability to help militants cross the Line of Control on May 23, 2017. Here are the list of weapons those are used by Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X