ನನ್ಮಗಂದ್, ಓಟು ಕೇಳಲ್ಲ. ಶಾಸಕನಾಗಬೇಕಿದ್ರೆ ಓಟ್ ಹಾಕಿ ಗೆಲ್ಸಿ ಅಷ್ಟೆ!

Posted By:
Subscribe to Oneindia Kannada
   ಹುಚ್ಚ ವೆಂಕಟ್ ಈ ಬಾರಿ ಕರ್ನಾಟಕ ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧೆ | Oneindia Kannada

   ಮಂಗಳೂರು, ಏಪ್ರಿಲ್ 11: "ನಾನು ರಾಜಕೀಯಕ್ಕೆ ಈಗಾಗಲೇ ಎಂಟ್ರಿ ಕೊಡ್ತಿದ್ದೇನೆ . ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಎಂಎಲ್ಎ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಆದರೆ ಚುನಾವಣೆಗೆ ನಾನು ಯಾರ ಮುಂದೂ ತಲೆ ತಗ್ಗಿಸಿ ಕೈ ಮುಗಿದು ಓಟು ಕೇಳಲ್ಲ. ನಾನು ಶಾಸಕನಾಗಿ ನಿಮಗೆ ಬೇಕಾದರೆ ನನಗೆ ಮತ ಹಾಕಿ." ಈ ರೀತಿ ಡೈಲಾಗ್ ಹೊಡೆದಿದ್ದು ಬೇರೆ ಯಾರು ಅಲ್ಲ. ಹುಚ್ಚಾ ವೆಂಕಟ್ . ಇನ್ಯಾರು ತಾನೆ ಈ ರೀತಿ ಡೈಲಾಗ್ ಬಿಡಲು ಸಾಧ್ಯ ಹೇಳಿ!

   ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಹುಚ್ಚಾ ವೆಂಕಟ್, "ಒಂದಲ್ಲ ಒಂದು ದಿನ‌ ನಾನು ಈ ದೇಶದ ಪ್ರಧಾನ ಮಂತ್ರಿ ಆಗೇ ಆಗುತ್ತೇನೆ. ನಾನು ಈ ಬಾರಿ ಚುನಾವಣೆಗೆ ನಿಂತಿದ್ದೇನೆ. ಆದರೆ ಓಟ್ ಗಾಗಿ ನಾನು ಡ್ರಿಂಕ್ಸ್, ಸೀರೆ, ಹಣ ಕೊಡಲ್ಲ. ಓಟು ಕೇಳಲ್ಲ. ಮನೆ - ಮನೆ‌ಗೆ ತೆರಳಿ ಪ್ರಚಾರ ಮಾಡಲ್ಲ. ನಾನು‌ ಯಾರ ಮುಂದೆನೂ ಕೈಯೂ ಮುಗಿಯಲ್ಲ. ನಾನ್ಯಾಕೆ ಬೇರೆ ರಾಜಕೀಯ ವ್ಯಕ್ತಿಗಳ ತರಹ ಕೈಮುಗಿಲಿ? ನಿಮಗೆ ನಾನು ಶಾಸಕನಾಗಿ ಬೇಕಂದ್ರೆ ಓಟ್ ಕೊಟ್ಟು ಗೆಲ್ಲಿಸಿ," ಎಂದು ಹೇಳಿದರು.

   Huccha Venkat contesting upcoming assembly election from Rajarajeshwari Nagar

   ಚುನಾವಣೆಗೆ ನಿಂತಿದ್ದೇನೆ ಅಂದ್ರೆ ದುಡ್ಡು ಕೊಟ್ಟು ತಮಟೆ ಬಡಿಯೋ‌ ಕೆಲಸಾನೂ ನಾನು ಮಾಡಲ್ಲ. ಒಂದು ಸಲ ಡ್ರಿಂಕ್ಸ್ ,‌ ಸೀರೆ, ಹಣ ತೆಗೊಂಡ್ರೆ ಹೆಚ್ಚೆಂದರೆ ಒಂದು‌ ತಿಂಗಳು ಉಪಯೋಗವಾಗಬಹುದು. ಆದರೆ, ಬಳಿಕ 5 ವರ್ಷ ಕಷ್ಟಪಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

   ನನ್ಮಗಂದ್, ಸ್ವಂತ ಪಕ್ಷ ಶುರು ಮಾಡಿ ಪ್ರಧಾನಿ ಆಗ್ತಾರಂತೆ ಹುಚ್ಚ ವೆಂಕಟ್

   ಬಿಗ್ ಬಾಸ್ ನಿಂದ ಬಂದ ಮೇಲೆ ನನ್ನ ಹುಚ್ಚ ವೆಂಕಟ್ ಚಿತ್ರ ಸೂಪರ್ ಹಿಟ್ ಆಗಿದೆ ಎಂದು ಹೇಳಿದ ಅವರು, ಕರಾವಳಿ ಮೀನು ಗಾರಿಕೆ ಬಗ್ಗೆ ಪ್ರಸ್ತಾಪಿಸಿದರು. "ಮೀನುಗಾರಿಕೆ ನಡೆಸುವವರು ಮೀನು ಹಿಡಿಯಲು ಹೋಗಿ ಯಾಕೆ ಲೈಫ್ ನಲ್ಲಿ ರಿಸ್ಕ್ ತೆಗೋಬೇಕು? ವ್ಯವಸಾಯ ಕೂಡಾ ಮಾಡಬಹುದು ಅಲ್ವಾ?" ಎಂದು ವಿಚಿತ್ರ ಸಲಹೆ ನೀಡಿದರು.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   "ಯಾರೋ‌ ಮೀನು ತಿನ್ನಬೇಕೆಂದು ನೀವ್ಯಾಕೆ ಜೀವನ‌ ರಿಸ್ಕ್‌ ಮಾಡ್ಕೋಬೇಕು. ಇಷ್ಟು ವರ್ಷ ಸರಕಾರಕ್ಕೆ ಹಣ ಕಟ್ಟಿದ್ದೇವೆಂದು ಸರಕಾರಕ್ಕೆ ಹೇಳಿ. ಸರಕಾರದಿಂದ ಸಹಾಯ ಪಡೆದು ವ್ಯವಸಾಯ ಮಾಡಿ," ಎಂದು ಅವರು ಮೀನುಗಾರರಿಗೆ ಆಗ್ರಹಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Speaking to media person today in Mangaluru Firing star Huccha Venkat said that he is going to contest upcoming assembly election from Rajarajeshwari Nagar constituency of Bengaluru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ