ಎತ್ತಿನ ಹೊಳೆ ಯೋಜನೆ : ಸಚಿವ ಖಾದರ್ ಕೊಟ್ಟ ಉತ್ತರ

* ಭಾರತೀಯ ವಿಜ್ಞಾನ ಸಂಸ್ಥೆಯು ಎತ್ತಿನಹೊಳೆ ಯೋಜನೆಯಡಿ ಲಭ್ಯವಾಗುವ ನೀರಿನ ಪ್ರಮಾಣದ ಕುರಿತು ಯಾವುದೇ ಅಧಿಕೃತ ವರದಿ ಪ್ರಕಟಿಸಿಲ್ಲ. ನೀರಾವರಿ ನಿಗಮವು ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಕುರಿತು ಜಲವಿಜ್ಞಾನ ಕ್ಷೇತ್ರದ ಪರಿಣತ ತಂತ್ರಜ್ಞರಿಂದ ವೈಜ್ಞಾನಿಕವಾಗಿ ನೀರಿನ ಲೆಕ್ಕಾಚಾರ ಮಾಡಿಸಿದ್ದು, ಇದರನ್ವಯ ಯೋಜನೆಗೆ ಲಭ್ಯವಾಗುವ ನೀರಿನ ಪ್ರಮಾಣ 24 ಟಿಎಂಸಿ. [ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ಬರಿದಾಗುತ್ತೆ]

* ಯೋಜನಾ ವರದಿಯಲ್ಲಿ ಅಳವಡಿಸಿಕೊಂಡಿರುವ ನೀರಿನ ಪ್ರಮಾಣ ಮತ್ತು ಈ ಸಂಸ್ಥೆಗಳು ಲೆಕ್ಕಹಾಕಿರುವ ನೀರಿನ ಪ್ರಮಾಣದಲ್ಲಿ ಬಹುತೇಕ ಸಾಮ್ಯತೆಯಿದೆ. ಎತ್ತಿನಹೊಳೆ ಯೋಜನೆಯಡಿ ಪಶ್ಚಿಮಘಟ್ಟದ ಆರ್ ಎಲ್ 730 ಮೀ. ಮೇಲ್ಭಾಗದಲ್ಲಿನ 8 ಸಣ್ಣ ಹಳ್ಳಗಳಿಂದ ಮಳೆಗಾಲದಲ್ಲಿ ಮಾತ್ರ ನೀರನ್ನು ತಿರುವುಗೊಳಿಸಲು ಯೋಜಿಸಿರುವುದರಿಂದ ಕೆಲಭಾಗದ ಜನರ ಬೇಡಿಕೆಗೆ ಯಾವುದೆ ತೊಂದರೆಯಾಗುವುದಿಲ್ಲ.

Discussion on Yettinahole project in Mangaluru

* ನೀರಿನ ಲಭ್ಯತೆಯನ್ನು ಜಲವಿಜ್ಞಾನ ಕ್ಷೇತ್ರದ ತಂತ್ರಜ್ಞರಿಂದ ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿಸಿದ್ದು ಮತ್ತು ಜಲವಿಜ್ಞಾನ ಅಧಿಕೃತ ಸಂಸ್ಥೆಗಳಿಂದ ದೃಢೀಕರಣ ಪಡೆದುಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಮಳೆಗಾಲ ಅವಧಿಯು ಜೂನ್‌ನಿಂದ ನವೆಂಬರ್‌ವರೆಗೆ ಮಾತ್ರ 24.01 ಟಿಎಂಸಿ ನೀರನ್ನು 8 ಹಳ್ಳಗಳಿಂದ ತಿರುವುಗೊಳಿಸಲು ಯೋಜಿಸಲಾಗಿದೆ. ಉಳಿದ ಸಮಯದಲ್ಲಿ ಯಾವುದೇ ನೀರನ್ನು ಈ ಯೋಜನೆಯಿಂದ ತಿರುವುಗೊಳಿಸುವುದಿಲ್ಲ. [ಎತ್ತಿನಹೊಳೆ ಕುಡಿಯುವ ನೀರಿಗಾಗಿ ಮಾತ್ರ]

* ಮೊದಲನೇ ಹಂತದ ಕಾಮಗಾರಿಗೆ ಪಶ್ಚಿಮ ಘಟ್ಟದಲ್ಲಿ ಕೇವಲ 13.93 ಹೆಕ್ಟೆರ್‌ನಷ್ಟು ಅರಣ್ಯ ಭೂಮಿಯ ಆವಶ್ಯಕತೆಯಿದ್ದು ಅರಣ್ಯ (ಸಂರಕ್ಷಣಾ) ಕಾಯ್ದೆ, 1980 ರನ್ವಯ ಯೋಜನೆಗೆ ಅನುಮತಿ ಪಡೆದು ಮೇಲೆ ತಿಳಿಸಿದ 13.93 ಹೆ. ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ಭೂಮಿಯ ಲಭ್ಯತೆಯ ಆಧಾರದ ಮೇಲೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

*ಈ ಯೊಜನೆಯಡಿ 24.01 ಟಿಎಂಸಿ ನೀರನ್ನು ಮಳೆಗಾಲ ಅವಧಿಯಲ್ಲಿ ಮಾತ್ರ ತಿರುವುಗೊಳಿಸಲು ಯೋಜಿಸಲಾಗಿರುವುದರಿಂದ ಈ ಅವಧಿಯಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವುದರಿಂದ ಮತ್ತು ವಿದ್ಯುತ್ ಬೇಡಿಕೆ ಕಡಿಮೆ ಇರುವುದರಿಂದ ಯೋಜನೆಗೆ ಬಹುತೇಕ ವಿದ್ಯುತ್ ಕೊರತೆ ಉಂಟಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+