KRS Water Level: ಬೆಂಗಳೂರಿಗೆ ನೀರು ಕೊಡುವ ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

ಬೆಂಗಳೂರು, ಮಾರ್ಚ್ 11: ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೊದಲೇ ಬರ ಆವರಿಸಿದೆ. ನದಿಗಳು ಬರಿದಾಗುತ್ತಿದೆ, ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗರಿಷ್ಠ ಇಳಿಕೆಯಾಗಿದೆ. ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ, ಇನ್ನೂ ಬೆಂಗಳೂರು, ಮೈಸೂರಿನಂತಹ ಬೃಹತ್‌ ನಗರಗಳಲ್ಲಿ ಜನ ಬಳಕೆಗೆ ನೀರು ಪೂರೈಸುವುದೇ ಸವಾಲಾಗಿದೆ.

ರಾಜ್ಯದಲ್ಲಿ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್‌ನಲ್ಲೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ನೀರು ಕಳ್ಳತನ, ಅಕ್ರಮ ನೀರು ಸರಬರಾಜು, ತಮಿಳುನಾಡಿಗೆ ನೀರು ಬಿಡುವುದು ಈ ಎಲ್ಲಾ ಸಮಸ್ಯೆಗಳಿಂದ ಕೆಆರ್‌ಎಸ್‌ ನೀರಿನ ಪ್ರಮಾಣ ಕಡಿಮೆಯಾಗಿದೆ.

What Is The Current Water Level Of KRS Dam

ಕರ್ನಾಟಕದಲ್ಲಿಯೇ ನೀರಿಲ್ಲ, ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಕೆಆರ್​ಎಸ್​ ಡ್ಯಾಂನ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವ ಆಕ್ರೋಶ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೆಆರ್​ಎಸ್​​ ಡ್ಯಾಂನ ಹೊರ ಹರಿವಿನ ಪ್ರಮಾಣ ಇಳಿಕೆಯಾಗಿದ್ದು, 1,468 ಕ್ಯೂಸೆಕ್‌ ಹೊರ ಹರಿವು ಇಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಆರ್‌ಎಸ್‌ ಡ್ಯಾಂನ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.

ಕೆಆರ್‌ಎಸ್‌ ಡ್ಯಾಂನ ಗರಿಷ್ಠ ಮಟ್ಟ- 124.80 ಅಡಿಗಳು

ಕೆಆರ್‌ಎಸ್‌ ಡ್ಯಾಂನ ಇಂದಿನ ಮಟ್ಟ- 88.35 ಅಡಿಗಳು

ಕೆಆರ್‌ಎಸ್‌ ಡ್ಯಾಂನ ಇಂದಿನ ಒಳಹರಿವು- 169 ಕ್ಯೂಸೆಕ್‌ನಷ್ಟಿದೆ.

ಕೆಆರ್‌ಎಸ್‌ ಡ್ಯಾಂನ ಹೊರಹರಿವು-1468 ಕ್ಯೂಸೆಕ್‌ನಷ್ಟಿದೆ.

ಕೆಆರ್‌ಎಸ್‌ ಡ್ಯಾಂನ ಹೊರಹರಿವಿನ ವಿವರ

ಶಿವ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇಳಿಕೆಯಾಗಿತ್ತು. ಇದರಿಂದ ಬೆಂಗಳೂರಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಸಮಸ್ಯೆ ಸರಿಪಡಿಸಲು ಅಧಿಕಾರಿಗಳು ಕೆಆಎರ್‌ಎಸ್‌ನಿಂದ 4,579 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರು. ಸದ್ಯ ಶಿವ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೆಆಎರ್‌ಎಸ್‌ ಹೊರ ಹರಿವು ಇಳಿಕೆಯಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+