ಕಂತೆ ನೋಟಿನೊಂದಿಗೆ ಪೊಲೀಸರಿಗೆ ಸಿಕ್ಕರು ಕುಡಿದ ಮತ್ತಿನಲ್ಲಿದ್ದ ಮೂವರು

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಅಕ್ಟೋಬರ್ 31: ಕಂತೆ ಕಂತೆ ನೋಟಿನ ಕಟ್ಟುಗಳ ಜೊತೆ ಓಡಾಡುತ್ತಿದ್ದ ಮೂವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮೂರು ಬ್ಯಾಗ್ ನಲ್ಲಿ ನೋಟಿನ ಕಂತೆಗಳನ್ನು ತುಂಬಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರ ಮೇಲೆ ಅನುಮಾನಗೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ 18 ಲಕ್ಷ ಲೂಟಿ

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಂಧನವಾಗಿದೆ. ಆರೋಪಿಗಳ ಬಳಿ ಐನೂರು, ಎರಡು ಸಾವಿರ ಮುಖ ಬೆಲೆಯ ರಾಶಿ ರಾಶಿ ನೋಟುಗಳ ಕಂತೆಗಳು ಪತ್ತೆಯಾಗಿವೆ. ಮೂವರೂ ಮದ್ಯಪಾನ ಮಾಡಿದ್ದರಿಂದ ಸರಿಯಾದ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.

Three drunkards with bundle of notes arrested by police

ಬೆಂಗಳೂರಿನ ಬಾಗಲಕುಂಟೆ ಬಳಿ ಐಸಿಐಸಿಐ ಬ್ಯಾಂಕ್ ನ ಎಟಿಎಂಗೆ ಸೆಕ್ಯೂರ್ ವೆಲ್ ಸಂಸ್ಥೆಯಿಂದ ಹಣವನ್ನು ತುಂಬುವ ವೇಳೆ, ದಾಳಿ ಮಾಡಿದ ದುಷ್ಕರ್ಮಿಗಳು 18 ಲಕ್ಷ ರುಪಾಯಿ ಲೂಟಿ ಮಾಡಿದ್ದರು. ಆ ತಂಡವೇ ಮಳವಳ್ಳಿ ಕೈಗಾರಿಕಾ ಸಂಸ್ಥೆಯಲ್ಲಿನ ಕಳ್ಳತನದಲ್ಲಿ ಭಾಗಿಯಾಗಿತ್ತೇ ಎಂಬ ಶಂಕೆ ವ್ಯಕ್ತವಾಗಿದ್ದು, ಮಳವಳ್ಳಿ ಪಟ್ಟಣ ಪೊಲೀಸರು ಯುವಕರನ್ನು ಬಂಧಿಸಿ, ತನಿಖೆ ಆರಂಭ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three drunkards with bundle of notes arrested by police in Malavalli, Mandya district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ