ಮಂಡ್ಯ ಜೆಡಿಎಸ್‌ಗೆ ಬಂಡಾಯದ ಬಿಸಿ: ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ವಿಜಯ್ ಆನಂದ್ ಕಣಕ್ಕೆ
ಮಂಡ್ಯ, ಏಪ್ರಿಲ್ 24: ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಸ್ವಾಭಿಮಾನಿ ಪಡೆಯ ಒಮ್ಮತ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ ಅವರ ಹೆಸರನ್ನು ಸೋಮವಾರ ಶಾಸಕ ಎಂ.ಶ್ರೀನಿವಾಸ್ ಘೋಷಣೆ ಮಾಡಿದರು.
ಶಾಸಕ ಎಂ.ಶ್ರೀನಿವಾಸ್ ಅವರು, ಈ ಹಿಂದೆ ಜೆಡಿಎಸ್ ಪಕ್ಷದಿಂದ ಟಿಕಟ್ ತಪ್ಪಿದ್ದರಿಂದ ಪಕ್ಷದ ವಿರುದ್ಧ ಉಮೇದುವಾರಿಕೆಯನ್ನು ಸ್ವಾಭಿಮಾನಿ ಪಡೆಯ ಮುಖಂಡರಾದ ಮುದ್ದಘಟ್ಟಬಮಹಾಲಿಂಗೇಗೌಡ, ಎಚ್.ಎನ್.ಯೋಗೇಶ್ ಹಾಗೂ ವಿಜಯ್ ಆನಂದ್ ಅವರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದರು.

ಅದರಂತೆ ಉಮೇದುವಾರಿಕೆ ವಾಪಸ್ ಪಡೆಯಲು ಏಪ್ರಿಲ್ 24 ರಂದು ಕಡೆಯ ದಿನವಾದ್ದರಿಂದ ನಗರದ ಕೆವಿಎಸ್ ಭವನದಲ್ಲಿ ಸ್ವಾಭಿಮಾನಿ ಪಡೆಯಿಂದ ಸಭೆ ನಡೆಸಲಾಯಿತು. ಸಭೆಯಲ್ಲಿ ಒಮ್ಮತದ ಅಭ್ಯರ್ಥಿಯೆಂದು ಕೆ.ಎಸ್.ವಿಜಯ್ ಆನಂದ ಅವರ ಹೆಸರು ಘೋಷಣೆ ಮಾಡುವ ಮುನ್ನ, ಮೂರು ಅಭ್ಯರ್ಥಿಗಳಿಂದ ಯಾರೇ ಸ್ಪರ್ಧಿಸಿದರು ಒಗ್ಗಟ್ಟಾಗಿ ದುಡಿಯವಂತೆ ಶಾಸಕ ಎಂ.ಶ್ರೀನಿವಾಸ್ ಅವರು ಎಲ್ಲರ ಕೈಮೇಲಿಟ್ಟು ಪ್ರಮಾಣ ಮಾಡಿಸಿದರು.
ಎಚ್.ಎನ್.ಯೋಗೇಶ್ ಹಾಗೂ ಮಹಾಲಿಂಗೇಗೌಡ ಅವರ ಉಮೇದುವಾರಿಕೆ ಹಿಂತೆಗೆಸುವಲ್ಲಿ ಶಾಸಕ ಎಂ.ಶ್ರೀನಿವಾಸ್ ಯಶಸ್ವಿಯಾದರು, ಇದಕ್ಕೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಶ್ರೀನಿವಾಸ್, 'ಕೆ.ಎಸ್.ವಿಜಯ್ ಆನಂದ್ ಅವರು ಒಮ್ಮತದಿಂದ ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿದೆ. ಅವರ ಗೆಲುವಿಗೆ ನಾವು ನೀವೆಲ್ಲರೂ ಪ್ರಾಮಾಣಿಕವಾಗಿ ದುಡಿಯುವ ಕೆಲಸ ಆಗಬೇಕು. ಅಭಿಮಾನಿಗಳು ಹಾಗೂ ನನ್ನ ಹಿತೇಷಿಗಳು ವಿಜಯ್ ಆನಂದ್ ಅವರಿಗೆ ಬೆಂಬಲ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡಬೇಕು' ಎಂದು ಮನವಿ ಮಾಡಿದರು.

ಸ್ವಾಭಿಮಾನಿ ಪಡೆಯ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ' ನಮ್ಮ ನಾಯಕರಾದ ಎಂ.ಶ್ರೀನಿವಾಸ್ ಅವರು ನನ್ನ ಹೆಸರು ಸೂಚಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ, ಹಾಗೆಯೇ ನನ್ನ ಜೊತೆ ಬೆನ್ನಲುಬಾಗಿ ನಿಲ್ಲುತ್ತೇನೆ ಎಂಬ ಮಾತನ್ನು ಹೇಳಿದ ಯೋಗೇಶ್ ಹಾಗೂ ಮಹಾಲಿಂಗೇಗೌಡ ಅವರಿಗೆ ಅಭಾರಿಯಾಗಿದ್ದೇನೆ,.ಯಾರು ಎಷ್ಟೇ ಗೊಂದಲ ಸೃಷ್ಟಿಸಿದರು ಸಹ ನಾವು ಮಾಡು ಇಲ್ಲವೇ ಮಡಿ ಎಂಬಂತೆ ಚುನಾವಣೆ ಎದುರಿಸುತ್ತೇವೆ. ಇಲ್ಲಿ ಯಾವುದೇ ಗೊಂದಲವಿಲ್ಲ ಚುನಾವಣೆ ಎದುರಿಸುವುದೇ ನಮ್ಮ ಧ್ಯೇಯ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಈ ಕ್ಷೇತ್ರದ ಜನರ ಸೇವೆ ಮಾಡಲು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸ್ವಾಭಿಮಾನಿ ಪಡೆಯ ಮುಖಂಡರಾದ ತಿಮ್ಮೇಗೌಡ, ಲೋಕೇಶ್, ವಿಶಾಲ್‌ರಘು ಹಾಗೂ ಇತರ ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications