Get Updates
Get notified of breaking news, exclusive insights, and must-see stories!

Srirangapatna-Kushalnagar Highway: ಈ ವಿಚಾರಕ್ಕೆ ಮನ್ನಲೆಗೆ ಬಂದ ಶ್ರೀರಂಗಪಟ್ಟಣ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿ..

Srirangapatna-Kushalnagar National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಕೆಲವು ಮುಕ್ತಾಯದ ಹಂತದಲ್ಲಿದ್ದರೆ, ಇನ್ನೂ ಹಲವು ಕಾಮಗಾರಿ ಅರಂಭದ ಹಂತದಲ್ಲಿವೆ. ಮತ್ತೊಂದೆಡೆ ಕೆಲವು ಹೆದ್ದಾರಿಗಳು ಮೂಲಸೌಲಭ್ಯಗಳ ಕೊರತೆಗಳಿಂದ ಕೂಡಿವೆ. ಇದೀಗ ಶ್ರೀರಂಗಪಟ್ಟಣ- ಕುಶಾಲನಗರ ಹೆದ್ದಾರಿ 275ರ ಈ ಭಾಗದಲ್ಲಿ ಸರ್ವೀಸ್‌ ರಸ್ತೆ ಕಾಮಗಾರಿ ಮುನ್ನಲೆಗೆ ಬಂದಿದೆ. ಸಂಪೂರ್ಭ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯದಲ್ಲಿ ಈಗಾಗಲೇ ಹಲವು ರಾಷ್ಟ್ರೀಯ ಹೆದ್ದಾರಿಗಳು ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ಕೆಲವೆಡೆ ಸರ್ವೀಸ್‌ ರಸ್ತೆಗಳಿಲ್ಲದೆ, ವಾಹನ ಸವಾರರು ತುಂಬಾ ಸಮಸ್ಯೆ ಎದುರಿಸುವಂತಾಗಿದೆ. ಕೆಲ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ನೋಡಿಯೂ ಕಂಡು ಕಾಣದವರಂತೆ ಇದ್ದುಬಿಡುತ್ತಾರೆ. ಇನ್ನೂ ಕೆಲವೆಡೆ ಬೇಗನೇ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡುಬಿಡುತ್ತಾರೆ. ಅದು ಮನವಿ ಸಲ್ಲಿಕೆ ಮಾಡಿ ಕಚೇರಿಗಳಿಗೆ ಅಲೆದಾಡಿದ ಬಳಿಕ.

Srirangapatna Kushalnagar Highway Service Road Construction Assured with Farmers Cooperation

ಇನ್ನೂ ಇದೀಗ ಶ್ರೀರಂಗಪಟ್ಟಣ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವೀಸ್‌ ರಸ್ತೆ ಮಾಡುವಂತೆ ಮೊದಲಿನಿಂದಲೂ ಕೂಗುಗಳು ಕೇಳಿಬಂದಿದ್ದವು. ಆದರೆ, ಇದೀಗ ರೈತರು ಸಹಕಾರ ನೀಡಿದರೆ ಶ್ರೀರಂಗಪಟ್ಟಣ - ಕುಶಾಲನಗರ ಹೆದ್ದಾರಿ ಬದಿ ಬೊಮ್ಮೂರು ಅಗ್ರಹಾರದಿಂದ ಹುಲಿಕೆರೆವರೆಗೆ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಿಸಿಕೊಡಲಾಗುತ್ತದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭರವಸೆ ನೀಡಿದರು.

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಶ್ರೀ ಆಂಜನೇಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಪಾಲಹಳ್ಳಿ, ಬೆಳಗೊಳ, ಹುಲಿಕೆರೆ, ಮಜ್ಜಿಗೆಪುರ, ಕರಿಮಂಠಿ ಗ್ರಾಮದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಶ್ರೀರಂಗಪಟ್ಟಣ - ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಬಳಿ ಎರಡೂ ಕಡೆ ಸರ್ವಿಸ್‌ ರಸ್ತೆಗೆ ಅನುಮೋದನೆ ನೀಡದ ಕ್ರಮದ ಕುರಿತು ಈಗಾಗಲೇ ಮಂಡ್ಯ ಸಂಸದ, ಕೇಂದ್ರ ಸಚಿವರೂ ಆದ ಎಚ್‌.ಡಿ ಕುಮಾರಸ್ವಾಮಿ ಅವರ ಬಳಿ ಈ ಭಾಗದ ರೈತರ ನಿಯೋಗ ಕೊಂಡೊಯ್ದು ಚರ್ಚಿಸಿದ್ದೇನೆ ಎಂದು ಹೇಳಿದರು.

ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರ ಬಳಿ ನಮ್ಮನ್ನು ಎಚ್‌.ಡಿ ಕುಮಾರಸ್ವಾಮಿ ಅವರು ಕರೆದುಕೊಂಡು ಹೋದರು. ಆ ವೇಳೆ ಸರ್ವಿಸ್‌ ರಸ್ತೆಗೆ ಮನವಿ ಮಾಡಿದರು. ಇದರಿಂದ ಶ್ರೀರಂಗಪಟ್ಟಣ ಪ್ರವಾಸೋದ್ಯಮ ನಗರ ಪ್ರವಾಸೋದ್ಯಮಕ್ಕೂ ಅನುಕೂಲ ಆಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಹೆದ್ದಾರಿ ಬದಿ ಜಮೀನು ಹೊಂದಿರುವ ಈ ಭಾಗದ ರೈತರು ಸಹಕಾರ ನೀಡಿದರೆ, ಸರ್ವಿಸ್‌ ರಸ್ತೆಗೆ ಅನುದಾನ ಬಿಡುಗಡೆ ಮಾಡಿಸಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳು ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಅಗತ್ಯ ಇರುವ ಜಮೀನನ್ನು ರೈತರು ಸರ್ಕಾರ ನಿಗದಿ ಪಡಿಸುವ ಬೆಲೆಗೆ ನೀಡಬೇಕು. ಸರ್ಕಾರ ರಸ್ತೆಗೆ ಅಗತ್ಯ ಇರುವ ಅನುದಾನ ಬಿಡುಗಡೆ ಮಾಡಿದರೆ, ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ನಮ್ಮ ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಹೇಳಿದರು. ಒಂದೆಡೆ ಭೂಸ್ವಾಧೀನದಿಂದ ಕೆಲ ಕಾಮಗಾರಿಗಳು ಹಿಂದುಳಿದರೆ, ಇನ್ನೂ ಕೆಲವೆಡೆ ಭೂಮಿ ಸಿಕ್ಕರೂ ಕೂಡ ಹಣ ಇಲ್ಲ ಎಂದು ನೆಪವೊಡ್ಡಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಉದಾಹರಣೆಗಳಿವೆ.

ಈಗಾಗಲೇ ಪ್ರಚಲಿತದಲ್ಲಿರುವ ಹಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನ್ಯೂನ್ಯತೆಗಳು ಕಂಡುಬಂದಿರುವ ಉದಾಹರಣೆಗಳಿವೆ. ಕೆಲವೆಡೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಸಹ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ನಿಯಮದ ಪ್ರಕಾರ, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಯಾವುದೇ ಟೋಲ್‌ ಶುಲ್ಕವನ್ನು ಸಂಗ್ರಹಿಸುವಂತಿಲ್ಲ.

ಮತ್ತೊಂದೆಡೆ, ಇನ್ನೂ ಕೆಲವೆಡೆಗಳಲ್ಲಿ ಮಳೆ ಬಂತೆಂದರೆ ಸಾಕು ಹೆದ್ದಾರಿಗೆ ಗುಡ್ಡದ ಮಣ್ಣು ಸುರಿದು ವಾಹನ ಸವಾರರು ಪರದಾಡುವಂತಾಗಿದೆ. ಉದಾಹರಣೆಗೆ ಪಶ್ಚಿಮ ಘಟ್ಟಗಳ ಭಾಗಗಳಲ್ಲಿ ಮಳೆಗಾಲದಲ್ಲಿ, ಗುಡ್ಡ ಕುಸಿತ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಸಾಲದೆಂಬಂತೆ ಕುಸಿದ ಗುಡ್ಡದ ಮಣ್ಣು ನೇರವಾಗಿ ಹೆದ್ದಾರಿಗೆ ಬಿದ್ದು ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ, ಕಾರವಾರ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಲಿರುತ್ತವೆ. ಜನರು ಇದಕ್ಕೆಲ್ಲಾ ಶಾಶ್ವತ ಪರಿಹಾರ ಕೇಳಲು ಹೋದರೆ, ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನದೆ ತಮ್ಮ ಪಾಡಿಗೆ ಇದ್ದುಬಿಡುತ್ತಾರೆ. ಒಂದು ವೇಳೆ ಕಾಮಗಾರಿ ಆರಂಭಿಸಿರೂ ಸಹ ಅದು ಅವೈಜ್ಞಾನಿಕವಾಗಿರುತ್ತದೆ ಎನ್ನುವ ಆರೋಪಗಳು ಈಗ ಅಲ್ಲ, ಮೊದಲಿನಿಂದಲೂ ಕೇಳಿಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+