ಮಂಡ್ಯ ಸಿಂಡಿಕೇಟ್ ಬ್ಯಾಂಕ್ ನಲ್ಲಿ 15 ಲಕ್ಷ ರು. ನಾಪತ್ತೆ!

ಅಧೀನ ಶಾಖೆಯೊಂದರ ಮ್ಯಾನೇಜರ್ ಒಬ್ಬರು ಹಣಕ್ಕಾಗಿ ಅಶೋಕ ನಗರ ಶಾಖೆಗೆ ಬಂದು ಹಣ ಪಡೆದುಕೊಳ್ಳುವಾಗ ನಡೆದ ಘಟನೆ.

ಮಂಡ್ಯ, ಏಪ್ರಿಲ್ 24: ನಗರದ ಅಶೋಕ ನಗರ ಸಿಂಡಿಕೇಟ್ ಬ್ಯಾಂಕ್ ನಲ್ಲಿ 15 ಲಕ್ಷ ರು. ಹಣ ನಾಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣವೇ ಬ್ಯಾಂಕ್ ಗೆ ಆಗಮಿಸಿರುವ ಪೂರ್ವ ಠಾಣೆಯ ಪೊಲೀಸರು ಬ್ಯಾಂಕ್ ಗ್ರಾಹಕರನ್ನು ಹೊರಗೆ ಬಿಡದಂತೆ ತಡೆದು ಎಲ್ಲರನ್ನೂ ವಿಚಾರಣೆಗೊಳಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶಿವಳ್ಳಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಮಂಜುನಾಥ್, ಸೋಮವಾರ ಬೆಳಗ್ಗೆ ಅಶೋಕ ನಗರದ ಕಚೇರಿಗೆ ಬಂದು ತಮ್ಮ ಶಾಖೆಗೆ ಬೇಕಿದ್ದ 15 ಲಕ್ಷ ರು. ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು.

Rs. 15 lakhs robbed in Manya Syndicate bank

ಕ್ಯಾಶ್ ಕೌಂಟರಿನ ಬಳಿ ಹಣ ಪಡೆಯುವಾಗ ಹಣ ಮಾಯವಾಗಿದೆ. ಕೌಂಟರಿನಲ್ಲಿ ಹಣದ ಕಂತೆಗಳನ್ನು ಪಡೆಯುವಾಗ ಯಾರೋ ಕಂತೆಗಳನ್ನು ಕದ್ದಿದ್ದಾರೆಂದು ಮಂಜುನಾಥ್ ತಿಳಿಸಿದ್ದಾರೆ.

ಈ ಬಗ್ಗೆ ಮಂಜುನಾಥ್ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+