ಮಂಡ್ಯದಲ್ಲಿ ಪೊಲೀಸ್ ಮನೆಗೆ ಕಳ್ಳರ ಕನ್ನ

Posted By: Nayana
Subscribe to Oneindia Kannada

ಮಂಡ್ಯ, ನವೆಂಬರ್ 25 : ಯಾರು ಇಲ್ಲದ ವೇಳೆ ಪೊಲೀಸ್ ವಸತಿ ಗೃಹದ ಬಾಗಿಲ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಶನಿವಾರ (ನ.25) ಬೆಳಗಿನ ಜಾವ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದಮಹಿಳಾ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಾಗರತ್ನ ಅವರೇ ಕಳ್ಳರ ಕೈಚಳಕಕ್ಕೆ ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ. ಇವರ ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಲ್ಮೇರಾದಲ್ಲಿದ್ದ ಸುಮಾರು 70 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಹಾಗೂ 25 ಸಾವಿರ ರೂ. ನಗದು ಹಣ ದೋಚಿದ್ದಾರೆ.

Police quaters burled in Mandya

ನಾಗರತ್ನ ಹಾಗೂ ರಾಜೇಶ್ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಬೀಗ ಹಾಕಿರುವುದನ್ನು ಕಂಡ ದುಷ್ಕರ್ಮಿಗಳು ಕಟರ್ ನ ಸಹಾಯದಿಂದ ಬೀಗವನ್ನು ಮುರಿದು ನು್ಗ್ಇರುವ ದುಷ್ಕರ್ಮಿಗಳು ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸ್ ಜೀಪ್ ಚಾಲಕ ರಾಜೇಶ್ ಎಂಬುವವರ ಮನೆಗೆ ಕನ್ನಹಾಕಲು ಯತ್ನ ನಡೆಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ ಪಿ, ಸಿಪಿಐ ಸಂತೋಷ್, ಪಿ ಎಸ್ ಐ ನಿರಂಜನ್, ಶ್ವಾನದಳ, ಬರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miscreants have looted lakh of rupees in Mandya police head quarters according to place reports.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ