ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಂಗಾಪುರ; ಮೆದುಳು ನಿಷ್ಕ್ರಿಯ, ಮಗನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್‌, 30: ಪಾಂಡವಪುರ ತಾಲೂಕಿನ ಸಿಂಗಾಪುರ ಗ್ರಾಮದ 22 ವರ್ಷದ ಸಚಿನ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಗಾಯಾಳುವಿನ ಮೆದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದ್ದರು. ಇದೀಗ ಕುಟುಂಬದವರು ಸಚಿನ್ ಅಂಗಾಂಗಳನ್ನು ದಾನ ಮಾಡುವ ಮೂಲಕ ಅತೀವ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

ಮಗನ ಅಂಗಾಂಗಗಳ ದಾನ

ಮಗ ಬದುಕಿ ಉಳಿಯುವುದಿಲ್ಲ ಎಂಬುದು ತಿಳಿದ ಮೇಲೂ ಕುಟುಂಬದವರು ತಮ್ಮ ನೋವನ್ನು ನುಂಗಿಕೊಂಡು, ವೈದ್ಯರ ಸಲಹೆಯ ಮೇರೆಗೆ ಸಚಿನ್‌ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಈ ಮೂಲಕ ಹಲವು ರೋಗಿಗಳಿಗೆ ನೆರವಾಗಿದ್ದು, ಸಚಿನ್ ಅವರನ್ನು ಜೀವಂತಗೊಳಿಸಿದರು. ನಂತರ ಕುಟುಂಬದವರ ಒಪ್ಪಿಗೆಯ ಮೇರೆಗೆ ಜೆಎಸ್‌ಎಸ್ ಆಸ್ಪತ್ರೆಯ ವೈದ್ಯರು ಸಚಿನ್ ಅವರ ಹೃದಯ, ಕಿಡ್ನಿ, ನೇತ್ರಗಳನ್ನು ಪಡೆದರು. ಸಚಿನ್‌ನ ಅಂಗಾಂಗಗಳನ್ನು ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಹಸ್ತಾಂತರಿಸಿದರು. ಸಚಿನ್ ಅವರ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬದವರಿಗೆ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಗೌರವ ಸಲ್ಲಿಸಿದರು.

ಮದ್ದೂರು: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿ 14 ಮಂದಿ ಅಸ್ವಸ್ಥಮದ್ದೂರು: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿ 14 ಮಂದಿ ಅಸ್ವಸ್ಥ

ನವೆಂಬರ್‌ 28ರಂದು ನಡೆದಿದ್ದ ಅಪಘಾತ

ನವೆಂಬರ್‌ 28ರಂದು ಕೆ.ಆರ್.ಪೇಟೆ ತಾಲೂಕು ಚಟ್ಟಂಗೆರೆ ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ಲೇಬರ್ ಕಾಂಟ್ರ್ಯಾಕ್ಟರ್‌‌ ಮಾಲೀಕರಾಗಿದ್ದ ಸಚಿನ್ ತಲೆಗೆ ತೀವ್ರ ಪೆಟ್ಟಾಗಿತ್ತು. ಸಚಿನ್‌ ಕೆ.ಆರ್.ಪೇಟೆ ತಾಲೂಕಿನ ತಂಡೆಕೆರೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಮೂರ್ನಾಲ್ಕು ಕಾರ್ಖಾನೆಗಳಿಗೆ ಸುಮಾರು 200ಕ್ಕೂ ಹೆಚ್ಚು ನೌಕರರನ್ನು ಕೆಲಸಕ್ಕೆ ನಿಯೋಜಿಸಿದ್ದರು. ಆ ಮೂಲಕ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದೀಗ ಅವರ ನಿಧನ ನಂತರವೂ ದೇಹದ ಅಂಗಾಂಗಗಳನ್ನು ಇತರೆ ರೋಗಿಗಳಿಗೆ ನೀಡುವ ಮೂಲಕ ಅಮರರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದರು.

Parents donated son organs in Singapura of mandya district

ಕ್ರಿಮಿನಾಶಕ ಮಿಶ್ರಿತ ನೀರು ಸೇವನೆ, ಅಸ್ವಸ್ಥ

ಇನ್ನು ಇತ್ತೀಗಷ್ಟೇ ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 14 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಹೊಸಕೊಪ್ಪಲು ಬಳಿ ನಡೆದಿತ್ತು. ಬಳ್ಳಾರಿ ಜಿಲ್ಲೆಯ ಕಬ್ಬು ಕಡಿಯುವ ಕೂಲಿ ಕಾರ್ಮಿಕರಾದ ಚಂದ್ರನಾಯ್ಕ (26), ಮೀನಾಕ್ಷಿ ಬಾಯಿ (26), ಶಾಂತಾಬಾಯಿ (30), ಪಾಂಡುನಾಯ್ಕ (25), ರೇಣುಕಾನಾಯ್ಕ(25), ಸತ್ಯನಾಯ್ಕ (28), ಸೀತಾಬಾಯಿ (8), ಯೋಗೀಶ (10), ಅಂಬರೀಶ, ಯಕ್ಷ (5), ಸಂಜೀವ (8 ತಿಂಗಳು), ಬಾಲಾಜಿ (5), ಶರತ್ (6), ಆರತಿಬಾಯಿ (3) ಎನ್ನುವವರು ಅಸ್ವಸ್ಥರಾಗಿದ್ದರು.

KRSನಲ್ಲಿ ಚಿರತೆ ಹಾವಳಿ ತಡೆಯಲು ಸರ್ಕಾರ ವಿಫಲ: ರವೀಂದ್ರ ಶ್ರೀಕಂಠಯ್ಯ ಅಸಮಾಧಾನKRSನಲ್ಲಿ ಚಿರತೆ ಹಾವಳಿ ತಡೆಯಲು ಸರ್ಕಾರ ವಿಫಲ: ರವೀಂದ್ರ ಶ್ರೀಕಂಠಯ್ಯ ಅಸಮಾಧಾನ

ಬಳ್ಳಾರಿಯಿಂದ ಬಂದಿದ್ದ 30 ಕೂಲಿ ಕಾರ್ಮಿಕರು

ಬಳ್ಳಾರಿ ಮೂಲದ 30 ಕೂಲಿ ಕಾರ್ಮಿಕರು ಮಕ್ಕಳನ್ನು ಕರೆದುಕೊಂಡು ಮದ್ದೂರು ತಾಲೂಕಿನ ಕೊಪ್ಪಗೆ ಕಬ್ಬು ಕಟಾವಿಗೆ ಬಂದಿದ್ದರು. ಬಳ್ಳೇಕೆರೆ ಸಮೀಪದಲ್ಲಿರುವ ರೈಸ್‌ಮಿಲ್ ಬಳಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಸಮೀಪದಲ್ಲಿರುವ ಗದ್ದೆಯಲ್ಲಿ ದೊಡ್ಡ ಡ್ರಂ ಇರುವುದನ್ನು ಕಂಡ ಕೂಲಿ ಕಾರ್ಮಿಕರು ಜಮೀನಿನ ಮಾಲೀಕನನ್ನು ಕೇಳಿ ನೀರು ತುಂಬಿಕೊಳ್ಳಲು ಡ್ರಂ ಪಡೆದಿದ್ದರು. ಅದರಲ್ಲಿ ನೀರು ತುಂಬಿಟ್ಟುಕೊಂಡು ಕುಡಿದಿದ್ದಾರೆ. ಜಮೀನು ಮಾಲೀಕ ಮನೆಗೆ ಬಂದು ತನ್ನ ಮಗನಿಗೆ ಕೂಲಿ ಕಾರ್ಮಿಕರಿಗೆ ಡ್ರಂ ನೀಡಿರುವ ವಿಚಾರ ತಿಳಿಸಿದ್ದ.

ಆಗ ಆ ಡ್ರಂನಲ್ಲಿ ಗದ್ದೆಗೆ ಸಿಂಪಡಿಸಲು ಕ್ರಿಮಿನಾಶಕ ತುಂಬಿದ್ದನ್ನು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಜಮೀನು ಮಾಲೀಕ ಗದ್ದೆ ಬಳಿ ಬಂದು ಕೂಲಿ ಕಾರ್ಮಿಕರಿಗೆ ನೀರು ಕುಡಿಯದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅಷ್ಟರಲ್ಲಾಗಲೇ ನೀರು ಕುಡಿದಿದ್ದ ಕೆಲವರು ಹೊಟ್ಟೆ ಉರಿಯಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಸಮೀಪದ ಕೊಪ್ಪ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

English summary
Sachin death in Bike accident near Chattangere, Parents donated son Sachin organs in Singapura village of Pandavapura taluk, mandya district, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X