ಮಾದೇಗೌಡರ ಭೇಟಿಯಾದ ನಿಖಿಲ್ ಕುಮಾರಸ್ವಾಮಿ, ಬೆಂಬಲಕ್ಕೆ ಮನವಿ
ಮಂಡ್ಯ, ಮಾರ್ಚ್ 16: ಜಿಲ್ಲೆಯ ಹಿರಿಯ ನಾಯಕ, ರೈತ ಹೋರಾಟಗಾರ ಮಾದೇಗೌಡ ಅವರನ್ನು ಇಂದು ಜೆಡಿಎಸ್‌ನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಆಗಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರು ಅನಿತಾ ಕುಮಾರಸ್ವಾಮಿ, ಹಾಲಿ ಸಂಸದ ಶೀವರಾಮೇಗೌಡ ಹಾಗೂ ಇತರ ಮುಖಂಡರ ಜೊತೆ ಹೋಗಿ ಮಾದೇಗೌಡ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದರು.
ಮಾದೇಗೌಡ ಅವರು ಕಾಂಗ್ರೆಸ್‌ನ ಮುಖಂಡರಾಗಿದ್ದು, ರೈತ ಪರ ಹೋರಾಟ, ಕಾವೇರಿ ಹೋರಾಟದಿಂದ ರಾಜ್ಯದಾದ್ಯಂತ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು ಸಂಸದರು, ಶಾಸಕರೂ ಆಗಿದ್ದರು.

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿಸುವ ಸಾಧ್ಯತೆ ಇರುವ ಸುಮಲತಾ ಅಂಬರೀಶ್ ಅವರು ಸಹ ಇತ್ತೀಚೆಗಷ್ಟೆ ಮಾದೇಗೌಡ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಸುಮಲತಾ ಅವರು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತರೆ ಮಾತ್ರವೇ ಬೆಂಬಲ ನೀಡುವುದಾಗಿ ಮಾದೇಗೌಡ ಅವರು ಕಡ್ಡಾಯವಾಗಿ ಹೇಳಿದ್ದರು.












Click it and Unblock the Notifications