ಮಂಡ್ಯ; ಆನ್‌ಲೈನ್‌ನಲ್ಲಿ ಮೈಶುಗರ್ ವಾರ್ಷಿಕ ಸಭೆ, ರೈತರ ಆಕ್ರೋಶ
ಮಂಡ್ಯ, ಅಕ್ಟೋಬರ್, 31: ಮೈಶುಗರ್ ಕಾರ್ಖಾನೆಯಲ್ಲಿ ವಾರ್ಷಿಕ ಮಹಾಸಭೆಯನ್ನು ಆನ್‌ಲೈನ್‌ನಲ್ಲಿ ನಡೆಸಿ ಷೇರುದಾರರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆದಿದೆ ಎಂದು ಮಂಡ್ಯದಲ್ಲಿ ರೈತ ಮುಖಂಡರು, ಷೇರುದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಿತರಕ್ಷಣಾ ಸಮಿತಿ ಮುಖಂಡರು, ಕಬ್ಬು ಬೆಳೆಗಾರರು, ಷೇರುದಾರರು ಸೇರಿದಂತೆ ಕೆಲ ಸಂಘಟನೆ ಮುಖಂಡರು ಸಭೆ ಸೇರಿ ಚರ್ಚಿಸಿದರು. ಸಭೆಯಲ್ಲಿ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿದ್ದು, ಮೈಶುಗರ್‌ನಲ್ಲಿ 2015-16ನೇ ಸಾಲಿನಿಂದ 2021-22ನೇ ಸಾಲಿನವರೆಗೆ ಒಟ್ಟು 7 ಆಡಿಟ್ ವರದಿಗಳು ಬಾಕಿ ಉಳಿದಿದೆ. ಕಳೆದ ಬಾರಿ ಕೋವಿಡ್ ನೆಪವೊಡ್ಡಿ ಆನ್‌ಲೈನ್ ಸಭೆ ಮಾಡಿದ್ದರು. ಆಗಲೂ ನಾವು ತೀವ್ರವಾಗಿ ವಿರೋಸಿದ್ದೆವು ಈಗ ಎಲ್ಲಾ 7 ಆಡಿಟ್ ವರದಿಗಳನ್ನೂ ತಕ್ಷಣ ಮುಗಿಸಿ ಒಂದೇ ಸಭೆಯಲ್ಲಿ ಅಂಗೀಕರಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಇಂಗ್ಲಿಷ್‌ನಲ್ಲಿ ಮುದ್ರಿತವಾದ ಮಾಹಿತಿ; ಮೈಶುಗರ್ ವ್ಯಾಪ್ತಿಯಲ್ಲಿ 11 ಸಾವಿರ ಷೇರುದಾರರು ಇದ್ದರು. ಆದರೆ ಅವರೆಲ್ಲರೂ ಇಂಗ್ಲಿಷ್ ಕಲಿತವರಲ್ಲ. ಆದರೆ ಕಂಪನಿ ನೀಡಿರುವ ವಾರ್ಷಿಕ ಸಭೆಯ ಬುಕ್‌ನಲ್ಲಿ ಎಲ್ಲ ಮಾಹಿತಿಯನ್ನೂ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಅದರಲ್ಲೂ ಹಲವಾರು ಲೋಪಗಳಿವೆ. ಸಭೆ ಕರೆದಿರುವ ವಿಳಾಸವೇ ಸರಿಯಿಲ್ಲ. ಒಟ್ಟಾರೆ ಷೇರುದಾರರು ಆನ್‌ಲೈನ್‌ನಲ್ಲಿ ವ್ಯವಹರಿಸುವಷ್ಟು ಪರಿಣಿತರಲ್ಲ. ಹಾಗಾಗಿ ನವೆಂಬರ್ 3ರಂದು ಕರೆಯಲಾಗಿರುವ ಆನ್‌ಲೈನ್ ವಾರ್ಷಿಕ ಇ-ವೋಟಿಂಗ್ ಸಭೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಸಚಿವ ಕೆ. ಸಿ. ನಾರಾಯಣಗೌಡ ಹಾಗೂ ಸಕ್ಕರೆ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಸಭೆಯ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಿಲ್ಲ. ಮೈಶುಗರ್ ಚೇರ್‌ಮನ್, ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಕಾರ್ಯದರ್ಶಿ ಅಮರ್‌ಕುಮಾರ್ ಪಾಂಡೆ ಸೇರಿದಂತೆ ಆಡಳಿತವೇ ಷೇರುದಾರರನ್ನು ಕತ್ತಲೆಯಲ್ಲಿಟ್ಟು ಸಭೆ ನಡೆಸುವುದನ್ನು ವಿರೋಧಿಸುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಟಿ. ಶ್ರೀಕಂಠೇಗೌಡ, ರೈತಮುಖಂಡರಾದ ಗೋಪಾಲಪುರ ಬೋರೇಗೌಡ, ಮುದ್ದೇಗೌಡ, ರೈತಸಂಘ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಿ.ಕುಮಾರಿ, ಕನ್ನಡಸೇನೆಯ ಮಂಜುನಾಥ್, ಕೀಲಾರ ಸೋಮಶೇಖರ್, ಕೆ.ಎಸ್.ಸುೀರ್‌ಕುಮಾರ್ ಸೇರಿದಂತರ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications