Get Updates
Get notified of breaking news, exclusive insights, and must-see stories!

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ದೂರು ದಾಖಲಿಸಿದ ಮುಸ್ಲಿಂ ಹೋರಾಟಗಾರ್ತಿ

ಶ್ರೀರಂಗಟಪ್ಟಣ, ಡಿಸೆಂಬರ್‌ 27: ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಪ್ರಚೋದಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಮಹಿಳಾ ಹೋರಾಟಗಾರ್ತಿ ಹುಣಸೂರಿನ ನಮ್ಮಾ ನಝೀರ್ ಚಿಕ್ಕನೇರಳೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನು ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಪ್ರಚೋದಿಸಿದ್ದಾಗಿ ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇತರರ ವಿರುದ್ದ ಐಪಿಸಿ 1860 (/ 354, 294, 509, 506, 153ಎ, 295, 295ಎ, 298ಎ) ಐಪಿಸಿ 12 ಸೆಕ್ಷನ್‌ ಆಕ್ಟ್‌ 1971 ಅಡಿಯಲ್ಲಿ ಪ್ರಕರಣ ದಾಖಲಿಸಿ ರೌಡಿಶೀಟರ್ ತೆರೆಯುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

Muslim woman activist who filed a complaint against Kalladka Prabhakar Bhatt

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಎಂಬಾತನು ''ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ.

ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?'' ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯು ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗೆಗೆ ಅಶ್ಲೀಲವಾಗಿ ಮಾತನಾಡಿದ, ಸಾರ್ವಜನಿಕವಾಗಿ ಮಹಿಳೆಯರನ್ನು ಚುಡಾಯಿಸಿದ, ಮಹಿಳೆಯರ ಘನತೆಗೆ ಅಡ್ಡಿಯಾದ ಪ್ರಕರಣವಾದ್ದರಿಂದ ಐಪಿಸಿ 294, 354, 509, 506 ಅಪರಾಧವಾಗಿದೆ ಎಂದು ದೂರಿನಲ್ಲಿ ದೂರಲಾಗಿದೆ.

ಮುಂದುವರೆದು ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ''ದೇಶವನ್ನ ಉಳಿಸಿಕೊಳ್ಳುವ ಮಹತ್ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಂಮರಿಗೆ ಹಲವು ದೇಶಗಳು ಇವೆ. ಆದರೆ ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ, ಅದಕ್ಕಾಗಿ ನಾವು ಹೋರಾಟ ಮಾಡಬೇಕು.ದೇಶದಲ್ಲಿ ನಾವು ಹಿಂದೂಗಳು ಉಳಿಯುವುದು ಹೇಗೆ? ಹಿಂದೂಗಳು ಕಡಿಮೆ ಆದರೇ ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ. ದೇಶದ ಆದಾಯದ ಮೊದಲ ಭಾಗ ಮುಸಲ್ಮಾನರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ರು. 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಯಾರಪ್ಪನ ದುಡ್ಡು ಅವರಿಗೆ ನೀವು ಮೀಸಲಿಡಲು. ಸರ್ಕಾರಕ್ಕೆ ತೆರಿಗೆ ಕಟ್ಟುವುದು ಹಿಂದೂಗಳು'' ಎಂದು ಹೇಳಿದ್ದಾನೆ. ಇದು ಎರಡು ಧರ್ಮಗಳನ್ನು ಎತ್ತಿಕಟ್ಟಿ ಗಲಭೆ ಮಾಡಿಸುವ, ಧರ್ಮಗಳ ಮಧ್ಯೆ ಅಪನಂಬಿಕೆ ಹುಟ್ಟಲು ಕಾರಣವಾಗಿದ್ದಾನೆ. ಸರ್ಕಾರಕ್ಕೆ ತೆರಿಗೆ ಕಟ್ಟುವುದು ಹಿಂದೂಗಳು" ಎಂದು ಹೇಳಿದ್ದಾನೆ. ಇದು ಎರಡು ಧರ್ಮಗಳನ್ನು ಎತ್ತಿಕಟ್ಟಿ ಗಲಭೆ ಮಾಡಿಸುವ, ಧರ್ಮಗಳ ಮಧ್ಯೆ ಅಪನಂಬಿಕೆ ಹುಟ್ಟಿಸಿ, ಸಾಮಾಜಿಕ ಅಶಾಂತಿ ಸೃಷ್ಟಿಸುವ, ಧರ್ಮವೊಂದನ್ನು ಅವಹೇಳನ ಮಾಡುವ ಕೃತ್ಯವಾಗಿದ್ದು ಐಪಿಸಿ 153ಎ, 295, 295ಎ, 298 ಪ್ರಕಾರ ಅಪರಾಧವಾಗಿದೆ.

ಅಲ್ಲದೆ ಕಲ್ಲಡ್ಕ ಪ್ರಭಾಕರ ಭಟ್ ''ನಮ್ಮ ಕೋರ್ಟ್ ವ್ಯವಸ್ಥೆ ಹೇಗಿದೆ? ಕಸಾಬ್ ಗಾಗಿ ರಾತ್ರಿ ಕೋರ್ಟ್ ತೆರೆಯಿತು'' ಎಂದು ಸಾರ್ವಜನಿಕವಾಗಿ ಹೇಳಿದ್ದಾನೆ. ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಹೇಳಲು ಸಾಧ್ಯ. ಭಯೋತ್ಪಾದಕ ಕಸಬ್ ಗೂ ಭಾರತದ ಮುಸ್ಲಿಂ ಸಮುದಾಯಕ್ಕೂ ಯಾವ ಸಂಬಂಧವೂ ಇಲ್ಲ. ಮುಸ್ಲಿಮರೂ ಸೇರಿದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ಕಸಬ್‌ನ ಕಲ್ಲಡ್ಕ ಪ್ರಭಾಕರ ಭಟ್ಟನು ಕಸಬ್ ನನ್ನು ತನ್ನ ಕೃತ್ಯಗಳಿಗೆ ಬಳಸಿಕೊಂಡಿದ್ದಾನೆ.

ಮಾತ್ರವಲ್ಲದೆ ಕಸಬ್‌ಗೆ ಶಿಕ್ಷೆ ನೀಡಿರುವ ನ್ಯಾಯಾಲಯವನ್ನು ಟೀಕಿಸಿದ್ದಾನೆ. "ಕಸಬ್ ಗಾಗಿ ಕೋರ್ಟ್ ರಾತ್ರಿ ತೆರೆಯಿತು. ಕೋರ್ಟ್ ವ್ಯವಸ್ಥೆ ಹೇಗಿದೆ" ಎಂದು ಟೀಕಿಸಿ ಕಸಬ್‌ಗೆ ಶಿಕ್ಷೆ ನೀಡಲು ನ್ಯಾಯಾಲಯ ಕೈಗೊಂಡಿರುವ ತುರ್ತು ಕ್ರಮವನ್ನು ಟೀಕಿಸುವ ಮೂಲಕ ಐಪಿಸಿ12 ಅಟಿಣಠಿಣ ಜಿ ಅಡಿಣ ಂಛಿಣ 1971 ಗುರುತರ ಅಪರಾಧ ಮಾಡಿದ್ದಾನೆ.

ಕಲ್ಲಡ್ಕ ಪ್ರಭಾಕರ ಭಟ್ಟನು ವೃತ್ತಿಪರ ಕ್ರಿಮಿನಲ್ ಆರೋಪಿಯಾಗಿದ್ದಾನೆ. ಜೀವನ ನಿರ್ವಹಣೆಗಾಗಿ ಯಾವುದೇ ನಿರ್ದಿಷ್ಟ ವೃತ್ತಿ ಹೊಂದಿಲ್ಲದ ಈತ ಈ ಹಿಂದೆಯೂ ಸಾಮಾಜಿಕ ಅಶಾಂತಿ, ಗಲಭೆ ಸೃಷ್ಟಿ, ಮಹಿಳೆಯರ ಅವಹೇಳನ, ಧರ್ಮಗಳ ಅವಹೇಳನ ಪ್ರಕರಣಗಳದ್ದೇ ರೀತಿಯ ಕೃತ್ಯಗಳನ್ನು ಹಲವು ಬಾರಿ ನಡೆಸಿದ್ದಾನೆ. ಕರ್ನಾಟಕದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಈ ಹಿಂದೆ ಇಂತದ್ದೇ ಪ್ರಕರಣಗಳು ದಾಖಲಾಗಿದೆ. ಆದರೂ ಬುದ್ದಿ ಕಲಿಯದ ಈತ ತನ್ನ ಚಾಳಿಯನ್ನು ಮುಂದುವರೆಸಿದ್ದು, ಈತನ ವಿರುದ್ಧ ರೌಡಿ ಹಾಳೆ ತೆರೆಯುವಂತೆ ದೂರು ದಾಖಲಿಸಿದ್ದಾರೆ. ಅಲ್ಲದೇ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣದ ವಿಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ಲಿಂಕ್ ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+