• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಮ್ಮನೆ ಗಾಸಿಪ್ ಹಬ್ಬಿಸಬೇಡಿ:ಯೋಧ ಗುರು ಪತ್ನಿ ಕಲಾವತಿ ಮನವಿ

|
   ಯೋಧ ಗುರು ಪತ್ನಿ ಕಲಾವತಿ ಮನವಿ | Oneindia Kannada

   ಮೈಸೂರು, ಫೆಬ್ರವರಿ 28: ಪುಲ್ವಾಮಾ ದಾಳಿಯಲ್ಲಿ ಶತ್ರುಗಳ ಅಟ್ಟಹಾಸಕ್ಕೆ ಬಲಿಯಾದ ವೀರಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಕುಟುಂಬ ಸದ್ಯ ದುಃಖದ ಮಡುವಿನಲ್ಲಿದೆ.

   ಇದರ ನಡುವೆಯೇ ಗುರು ಕುಟುಂಬದಲ್ಲಿ ಹಣಕ್ಕಾಗಿ ಕಲಹ ನಡೆಯುತ್ತಿದೆ ಎಂಬ ಮಾತು ಗುರು ಕುಟುಂಬದವರಿಗೆ ಬೇಸರ ತರಿಸಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವಂತೆ ಕೋಟಿ, ಕೋಟಿ ಹಣ ಗುರು ಕುಟುಂಬಕ್ಕೆ ಹೋಗಿದೆ ಎಂಬುದನ್ನು ಸ್ವತಃ ಯೋಧ ಗುರು ಅವರ ಪತ್ನಿ ತಳ್ಳಿ ಹಾಕಿದ್ದಾರೆ.

   ಒಂದು ಮೂಲದ ಪ್ರಕಾರ ಗುರು ಕುಟುಂಬಕ್ಕೆ ಅಂದಾಜು 7 - 8 ಕೋಟಿ ಬಂದಿರಬಹುದು. ಭಾಗಶಃ ಎಲ್ಲರೂ ಸಹ ಚೆಕ್ ರೂಪದಲ್ಲಿಯೇ ಕುಟುಂಬಸ್ಥರಿಗೆ ಹಣವನ್ನು ನೀಡುತ್ತಿದ್ದಾರೆ.

   ಹುತಾತ್ಮ ಯೋಧ ಗುರು ಪುಣ್ಯತಿಥಿಯಂದೇ ಉಗ್ರರನ್ನು ಚೆಂಡಾಡಿದ ಸೇನೆ

   ಅಂದಹಾಗೆ ನಿನ್ನೆಯಿಂದ ಕೆಲವು ಮಾಧ್ಯಮಗಳಲ್ಲಿ ಹಣ ಹಂಚಿಕೆ ಬಗ್ಗೆ ಗುರು ಕುಟುಂಬದಲ್ಲಿ ಜಗಳ ಶುರುವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗುರು ಪತ್ನಿಗೆ ಮತ್ತೊಂದು ಮದುವೆ ಮಾಡುವ ವಿಚಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

   ಆದರೆ, ಇದೆಲ್ಲವನ್ನೂ ಗುರು ಪತ್ನಿ ಕಲಾವತಿ ಒಪ್ಪುತ್ತಿಲ್ಲ. "ಇವೆಲ್ಲವೂ ಸತ್ಯಕ್ಕೆ ದೂರವಾದ್ದು, ನಮ್ಮ ಮೇಲೆ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಹಾಗಾದರೆ ಯೋಧ ಗುರು ಅವರ ಪತ್ನಿ ಕಲಾವತಿ ಹೇಳುವುದೇನು ಮುಂದೆ ಓದಿ...

    ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ

   ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ

   "ನಮ್ಮ ಕುಟುಂಬದವರ ಮೇಲೆ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ದೂರು ನೀಡಲಾಗುವುದು. ನಮ್ಮ ಯಜಮಾನರ ಸಾವಿನ ವಿಚಾರ ಮುಂದಿಟ್ಟು ಹಣ ಕೇಳುವ ನೀಚ ಮನಸ್ಥಿತಿ ನಮ್ಮದಲ್ಲ. ಹಣ ಎಲ್ಲವನ್ನು ವಾಪಸ್ ನೀಡುತ್ತೇವೆ. ನನಗೆ ನನ್ನ ಯಜಮಾನರು ಸಿಗುತ್ತಾರಾ? ಹೇಳಿ..." ಎಂದು ದುಃಖದಿಂದ ರೋಧಿಸುತ್ತಾರೆ ಕಲಾವತಿ.

   ಹುತಾತ್ಮ ಯೋಧ ಗುರು ಕುಟುಂಬಕ್ಕೆ ಕಾಂಗ್ರೆಸ್‌ನಿಂದ 5 ಲಕ್ಷ ನೆರವು

   ಯಾವ ಬ್ಯಾಂಕಿಗೂ ಹೋಗಿಲ್ಲ

   ಯಾವ ಬ್ಯಾಂಕಿಗೂ ಹೋಗಿಲ್ಲ

   "ನಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ತಿಥಿ ಕಾರ್ಯ ನಡೆದಿದೆ. ನಾನು ಹೊರಗೆಯೇ ಬಂದಿಲ್ಲ. ನಾನು ಯಾವ ಬ್ಯಾಂಕಿಗೂ ಹೋಗಿಲ್ಲ. ಪರಿಹಾರ ನೀಡಿ ಎಂದು ಯಾರ ಬಳಿಯೂ ಕೇಳಿಲ್ಲ. ಈ ವಿಚಾರದ ಬಗ್ಗೆ ಮಾತು ಸಹ ಆಡಿಲ್ಲ" ಎನ್ನುತ್ತಾರೆ ಕಲಾವತಿ.

   ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ

   ಮತ್ತಷ್ಟು ನೋವು ಕೊಡಬೇಡಿ

   ಮತ್ತಷ್ಟು ನೋವು ಕೊಡಬೇಡಿ

   "ಮೊದಲೇ ನೋವಿನಲ್ಲಿರುವ ನಮಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತಷ್ಟು ನೋವು ಕೊಡಬೇಡಿ ಎಂದ ಕಲಾವತಿ, ನಮ್ಮನ್ನು ಕೇಳದೆ ಯಾರೂ ಯಾವುದನ್ನೂ ಪ್ರಚಾರ ಮಾಡಬೇಡಿ. ಹಿಂದೆ-ಮುಂದೆ ತಿಳಿಯದೆ ಗಾಸಿಪ್ ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.

   ಜನರ ಮನಸ್ಥಿತಿಗೆ ಏನು ಹೇಳಲಿ?

   ಜನರ ಮನಸ್ಥಿತಿಗೆ ಏನು ಹೇಳಲಿ?

   "ನಾವು ಜಗಳವಾಡಿದ್ದೇವೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ?.ಸಾವಿನ ಮನೆಯಲ್ಲೂ ದ್ವೇಷ ಕಾರುವ ನಮ್ಮ ಜನರ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ ಎಂದು ಬೇಸರದಿಂದಲೇ ನುಡಿದರು ಯೋಧ ಗುರು ಪತ್ನಿ ಕಲಾವತಿ.

   English summary
   Martyr Guru wife Kalavathi requested to media, Don’t publish false news about our family and don’t do a gossip without any proof.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X