ಮೈಷುಗರ್ ಕಬ್ಬು ಅರೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ: ನಾಳೆಯೇ ಬಾಯ್ಲರ್‌ಗೆ ಅಗ್ನಿಸ್ಪರ್ಶ
ಮಂಡ್ಯ, ಜೂನ್ 15: ಪ್ರಸಕ್ತ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯಾಚರಣೆಗೆ ಶುಕ್ರವಾರ (ಜೂ.16) ಸಾಂಕೇತಿಕ ಚಾಲನೆ ದೊರೆಯಲಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಂಪನಿಯ ಬಾಯ್ಲರ್‌ಗೆ ಬೆಂಕಿ ಹಾಕಲಾಗುತ್ತಿದ್ದು, ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳೊಳಗೆ ಕಬ್ಬು ಅರೆಯುವಿಕೆ ಕಾರ್ಯಾಚರಣೆ ವಿದ್ಯುಕ್ತವಾಗಿ ಆರಂಭವಾಗಲಿದೆ.
ಗುರುವಾರ (ಜೂ.15)ದಂದೇ ಮೈಷುಗರ್ ಬಾಯ್ಲರ್‌ಗೆ ಬೆಂಕಿ ಹಾಕುವ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವ ಸಂಪುಟ ಸಭೆ ಕರೆದಿದ್ದರಿಂದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಂಡಿತ್ತು. ಹಾಗಾಗಿ ಶುಕ್ರವಾರದಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಬಾಯ್ಲರ್‌ಗೆ ಪೂಜೆ ಸಲ್ಲಿಸಿ ಬೆಂಕಿ ಹಾಕಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ , ಜಿಲ್ಲೆಯ ಎಲ್ಲಾ ಶಾಸಕರು, ಕಂಪನಿಯ ಆಡಳಿತ ಮಂಡಳಿ ಅಧಿಕಾರಿಗಳು, ರೈತ ಮುಖಂಡರು ಹಾಜರಿರಲಿದ್ದಾರೆ.

ಪ್ರತಿ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಮೈಷುಗರ್ ಕಾರ್ಖಾನೆ ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ದೊರೆಯುತ್ತಿತ್ತು. ಈ ವರ್ಷ ಜೂನ್ ತಿಂಗಳಲ್ಲೇ ಕಬ್ಬು ಅರೆಯುವಿಕೆಗೆ ಚಾಲನೆ ಸಿಗುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಸರ್ಕಾರವು ಸಕಾಲದಲ್ಲಿ ಹಣ ಬಿಡುಗಡೆ ಮಾಡಿರುವುದರಿಂದ ಕಾರ್ಖಾನೆ ಅಬ್ಬು ಅರೆಯುವಿಕೆ ಹೇಗೆ ನಡೆಯಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
5.03 ಲಕ್ಷ ಟನ್ ಕಬ್ಬು ಒಪ್ಪಿಗೆ
ಮೈಸೂರು ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 5.03 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಂಡಿದೆ. ಈ ಬಾರಿ ಕಬ್ಬಿಗೆ ಕೊರತೆ ಎದುರಾಗುವ ಸಾಧ್ಯತೆಗಳೂ ಇವೆ. ನೀರಿನ ಅಭಾವದಿಂದ ಕಬ್ಬು ಗದ್ದೆಯಲ್ಲೇ ಒಣಗುತ್ತಿತ್ತು. ರೈತರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸುತ್ತಿದೆ. ಇನ್ನೂ ಕಬ್ಬು ಬೆಳೆಗೆ ಎರಡು-ಮೂರು ಕಟ್ಟು ನೀರಿನ ಅವಶ್ಯಕತೆ ಇದೆ.
ಕಬ್ಬಿಗೆ ಮುಗಿಬಿದ್ದಿರುವ ಖಾಸಗಿ ಕಾರ್ಖಾನೆಗಳು
ಮೈಷುಗರ್ ವ್ಯಾಪ್ತಿಯ ಕಬ್ಬಿನ ಮೇಲೆ ಹಿಂದಿನಿಂದಲೂ ಖಾಸಗಿ ಕಾರ್ಖಾನೆಗಳು ಹದ್ದಿನ ಕಣ್ಣಿಟ್ಟಿವೆ. ಜೂನ್ ಅಥವಾ ಜುಲೈ ತಿಂಗಳಲ್ಲೇ ಕಬ್ಬು ಅರೆಯುವಿಕೆ ಆರಂಭಿಸುವ ಖಾಸಗಿ ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿಯ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಎಫ್‌ಆರ್‌ಪಿ ದರಕ್ಕೆ ಕಬ್ಬನ್ನು ಕೊಂಡೊಯ್ಯುತ್ತಿವೆ.

ಮೈಷುಗರ್ ವ್ಯಾಪ್ತಿಯ ಕಬ್ಬು ಕೈಬಿಟ್ಟು ಹೋದರೆ ಕಾರ್ಖಾನೆ ನಡೆಸುವುದು ಖಾಸಗಿಯವರಿಗೂ ಕಷ್ಟವಾಗಲಿದೆ. ಇದೇ ಕಾರಣದಿಂದ ಸುಮಾರು ಎರಡು ದಶಕಗಳಿಂದ ಮೈಷುಗರ್ ಕಾರ್ಖಾನೆ ಸಮರ್ಥವಾಗಿ ಕಬ್ಬು ನುರಿಸದಂತೆ ತಡೆಯುವಲ್ಲಿ ಖಾಸಗಿ ಕಾರ್ಖಾನೆಯವರ ಪಾತ್ರವೂ ಮಹತ್ವದ್ದಾಗಿದೆ ಎಂದು ರೈತ ಮುಖಂಡರು ಹೇಳುವ ಮಾತಾಗಿದೆ.
ಮೈಷುಗರ್ ವ್ಯಾಪ್ತಿಯ ರೈತರು ಖಾಸಗಿ ಕಾರ್ಖಾನೆಯವರಿಗೆ ಕಬ್ಬನ್ನು ಕೊಡುವುದೇ ಆದಲ್ಲಿ ಎಫ್‌ಆರ್‌ಪಿ ದರದ ಮೇಲೆ 300 ರೂಪಾಯಿ ಹೆಚ್ಚು ಹಣಕ್ಕೆ ಬೇಡಿಕೆ ಇಡಬೇಕು. ಏಕೆಂದರೆ, ಸಕ್ಕರೆ ಮತ್ತು ಮೊಲಾಸಸ್ ದರ ಈಗ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ 31 ರೂಪಾಯಿ ನಿಗದಿಪಡಿಸಿದ್ದರೆ ಖಾಸಗಿ ಕಾರ್ಖಾನೆಯವರು ಪ್ರತಿ ಕೆಜಿ ಸಕ್ಕರೆಯನ್ನು 34 ರಿಂದ 35 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಪ್ರತಿ ಕ್ವಿಂಟಾಲ್ ಸಕ್ಕರೆ ಬೆಲೆ 200 ರಿಂದ 250 ರೂಪಾಯಿ ಹೆಚ್ಚಳವಾಗಿರುವುದರಿಂದ ಎಫ್‌ಆರ್‌ಪಿ ದರದ ಮೇಲೆ 300 ರೂಪಾಯಿ ಹೆಚ್ಚು ಹಣ ನೀಡುವಂತಹ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ.
ಇಲ್ಲದಿದ್ದರೆ ಮೈಷುಗರ್ ಕಾರ್ಖಾನೆ ಆರಂಭವಾಗುವವರೆಗೆ ಕಾದುನೋಡಿ. ಈಗ ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ಕಬ್ಬು ಬೆಳೆ ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಖಾಸಗಿಯವರಿಗೆ ಕಬ್ಬು ಕೊಟ್ಟು ನಷ್ಟಕ್ಕೆ ಗುರಿಯಾಗದಂತೆ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ರೈತರಲ್ಲಿ ಮನವಿ ಮಾಡಿದ್ದಾರೆ.
150 ರಿಂದ 170 ತಂಡ ಅವಶ್ಯಕ
ದಿನಕ್ಕೆ 2500 ರಿಂದ 3000 ಟನ್ ಕಬ್ಬು ಕಟಾವು ಮಾಡುವ ಜನರನ್ನು ಹೊಂದಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಕಳೆದ ವರ್ಷ ಕಬ್ಬು ಕಟಾವು ಮಾಡಲು ನೀಡಿದ್ದ ಗ್ಯಾಂಗ್‌ಮನ್‌ಗಳನ್ನು ಬದಲಾಯಿಸಲಾಗುತ್ತಿದೆ. ಸ್ಥಳೀಯವಾಗಿ 60 ರಿಂದ 70 ತಂಡ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 50 ತಂಡಗಳನ್ನು ಕರೆಸಲು ನಿರ್ಧರಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ ಪಾಟೀಲ್ ತಿಳಿಸಿದರು.
ಸ್ಥಳೀಯ ತಂಡಕ್ಕೆ ತಲಾ 1 ಲಕ್ಷ ರೂಪಾಯಿ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ ಬರುವ ತಂಡಗಳಿಗೆ ತಲಾ 2.50 ಲಕ್ಷ ರೂಪಾಯಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡಲು ನೀಡಿದ್ದ ಹಣದಲ್ಲಿ 72 ಲಕ್ಷ ರೂಪಾಯಿ ಬಾಕಿ ಇದೆ. ನಾಲ್ಕೈದು ವರ್ಷದ ಹಿಂದೆ ಕೊಟ್ಟಿದ್ದ ಹಣದಲ್ಲಿ 30 ಲಕ್ಷ ರೂಪಾಯಿ ಬಾಕಿ ವಸೂಲಿಯಾಗಬೇಕಿದೆ. ಕಂಪನಿಯವರು ಆ ಗ್ಯಾಂಗ್‌ಮನ್ ಸಂಪರ್ಕಿಸಿದ್ದು, ಅವರು ಹಣವನ್ನು ವಾಪಸ್ ತಂದುಕೊಡುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications