ಯಶ್-ದರ್ಶನ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಮಂಡ್ಯ, ಏಪ್ರಿಲ್ 08: ಮಂಡ್ಯ ರಾಜಕೀಯ ಕಣದಲ್ಲಿ ಆರೋಪ-ಪ್ರತ್ಯಾರೋಪ ಎಲ್ಲೆ ಮೀರಿ ಹೋಗಿದೆ. ಇಷ್ಟೆಲ್ಲಾ ಆದರೂ ನಿಖಿಲ್ ಕುಮಾರಸ್ವಾಮಿ ಎದುರಾಳಿಗಳ ಬಗ್ಗೆ ವೈಯಕ್ತಿಕವಾಗಿ ಆರೋಪ ಮಾಡಿರಲಿಲ್ಲ ಆದರೆ ಇಂದು ಅದು ಸಹ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯ ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಎದುರಾಳಿ ಸುಮಲತಾ ಆಗಲಿ ಅವರ ಪರ ಪ್ರಚಾರದಲ್ಲಿ ತೊಡಗಿರುವ ಯಶ್ ಹಾಗೂ ದರ್ಶನ್ ಅವರ ಬಗ್ಗೆಯಾಗಲಿ ಈ ವರೆಗೆ ಮಾತನಾಡಿರಲಿಲ್ಲ, ಅಂತೆಯೇ ಅವರೂ ಸಹ ನಿಖಿಲ್ ಬಗ್ಗೆಯಾಗಲಿ, ಕುಮಾರಸ್ವಾಮಿ ಅವರ ಬಗ್ಗೆಯಾಗಲಿ ಮಾತನಾಡಿರಲಿಲ್ಲ.

ಆದರೆ ನಿಖಿಲ್ ಅವರು ಇಂದು ಯಶ್ ಹಾಗೂ ದರ್ಶನ್ ಬಗ್ಗೆ ತುಟಿ ಬಿಚ್ಚಿದ್ದು, 'ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ನಾವು ಬಾಡಿಗೆ ಮನೆಯಲ್ಲಿದ್ದೆವು, ಆದರೆ ಮನೆ ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ನಿಖಿಲ್, ಯಶ್ ಬಗ್ಗೆ ಹೇಳಿದ್ದಾರೆ.

Mandya JDS candidate Nikhil Kumaraswamy lambasted on Yash and Darshan

ಯಶ್-ದರ್ಶನ್ ಅವರುಗಳಲ್ಲಿ ಸುಮಲತಾ ಅವರ ಹಿರಿ ಮಗ ಯಾರೋ ಕಿರಿ ಮಗ ಯಾರೋ ಗೊತ್ತಿಲ್ಲ, ಮಂಡ್ಯ ಜಿಲ್ಲೆಯ ಪರಿಚಯ ಇಲ್ಲದ ಅವರು, ಇಂದು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸಿಯಲ್ಲಿ ಕೂತು, ಛತ್ರಿ ಹಿಡಿದುಕೊಂಡು ಓಡಾಡುತ್ತಿರುವವರಿಗೆ ಬಿಸಿಲಿನಲ್ಲಿ ಓಡಾಡುವುದು ಕಷ್ಟವಾಗುತ್ತಿರಬಹುದು ಎಂದು ಕುಮಾರಸ್ವಾಮಿ ಅವರು ಹೇಳಿದ್ದರು ಆದರೆ ಅದಕ್ಕೆ ಅವರು ವ್ಯತಿರಿಕ್ತವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿರೋಧದ ಹೇಳಿಕೆ ಕೊಡುವಷ್ಟು ದೊಡ್ಡವರಾಗಿಬಿಟ್ಟರೇ ಇವರು ಎಂದು ನಿಖಿಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+