ಮಂಡ್ಯದ ಜನ ಸ್ವಾಭಿಮಾನಕ್ಕೆ ಮತಹಾಕ್ತಾರೆ: ಮತದಾನದ ಬಳಿಕ ಸುಮಲತಾ ವಿಶ್ವಾಸ

Recommended Video

      Lok Sabha Elections 2019 : ಮಂಡ್ಯದಲ್ಲಿ ಮೊದಲಬಾರಿಗೆ ತನಗೆ ತಾನು ಮತ ಚಲಾಯಿಸಿಕೊಂಡ ಸುಮಲತಾ

      ಮಂಡ್ಯ, ಏಪ್ರಿಲ್ 18: "ಮಂಡ್ಯದ ಜನ ಸ್ವಾಭಿಮಾನಕ್ಕೆ ಮತಹಾಕಿದ್ದಾರೆ ಎಂಬ ವಿಶ್ವಾಸವಿದೆ. ಮಂಡ್ಯದ ಜನರು ಬುದ್ಧಿವಂತರು, ಅವರು ಮೋಸಹೋಗೋಲ್ಲ" ಎಂದು ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.

      ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತಚಲಾಯಿಸಿದ ಬಳಿಕ ಸುಮಲತಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

      "ನನಗೇ ನಾನು ಮತಹಾಕಿಕೊಳ್ಳೋಕೆ ಸಂತಸವಾಗುತ್ತೆ. ಮೊದಲ ಬಾರಿಗೆ ನನಗೆ ನಾನೇ ಮತಹಾಕಿಕೊಳ್ಳುತ್ತಿದ್ದೇನೆ. ಒಬ್ಬ ಮಹಿಳೆಯಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹೋರಾಡಿದ್ದೇನೆ. ಈ ಹೋರಾಟ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ" ಎಂದು ಸುಮಲತಾ ಹೇಳಿದರು.

      ಮತದಾರರು ಮೂರ್ಖರಲ್ಲ!

      ಮತದಾರರು ಮೂರ್ಖರಲ್ಲ!

      ನನಗೆ ಅನ್ಯಾಯವಾಗೋಲ್ಲ ಎಂದುಕೊಂಡಿದ್ದೇನೆ. ಮಂಡ್ಯದ ಜನರು ಬುದ್ಧಿವಂತರು, ಮತದಾರರು ಯಾರೂ ಮೂರ್ಖರಲ್ಲ. ಅವರು ನಮಗಿಂತ ಬುದ್ಧಿವಂತರಾಗಿ ಮತಚಲಾಯಿಸುತ್ತಾರೆ. ನನಗೆ ಅನ್ಯಾಯವಾಗೋಲ್ಲ ಎಂದುಕೊಂಡಿದ್ದೇನೆ. ನನ್ನ ಪರವಾದ ಅಲೆ ಮಂಡ್ಯದಲ್ಲಿದೆ" ಎಂದು ಸುಮಲತಾ ಹೇಳಿದರು.

      ನೆಗೆಟಿವ್ ಪಾಲಿಟಿಕ್ಸ್!

      ನೆಗೆಟಿವ್ ಪಾಲಿಟಿಕ್ಸ್!

      "ನನ್ನ ವಿರುದ್ಧ ನೆಗೆಟಿವ್ ಪಾಲಿಟಿಕ್ಸ್ ಮಾಡಲಾಗಿದೆಯಾದರೂ ಜನರಿಗೆ ನನ್ನ ಬಗ್ಗೆ ಪಾಸಿಟಿವ್ ಭಾವನೆ ಇದೆ ಎಂಬ ನಂಬಿಕೆ ನನಗಿದೆ. ಇಷ್ಟು ದಿನದ ಹೋರಾಟಕ್ಕೆ ಇಂದು ಫಲ ಸಿಗಲಿದೆ. ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದಷ್ಟು ನಿರಾಳವಾಗುತ್ತಿದೆ" ಎಂದು ಅವರು ಹೇಳಿದರು.

      ಇವಿಎಂ ದೋಷ

      ಇವಿಎಂ ದೋಷ

      "ಇವಿಎಂ ದೋಷದ ಬಗ್ಗೆ ಹಲವು ದೂರುಗಳಿವೆ. ಅದನ್ನು ಚುನಾವಣಾ ಆಯೋಗ ಸರಿಪಡಿಸುತ್ತದೆ ಎಂದು ನಂಬಿದ್ದೇನೆ. ಚುನಾವಣಾ ಆಯೋಗದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಸುಮಲತಾ ಹೇಳಿದರು.

      ಸುಮಲತಾ-ನಿಖಿಲ್ ಮಾರಾಮಾರಿ!

      ಸುಮಲತಾ-ನಿಖಿಲ್ ಮಾರಾಮಾರಿ!

      ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮ್ಐತ್ರಿ ಅಭ್ಯರ್ಥಿ ಮುಖ್ಯಮಂತ್ರಿ ಎಚ್ ಡಿ ಕುಮಾಸರ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಮಂಡ್ಯದಲ್ಲಿ ಇಂದು(ಏ.18)ಮತದಾನ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ..

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+