ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50
Recommended Video
ಲೋಕಸಭೆ ಚುನಾವಣೆ 2019ರಲ್ಲಿ ಇಡೀ ಭಾರತದ ಗಮನ ಸೆಳೆದಿದ್ದ ಕರ್ನಾಟಕದ ಮಂಡ್ಯ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಗೆಲುವು ಸಾಧ್ಯವೇ? ಎಂಬ ಪ್ರಶ್ನೆಗೆ ತಕ್ಕಮಟ್ಟಿನ ಉತ್ತರ ಸಿಕ್ಕಿದೆ. ಸದ್ಯ ಈ ಸಮಯಕ್ಕೆ ಲಭ್ಯವಿರುವ ಮಾಹಿತಿಯಂತೆ ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿನ ಸಾಧ್ಯತೆ 50-50 ಎನ್ನಬಹುದು. ಎಕ್ಸಿಟ್ ಪೋಲ್ ಗಳ ಸರಾಸರಿ ಫಲಿತಾಂಶ ತೆಗೆದುಕೊಂಡರೆ ಸುಮಲತಾ ಅವರು ಗೆಲುವಿಗೆ ಹತ್ತಿರವಾಗಿದ್ದಾರೆ ಎನಿಸಿದರೂ ಅಂತಿಮ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಮಂಡ್ಯ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 22, ಜೆಡಿಎಸ್ 6 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಮಂಡ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟದ ಒಮ್ಮತದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸುಮಲತಾ ಅವರು ಭಾರಿ ಪೈಪೋಟಿ ನೀಡಿರುವುದು ಕಂಡು ಬಂದಿದೆ.

ನ್ಯೂಸ್ 18-ಐಪಿಎಸ್ಒಎಸ್, ಇಂಡಿಯಾ ಟುಡೇ-ಆಕ್ಸಿಸ್, ಟೈಮ್ಸ್ ನೌ- ವಿಎಂಆರ್, ನ್ಯೂಸ್ ಎಕ್ಸ್ -ನೇತಾ, ರಿಪಬ್ಲಿಟ್ ಭಾರತ್- ಜನ್ ಕಿ ಬಾತ್, ರಿಪಬ್ಲಿಕ್ ಟಿವಿ-ಸಿ ವೋಟರ್, ಎಬಿಪಿ-ಸಿಎಸ್ ಡಿಎಸ್, ಟುಡೇಸ್ ಚಾಣಕ್ಯ, ಇಂಡಿಯಾ ಟಿವಿ-ಸಿಎನ್ ಎಕ್ಸ್, ಎಬಿಪಿ ನ್ಯೂಸ್- ನೆಲ್ಸನ್ ಮುಂತಾದ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ವರದಿ ನೀಡಿವೆ.
ಕರ್ನಾಟಕದ 28 ಕ್ಷೇತ್ರಗಳ ಎಕ್ಸಿಟ್ ಪೋಲ್ ಫಲಿತಾಂಶ ಹೀಗಿದೆ: ಒಟ್ಟು ಲಭ್ಯವಿರುವ 8 ರಿಸಲ್ಟ್ ನಲ್ಲಿ ನಾಲ್ಕರಲ್ಲಿ ಸುಮಲತಾ ಗೆಲ್ಲುವ ಸಾಧ್ಯತೆ ಸಿಕ್ಕಿದೆ. ಮಿಕ್ಕಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳ ವರದಿಯಲ್ಲಿ ಸುಮಲತಾಗೆ ಗೆಲುವಿನ ಮುನ್ಸೂಚನೆ ಸಿಕ್ಕಿಲ್ಲ.
ನ್ಯೂಸ್ 18 -ಐಪಿಎಸ್ಒಎಸ್: ಎನ್ಡಿಎ 21-23, ಯುಪಿಎ 5-7
ರಿಪಬ್ಲಿಕ್ ಟಿವಿ ಸಿ ವೋಟರ್ : ಬಿಜೆಪಿ : 18, ಕಾಂಗ್ರೆಸ್-ಜೆಡಿಎಸ್ :9, ಇತರೆ 01(ಸುಮಲತಾ)
ಜನ್ ಕೀ ಬಾತ್ : ಬಿಜೆಪಿ 18-20, ಕಾಂಗ್ರೆಸ್-ಜೆಡಿಎಸ್ : 7-10, ಇತರೆ 0-01 (ಸುಮಲತಾ)
ಇಂಡಿಯಾ ಟಿವಿ ಸಮೀಕ್ಷೆ * ಬಿಜೆಪಿ 17 * ಕಾಂಗ್ರೆಸ್ 8 * ಜೆಡಿಎಸ್ 03 * ಇತರೆ 00
ಟೈಮ್ಸ್ ನೌ ವಿಎಂಆರ್ ಸಮೀಕ್ಷೆ * ಎನ್‌ಡಿಎ 21 * ಯುಪಿಎ 7 * ಇತರರು 0
ಮೈ ಆಕ್ಸಿಸ್ * ಎನ್‌ಡಿಎ 23 * ಯುಪಿಎ 4 * ಇತರರು 1 (ಸುಮಲತಾ)
ನ್ಯೂಸ್ ನೇಷನ್ * ಎನ್‌ಡಿಎ 18 * ಯುಪಿಎ 10 * ಇತರರು 0
ಇಂಡಿಯಾ ಟುಡೆ-ಆಕ್ಸಿಸ್ * ಬಿಜೆಪಿ 21-25 * ಕಾಂಗ್ರೆಸ್ - ಜೆಡಿಎಸ್ 03-06 * ಇತರರು 01 (ಸುಮಲತಾ)
ಚಾಣಾಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ 23 ಮೈತ್ರಿಕೂಟ 5 ಇತರರು 00
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications