'ಅಂಬ್ರೀಷಣ್ಣಂಗೆ ಒಬ್ಬರೇ ಹೆಂಡತಿ, ಸುಮಲತಾ ವಿಚಾರದಲ್ಲಿ ಗೊಂದಲ ಇಲ್ಲ'
Recommended Video

ಮದ್ದೂರು (ಮಂಡ್ಯ), ಏಪ್ರಿಲ್ 9: ಅಂಬ್ರೀಷಣ್ಣಂಗೆ ಇರೋದು ಒಬ್ಬರೇ ಹೆಂಡತಿ. ಎಷ್ಟು ಮಂದಿ ಸುಮಲತಾ ಎಲೆಕ್ಷನ್ ಗೆ ನಿಂತರೂ ಜನರಿಗೆ ಯಾವ ಗೊಂದಲವೂ ಆಗೋದಿಲ್ಲ ಎಂದು ಚಿತ್ರ ನಟ ಯಶ್ ಮಂಗಳವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯಲ್ಲಿ ಹೇಳಿದ್ದಾರೆ. ಅಲ್ಲಿ ಅವರು ಪಕ್ಷೇತರ ಆಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನು ಮಾಧ್ಯಮದವರ ಜತೆ ಮಾತನಾಡಿದ ಯಶ್, ಸುಮಲತಾ ಅವರ ಬಗ್ಗೆ ಜನರಿಗೆ ಗೊತ್ತಿದೆ. ಯಾವುದೇ ಗೊಂದಲಕ್ಕೆ ಈಡಾಗದೇ ಮತ ಕೊಡುತ್ತಾರೆ. ಯಾರೋ ಕೆಲವರು ಜನರ ಮುಗ್ಧತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಬೇರೇನೇನೋ ಮಾತನಾಡುತ್ತಾರೆ ಎಂದು ಯಶ್ ಆರೋಪ ಮಾಡಿದ್ದಾರೆ.
ಪ್ರಮುಖ ಅಭ್ಯರ್ಥಿಗಳಾದ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿಯಾದ ಸುಮಲತಾ ಅವರನ್ನು ಎದುರುಬದುರು ಕೂಡಿಸಿ, ಚರ್ಚೆ ನಡೆಸಲು ಅವಕಾಶ ಮಾಡಿಸಬೇಕು. ಆ ಮೂಲಕ ಜನರು ಯಾರಿಗೆ ಮತ ನೀಡಬೇಕು ಎಂದು ನಿರ್ಧರಿಸಲು ಅನುಕೂಲ ಆಗುತ್ತದೆ ಎಂದು ಯಶ್ ಅಭಿಪ್ರಾಯಪಟ್ಟರು.

ಆದರೆ, ಅಂಬ್ರೀಷಣ್ಣಂಗೆ ಒಬ್ಬರೇ ಹೆಂಡತಿ ಅನ್ನೋ ಮೂಲಕ ಅವರು ಯಾರಿಗೆ ಟಾಂಗ್ ನೀಡಿದರು ಎಂಬುದು ಚರ್ಚೆಯ ವಿಷಯವಾಯಿತು.












Click it and Unblock the Notifications